ಆಲಗೂಡದಲ್ಲಿ ಗೋಪಾಳ ಕಾಲಾ

ಬಸವಕಲ್ಯಾಣ: ಆಲಗೂಡ ಗ್ರಾಮದಲ್ಲಿ ಔಸಾ ಸಂಸ್ಥಾನದಿಂದ ಒಂದು ವಾರ ನಡೆದ ೨೨೭ನೇ ಶ್ರೀ ನಾಥಷಷ್ಟಿ ಮಹೋತ್ಸವ ಹಾಗೂ ಗ್ರಾಮದ ಐತಿಹಾಸಿಕ ಶ್ರೀ ಏಕನಾಥ ಮಂದಿರದಲ್ಲಿ ಅಖಂಡ ವೀಣಾ ವಾದನ ನಾಮ ಸ್ಮರಣೆಯ ಶತಮಾನೋತ್ಸವ ಸಮಾರಂಭಕ್ಕೆ ಭಕ್ತಿ-ಶೃದ್ಧೆಯ ನಡುವೆ ಬುಧವಾರ ತೆರೆ ಕಂಡಿತು.

ಬೆಳಗ್ಗೆ ಶ್ರೀ ಜ್ಞಾನೇಶ್ವರ ಸಾಮೂಹಿಕ ಪಾರಾಯಣದ ಮಂಗಲ ಕಾರ್ಯಕ್ರಮ ನಡೆದರೆ, ಮಧ್ಯಾಹ್ನ ಕೀರ್ತನೆ, ದಿಂಡಿ, ಪಲ್ಲಕಿ ಉತ್ಸವ ನಡೆದ ನಂತರ ಸಂಜೆ ಗೋಪಾಳ ಕಾಲಾ ಕಾರ್ಯಕ್ರಮ ಜರುಗಿತು. ಭಕ್ತರ ಜೈಘೋಷಗಳ ಮಧ್ಯೆ ಪೂಜೆ ನೆರವೇರಿಸುವ ಮೂಲಕ ಹಾರಕೂಡನ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಚಾಲನೆ ನೀಡಿದರು.

ಗ್ರಾಮ ಸೇರಿ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಅಪೂರ್ವ ಘಳಿಗೆಗೆ ಸಾಕ್ಷಿಯಾದರು. ಔಸಾದ ಶ್ರೀ ಗುರುಬಾಬಾ ಮಹಾರಾಜರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಶರಣು ಸಲಗರ, ಮಾಜಿ ಎಂಎಲ್ಸಿ ವಿಜಯಸಿಂಗ್ ಹಾಗೂ ಪ್ರಮುಖರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗ್ರಾಮದ ಗಣ್ಯರು ಭಾಗವಹಿಸಿದ್ದರು.

ಔಸಾದ ಶ್ರೀ ಗುರುಬಾಬಾ ಮಹಾರಾಜ ಹಾಗೂ ಪಂಢರಪುರ ವಿಠ್ಠಲ್-ರುಕ್ಮಿಣಿ ದೇವಸ್ಥಾನ ಕಮಿಟಿಯ ಸಹ ಅಧ್ಯಕ್ಷ ಶ್ರೀ ಗಹಿನಾಥ ಮಹಾರಾಜರ ನೇತೃತ್ವದಲ್ಲಿ ಒಂದು ವಾರ ಪ್ರತಿ ನಿತ್ಯ ನಿರಂತರವಾಗಿ ೨೪ ಗಂಟೆಗಳ ಕಾಲ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ಕಾಕಡ, ವಿಷ್ಣು ಸಹಸ್ರನಾಮ, ಗ್ರಂಥರಾಜ ಶ್ರೀ ಜ್ಞಾನೇಶ್ವರಿ ಸಾಮೂಹಿಕ ಪಾರಾಯಣ, ಶ್ರೀ ನಾಥ ಸ್ಥಾಪನೆಯ ಪೂಜೆ, ಭಜನೆ, ಆರತಿ, ದಿಂಡಿ ನಡೆದರೆ, ಮಧ್ಯಾಹ್ನ ಹರಿಪಾಠ, ಸಂಜೆ ಚಕ್ರಿ ಭಜನೆ ಹಾಗೂ ಜ್ಞಾನೇಶ್ವರಿ ಪ್ರವಚನ, ರಾತ್ರಿ ಕೀರ್ತನೆ, ಜಾಗರಣೆ ಜರುಗಿತು.

Share This Article

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…

World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು)…

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…