ಡರ್ಬನ್: ಪ್ರವಾಸಿ ಶ್ರೀಲಂಕಾ ತಂಡ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ತನ್ನ ಅತಿ ಕನಿಷ್ಠ ಮೊತ್ತಕ್ಕೆ ಸರ್ವಪತನ ಕಂಡಿದೆ. ವೇಗಿ ಮಾರ್ಕೋ ಜಾನ್ಸೆನ್ (13ಕ್ಕೆ 7) ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಹಿನ್ನಡೆ ಅನುಭವಿಸಿದೆ.
ಕಿಂಗ್ಸ್‌ಮೀಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ದ.ಆಫ್ರಿಕಾ ತಂಡದ ಮೊದಲ ಇನಿಂಗ್ಸ್‌ನ 191 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಶ್ರೀಲಂಕಾ, ಕೇವಲ 83 ಎಸೆತ ಅಂದರೆ 13.5 ಓವರ್‌ಗಳಲ್ಲಿಯೇ 42 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಶ್ರೀಲಂಕಾ ತಂಡದ ಕನಿಷ್ಠ ಮೊತ್ತ ಎನಿಸಿದೆ. 1994ರಲ್ಲಿ ಪಾಕಿಸ್ತಾನ ಎದುರು 71 ರನ್‌ಗೆ ಆಲೌಟ್ ಆಗಿದ್ದು ಹಿಂದಿನ ಕನಿಷ್ಠ. 149 ರನ್ ಮುನ್ನಡೆಯೊಂದಿಗೆ 2ನೇ ಸರದಿ ಆರಂಭಿಸಿರುವ ಆಫ್ರಿಕಾ 2ನೇ ದಿನದಂತ್ಯಕ್ಕೆ 23.1 ಓವರ್‌ಗಳಲ್ಲಿ 2 ವಿಕೆಟ್‌ಗೆ 82 ರನ್‌ಗಳಿಸಿದ್ದು, ಒಟ್ಟಾರೆ 231 ರನ್ ಮುನ್ನಡೆಯಲ್ಲಿದೆ.
2. ಶ್ರೀಲಂಕಾ ತಂಡ 2ನೇ ಅತಿ ಕಡಿಮೆ ಎಸೆತಗಳಲ್ಲಿ ಟೆಸ್ಟ್ ಇನಿಂಗ್ಸ್‌ನಲ್ಲಿ ಆಲೌಟ್ ಆದ ತಂಡವೆನಿಸಿತು. ಇಂಗ್ಲೆಂಡ್ ಎದುರು 1924ರಲ್ಲಿ ದ.ಆಫ್ರಿಕಾ ತಂಡ 75 ಎಸೆತಗಳಲ್ಲಿ (12.3 ಓವರ್) ಆಲೌಟ್ ಆಗಿರುವುದು ಕನಿಷ್ಠವಾಗಿದೆ.
42. ಐಸಿಸಿ ಡಬ್ಲುೃಟಿಸಿಯಲ್ಲಿ 2ನೇ ಕನಿಷ್ಠ ಮೊತ್ತಕ್ಕೆ ಶ್ರೀಲಂಕಾ ಆಲೌಟ್ ಆಯಿತು. ಭಾರತ 2020ರಲ್ಲಿ ಆಸೀಸ್ ಎದುರು 36 ರನ್‌ಗೆ ಆಲೌಟ್ ಆಗಿದ್ದು ಅತಿ ಕನಿಷ್ಠ.
7. ಮಾರ್ಕೋ ಜಾನ್ಸೆನ್ ಟೆಸ್ಟ್ ಇನಿಂಗ್ಸ್‌ನಲ್ಲಿ ತಾನೆಸೆದ ಏಳು ಓವರ್‌ಗಳಲ್ಲಿಯೇ 7 ವಿಕೆಟ್ ಪಡೆದ 2ನೇ ವೇಗಿ. ಆಸ್ಟ್ರೇಲಿಯಾ ಹ್ಯೂಗ್ ಟ್ರಂಬಲ್ (1904) ಮೊದಲಿಗ.