ಶ್ರೀಲಂಕಾ ಸರಣಿ ಬಾಂಬ್​​​ ಸ್ಪೋಟ: ಮಂಗಳೂರಿನ ಮಹಿಳೆ ಸಾವು, ಪಾರಾದ ಕನ್ನಡದ ನಟಿ

ಕೊಲಂಬೊ: ಶ್ರೀಲಂಕಾದಲ್ಲಿ ಸರಣಿ ಸ್ಫೋಟದಲ್ಲಿ ಮಂಗಳೂರಿನ ಬೈಕಂಪಾಡಿ ಮೂಲದ ಮಹಿಳೆ ಮೃತಪಟ್ಟಿದ್ದಾರೆ. ಮಂಗಳೂರಿನ ಅಬ್ದುಲ್​​​​​​​ ಕುಕ್ಕಾಡಿ ಎಂಬುವರ ಪತ್ನಿ ರಝೀನಾ ಖಾದರ್​​(58) ಮೃತ ದುರ್ದೈವಿ.


ಮುಂಬೈನಲ್ಲಿ ನೆಲಸಿದ್ದ ಅಬ್ದುಲ್​​ ಕುಟುಂಬ ಕೊಲಂಬೊದಲ್ಲಿದ್ದ ಸಂಬಂಧಿಕರನ್ನು ಭೇಟಿ ಮಾಡಲು ದಂಪತಿ ತೆರಳಿದ್ದರು. ಶಾಂಗ್ರಿಲಾ ಹೋಟೆಲ್​​ನಲ್ಲಿ ತಂಗಿದ್ದರು. ಅಬ್ದುಲ್​​​​​​​​​ ಕುಕ್ಕಾಡಿ ಅವರು ಪತ್ನಿಯನ್ನು ಹೋಟೆಲ್​​​ನಲ್ಲಿ ಬಿಟ್ಟು ಕೆಲಸದ ಮೇಲೆ ದುಬೈಗೆ ಹೋಗಿದ್ದರು. ಆದರೆ ಇಂದು ಹೋಟೆಲ್​​​ನಲ್ಲಿ ನಡೆದ ಬಾಂಬ್​​​ ಸ್ಪೋಟದಲ್ಲಿ ರಝೀನಾ ಮೃತಪಟ್ಟಿದ್ದಾರೆ.


ಕ್ಷಣಾರ್ಧದಲ್ಲಿ ಅಪಾಯದಿಂದ ಪಾರಾದ ರಾಧಿಕ
ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್​​​ ಸ್ಟೋಟದಿಂದ ಕ್ಷಣಾರ್ಧದಲ್ಲಿ ಕನ್ನಡದ ನಟಿ ರಾಧಿಕ ಶರತ್​ ಕುಮಾರ್​ ಪಾರಾಗಿದ್ದಾರೆ. ಕೆಲಸದ ನಿಮಿತ್ತ ಕೊಲಂಬೊದ ಸಿನ್ಮಾಮನ್​​ ಗ್ರ್ಯಾಂಡ್​​​ ಹೋಟೆಲ್​​​ನಲ್ಲಿ ರಾಧಿಕ ತಂಗಿದ್ದರು. ಬಾಂಬ್​​​ ಸ್ಪೋಟವಾಗುವುದಕ್ಕಿಂತ ಕೆಲವೇ ನಿಮಿಷಗಳ ಮುಂದಷ್ಟೇ ಹೋಟೆಲ್​​​​​​​ನಿಂದ ಹೊರಟಿದ್ದರು. ಈ ಘಟನೆ ಬಗ್ಗೆ ತಮ್ಮ ಟ್ವಿಟರ್​​ ಖಾತೆಯಲ್ಲಿ ಜಸ್ಟ್​​​ ಮಿಸ್​​​​ ಫಾರ್​​ ಬಾಂಬ್​​ ಬ್ಲಾಸ್ಟ್​​ ಎಂದು ಬರೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​​)