ಅಬುಧಾಬಿ: ಪತುಮ್ ನಿಸ್ಸಂಕ (61), ವಾನಿಂದು ಹಸರಂಗ (71) ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ನಿರ್ವಹಣೆಯ ಬಲದಿಂದ ಶ್ರೀಲಂಕಾ ತಂಡ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನಲ್ಲಿ ಐರ್ಲೆಂಡ್ ವಿರುದ್ಧ 70 ರನ್‌ಗಳಿಂದ ಬೃಹತ್ ಗೆಲುವು ಸಾಧಿಸಿದೆ. ಈ ಸತತ 2ನೇ ಜಯದೊಂದಿಗೆ ಲಂಕಾ ತಂಡ ಎ ಗುಂಪಿನಿಂದ ಸೂಪರ್-12ಕ್ಕೆ ಪ್ರವೇಶ ಖಚಿತಪಡಿಸಿಕೊಂಡಿದೆ. ಇನ್ನು ಐರ್ಲೆಂಡ್-ನಮೀಬಿಯ ನಡುವಿನ ಅಂತಿಮ ಪಂದ್ಯದಲ್ಲಿ ಗೆದ್ದ ತಂಡ ಗುಂಪಿನಿಂದ 2ನೇ ಸ್ಥಾನಿಯಾಗಿ ಮುಂದಿನ ಹಂತಕ್ಕೇರಲಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಲಂಕಾ 7 ವಿಕೆಟ್‌ಗೆ 171 ರನ್ ಪೇರಿಸಿತು. ಪ್ರತಿಯಾಗಿ ಐರ್ಲೆಂಡ್ 18.3 ಓವರ್‌ಗಳಲ್ಲಿ 101 ರನ್‌ಗೆ ಸರ್ವಪತನ ಕಂಡಿತು.
ಶ್ರೀಲಂಕಾ: 7 ವಿಕೆಟ್‌ಗೆ 171 (ನಿಸ್ಸಂಕ 61, ಚಾಂಡಿಮಲ್ 6, ಹಸರಂಗ 71, ಶನಕ 21*, ಲಿಟಲ್ 23ಕ್ಕೆ 4, ಅಡೇರ್ 35ಕ್ಕೆ 2). ಐರ್ಲೆಂಡ್: 18.3 ಓವರ್‌ಗಳಲ್ಲಿ 101 (ಬಲ್ಬಿರ್ನಿ 41, ಕ್ಯಾಂಪರ್ 24, ತೀಕ್ಷಣ 17ಕ್ಕೆ 3, ಲಹಿರು 22ಕ್ಕೆ 2, ಕರುಣರತ್ನೆ 27ಕ್ಕೆ 2).
Sri Lanka are through to the Super 12 stage 💪#T20WorldCup | #SLvIRE | https://t.co/LwHUwUV6A9 pic.twitter.com/39npZ0k73S
— ICC (@ICC) October 20, 2021
ಡಚ್ಚರಿಗೆ ನಮೀಬಿಯ ಶಾಕ್
ಡೇವಿಡ್ ವೈಸ್ (66*ರನ್, 40 ಎಸೆತ, 4 ಬೌಂಡರಿ, 5 ಸಿಕ್ಸರ್) ದಿಟ್ಟ ಬ್ಯಾಟಿಂಗ್ ನಿರ್ವಹಣೆಯ ಬಲದಿಂದ ನಮೀಬಿಯ ತಂಡ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನಲ್ಲಿ ನೆದರ್ಲೆಂಡ್ಸ್ ವಿರುದ್ಧ 6 ವಿಕೆಟ್‌ಗಳಿಂದ ಜಯಿಸಿದೆ. ಈ ಮೂಲಕ ನಮೀಬಿಯ ತಂಡ ಸೂಪರ್-12 ಹಂತಕ್ಕೇರುವ ಆಸೆ ಜೀವಂತವಿರಿಸಿಕೊಂಡಿದೆ. ನಮೀಬಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾಕ್ಕೆ ಶರಣಾಗಿತ್ತು. ಸತತ 2ನೇ ಸೋಲಿನಿಂದ ಡಚ್ಚರು ಟೂರ್ನಿಯಿಂದ ಹೊರಬಿದ್ದರು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ನೆದರ್ಲೆಂಡ್ಸ್ 4 ವಿಕೆಟ್‌ಗೆ 164 ರನ್ ಪೇರಿಸಿತು. ಪ್ರತಿಯಾಗಿ ನಮೀಬಿಯ 19 ಓವರ್‌ಗಳಲ್ಲಿ 4 ವಿಕೆಟ್‌ಗೆ 166 ರನ್ ಪೇರಿಸಿ ಜಯಿಸಿತು. 70 ಎಸೆತಗಳಲ್ಲಿ 113 ರನ್ ಬೇಕಿದ್ದಾಗ ಕಣಕ್ಕಿಳಿದ ಡೇವಿಡ್ ವೈಸ್, 1 ಓವರ್ ಬಾಕಿ ಇರುವಂತೆಯೇ ಗೆಲುವು ತಂದರು. ವೈಸ್ 2016ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಆಡಿದ್ದರು.
ನೆದರ್ಲೆಂಡ್ಸ್: 4 ವಿಕೆಟ್‌ಗೆ 164 (ಮ್ಯಾಕ್ಸ್ ಒಡೊವ್ಡ್ 70, ಅಕೆರ್‌ಮನ್ 35, ಎಡ್ವರ್ಡ್ಸ್ 21*, ಫ್ರಿಲಿಂಕ್ 36ಕ್ಕೆ 2). ನಮೀಬಿಯ: 19 ಓವರ್‌ಗಳಲ್ಲಿ 4 ವಿಕೆಟ್‌ಗೆ 166 (ಎರಾಸ್ಮಸ್ 32, ಡೇವಿಡ್ ವೈಸ್ 66*, ಕ್ಲಾಸೆನ್ 14ಕ್ಕೆ 1, ಸೀಲರ್ 8ಕ್ಕೆ 1).
VIDEO: ಪಾಂಡ್ಯ ಬೌಲಿಂಗ್ ಮಾಡದಿದ್ದರೇನಂತೆ? ಭಾರತಕ್ಕೆ ಸಿಕ್ಕರು 6ನೇ ಬೌಲರ್!