More

    ವಿಜಯವಾಣಿ ಸಿನಿಮಾ ವಿಮರ್ಶೆ: ಸ್ನೇಹ-ಪ್ರೀತಿಯ ಮಧ್ಯೆ ತ್ಯಾಗದ ಸಂದೇಶ

    ಬೆಂಗಳೂರು: ಪುರಾಣ ಕಾಲದ ಭರತ-ಬಾಹುಬಲಿ ಪಾತ್ರಗಳ ಹಿನ್ನೆಲೆಯಲ್ಲಿ ಆಧುನಿಕ ಭರತ-ಬಾಹುಬಲಿಗಳ ಅವಾಂತರಗಳನ್ನು ಹೇಳುತ್ತ ಮನರಂಜನೆಯ ಜತೆಗೇ ತ್ಯಾಗದ ಮಹತ್ವ ತಿಳಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮಂಜು ಮಾಂಡವ್ಯ.

    ವಿಜಯವಾಣಿ ಸಿನಿಮಾ ವಿಮರ್ಶೆ: ಸ್ನೇಹ-ಪ್ರೀತಿಯ ಮಧ್ಯೆ ತ್ಯಾಗದ ಸಂದೇಶಇನ್ನೊಬ್ಬರ ಕಾಲೆಳೆಯುತ್ತ, ಅವರಿವರಿಂದಲೇ ತಮ್ಮ ಅನುಕೂಲ ಕಂಡುಕೊಳ್ಳುತ್ತ ಆಧುನಿಕ ಭರತ-ಬಾಹುಬಲಿ ಆಗಿ ಇಲ್ಲಿ ಮಂಜು ಮಾಂಡವ್ಯ ಹಾಗೂ ಚಿಕ್ಕಣ್ಣ ಪರದೆ ತುಂಬ ಆವರಿಸಿಕೊಳ್ಳುತ್ತಾರೆ.

    ‘ಇನ್ನೊಬ್ಬರನ್ನು ಯೂಸ್ ಮಾಡಿಕೊಂಡು ಬದುಕುವ ಬದಲು ಇನ್ನೊಬ್ಬರಿಗೆ ಯೂಸ್ ಆಗುವಂತೆ ಬದುಕಬೇಕು’ ಎಂದು ಚಿತ್ರದಲ್ಲಿ ಸಂಭಾಷಣೆಯೊಂದು ಬರುವಷ್ಟರಲ್ಲಿ ಸಿನಿಮಾದ ಕಥೆಯಲ್ಲಿ ಒಂದು ಟ್ವಿಸ್ಟ್ ಕಾಣಿಸಿಕೊಳ್ಳುತ್ತದೆ. ಇಬ್ಬರ ಮನಸ್ಸಲ್ಲೂ ಒಂದು ಬದಲಾವಣೆ ಉಂಟಾಗುತ್ತದೆ. ಇದಕ್ಕೆ ಕಾರಣ ಪುನರ್ಜನ್ಮದ ಬಗ್ಗೆ ತಿಳಿಯುವ ಸಲುವಾಗಿ ವಿದೇಶದಿಂದ ಭಾರತಕ್ಕೆ ಬರುವ ‘ಶ್ರೀ’. ಇಲ್ಲಿ ಸಾರಾ ಹರೀಶ್ ‘ಶ್ರೀ’ ಪಾತ್ರಕ್ಕೆ ಸೂಕ್ತ ಆಯ್ಕೆ. ಮಾಡ್​ನೆಸ್ ಹಾಗೂ ತಮ್ಮ ಹೈ-ಫೈ ಭಾಷೆಯಿಂದಲೇ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಸಾರಾ. ಶ್ರೀನಿವಾಸಮೂರ್ತಿ, ಭವ್ಯಾ, ಅಚ್ಯುತ್​ಕುಮಾರ್ ಪಾತ್ರಕ್ಕೆ ತಕ್ಕ ನ್ಯಾಯ ಸಲ್ಲಿಸಿದ್ದಾರೆ.

    ವಿಜಯವಾಣಿ ಸಿನಿಮಾ ವಿಮರ್ಶೆ: ಸ್ನೇಹ-ಪ್ರೀತಿಯ ಮಧ್ಯೆ ತ್ಯಾಗದ ಸಂದೇಶವಿಜಯವಾಣಿ ಸಿನಿಮಾ ವಿಮರ್ಶೆ: ಸ್ನೇಹ-ಪ್ರೀತಿಯ ಮಧ್ಯೆ ತ್ಯಾಗದ ಸಂದೇಶಹುಡುಗಾಟಿಕೆ, ಬೇಜವಾಬ್ದಾರಿ, ಪ್ರೀತಿ, ಪ್ರೇಮ, ತ್ಯಾಗ, ದೇಶಭಕ್ತಿ, ಕಿರಿಯರ ಆತಂಕ, ಹಿರಿಯರ ಆಸರೆ.. ಹೀಗೆ ಹಲವು ವಿಷಯಗಳನ್ನು ಒಂದಕ್ಕೊಂದು ಪೋಣಿಸಿ ಅಂತಿಮವಾಗಿ ಆ ಬಾಹುಬಲಿಯ ತ್ಯಾಗವೇ ಮಿಗಿಲು ಎಂಬಂಥ ಸಂದೇಶ ಪರೋಕ್ಷವಾಗಿ ನೀಡುತ್ತಾರೆ ನಿರ್ದೇಶಕರು. ನಿರ್ದೇಶಕರೇ ಇಲ್ಲಿ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಂಡಿರುವುದರಿಂದ ಭಾವುಕ ದೃಶ್ಯಗಳಲ್ಲಿ ಇನ್ನಷ್ಟು ಮಾಗಬೇಕಾಗಿದ್ದರೂ, ಹುಡುಗಾಟಿಕೆಯ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಗಾಯನ, ನಟನೆ, ನಿರ್ದೇಶನ.. ಹೀಗೆ ಹಲವು ವಿಭಾಗಗಳಲ್ಲಿ ಕೈಆಡಿಸುವ ಮೂಲಕ ಒನ್​ವ್ಯಾನ್ ಶೋ ತೋರಿರುವ ಮಂಜು, ಅಲ್ಲಲ್ಲಿ ಕೆಲವು ಪಂಚ್ ಡೈಲಾಗ್ ಕೂಡ ಬಿಟ್ಟಿದ್ದಾರೆ. ಚಿಕ್ಕಣ್ಣ ಆಗಾಗ್ಗೆ ನಗೆಯುಕ್ಕಿಸಿದರೆ, ಶ್ರುತಿ ಪ್ರಕಾಶ್ ಹಾಡೊಂದರಲ್ಲಿ ಮೈಕೈ ಕುಣಿಸಿ ಸಿನಿಮಾ ಗ್ಲಾಮರ್ ಹೆಚ್ಚಿಸಿದ್ದಾರೆ.

    ಅಂತಿಮವಾಗಿ ಪುನರ್ಜನ್ಮದ ಹಿನ್ನೆಲೆ ತಿಳಿಯಲು ಬರುವ ಹುಡುಗಿಗೆ ವಿದೇಶದಲ್ಲಿರುವ ತಂದೆ-ತಾಯಿ ತನ್ನ ನಿಜವಾದ ತಂದೆ-ತಾಯಿ ಅಲ್ಲ ಎಂಬುದು ತಿಳಿಯುತ್ತದೆ. ಬಳಿಕ ಪುನರ್ಜನ್ಮ ಬಿಟ್ಟು ಈ ಜನ್ಮದ ಹಿನ್ನೆಲೆ ತಿಳಿಯಲು ಹೊರಟ ಆಕೆಗೆ ನಿಜವಾದ ಅಪ್ಪ-ಅಮ್ಮ ಸಿಗುತ್ತಾರಾ? ಎಂಬುದೇ ಈ ಚಿತ್ರದಲ್ಲಿನ ಕೌತುಕದ ಅಂಶ. ಈ ಮಧ್ಯೆ ಸಂಬಂಧ-ತ್ಯಾಗದ ಮಹತ್ವ ಸಾರುವ ‘ಶ್ರೀಭರತ ಬಾಹುಬಲಿ’ಯಲ್ಲಿ ಮನರಂಜನೆಗಂತೂ ಕೊರತೆ ಇಲ್ಲ.

    | ರವಿಕಾಂತ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts