Sreeleela: ಕನ್ನಡ, ತೆಲುಗು ನಂತರ ಬಾಲಿವುಡ್ ಅಂಗಳಕ್ಕೆ ಹಾರಿರುವ ಕನ್ನಡದ ನಟಿ ಶ್ರೀಲೀಲಾ, ಸದ್ಯ ಹಲವು ಬಹುನಿರೀಕ್ಷಿತ ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ.
ಇದನ್ನೂ ಓದಿ: ಶಾಸನ, ವಚನ, ಸಂವಿಧಾನಯುಕ್ತ ವೀರಶೈವ ಲಿಂಗಾಯತ ಅಪಸ್ವರಕ್ಕೆ ಉಜ್ಜಯಿನಿ, ಶ್ರೀಶೈಲ, ಕಾಶಿ ಜಗದ್ಗುರುಗಳ ಖಂಡನೆ
‘ರಾಬಿನ್ಹುಡ್’, ‘ಮಾಸ್ ಜಾತ್ರಾ’, ‘ಉಸ್ತಾದ್ ಭಗತ್ ಸಿಂಗ್’ ಮತ್ತು ನಟ ಶಿವಕಾರ್ತಿಕೆಯನ್ ಅಭಿನಯಿಸಲಿರುವ ‘ಎಸ್ಕೆ25’ ಚಿತ್ರಗಳಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳು 2025ರಲ್ಲಿ ತೆರೆಕಾಣುವ ಸೂಚನೆಗಳು ಸಿಕ್ಕಿದ್ದೇ ಆದರೂ ಬಿಡುಗಡೆಯ ಅಧಿಕೃತ ದಿನಾಂಕ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ.
ಪ್ರಸ್ತುತ ಟಾಲಿವುಡ್ನ ದಿಗ್ಗಜ ನಟ, ಮೆಗಾಸ್ಟಾರ್ ಚಿರಂಜೀವಿ ‘ವಿಶ್ವಂಭರ’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರವು ಇದೇ ಆಗಸ್ಟ್‌ನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಚಿತ್ರೀಕರಣ ನಡೆಯುತ್ತಿರುವ ಜಾಗಕ್ಕೆ ಎಂಟ್ರಿ ಕೊಟ್ಟಿರುವ ಶ್ರೀಲೀಲಾ, ಚಿರಂಜೀವಿ ಅವರನ್ನು ಭೇಟಿಯಾಗಿದ್ದಾರೆ. ಈ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡಿವೆ.
ಇದನ್ನೂ ಓದಿ: ಕೊರಿಯನ್ನರು, ಚೀನಿಯರು, ಜಪಾನಿಯರು ರಾತ್ರಿ ಹೊತ್ತು ಸ್ನಾನ ಮಾಡೋದೇಕೆ?ಅಚ್ಚರಿಯ ಮಾಹಿತಿ ಇಲ್ಲಿದೆ..! Bathing
ನಿನ್ನೆ (ಮಾ.08) ಮಹಿಳಾ ದಿನಾಚರಣೆಯ ಅಂಗವಾಗಿ ವಿಶ್ವಂಭರ ಚಿತ್ರದ ಸೆಟ್‌ನಲ್ಲಿದ್ದ ಚಿರಂಜೀವಿ, ನಟಿ ಶ್ರೀಲೀಲಾ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ದುರ್ಗಾ ದೇವಿಯ ಮುಖವಿರುವ ಬೆಳ್ಳಿ ಶಂಖವನ್ನು ನಟಿಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ಹಲವರ ಕುತೂಹಲಕ್ಕೂ ಕಾರಣವಾಗಿದೆ. ವಿಶ್ವಂಭರ ಸೆಟ್ನಲ್ಲಿ ಶ್ರೀಲೀಲಾ ತೊಟ್ಟಿರುವ ಉಡುಗೆ ನೋಡಿದರೆ, ಅವರೂ ಸಹ ಚಿತ್ರದ ಭಾಗವಾಗಿದ್ದಾರೆ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).
1 ನಿಮಿಷ 313 ಗ್ರಾಂ ಸ್ಟ್ರಾಬೆರಿ ಹಣ್ಣು! ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ ಲಿಯಾ ಶಟ್ಕೆವರ್ | World Record