More

  ಶ್ರೀಜಾ ಅಕುಲಾ ಈಗ ಭಾರತದ ನೂತನ ನಂ. 1 ಟೇಬಲ್​ ಟೆನಿಸ್​ ಆಟಗಾರ್ತಿ!

  ನವದಹೆಲಿ: ಅನುಭವಿ ಆಟಗಾರ್ತಿ ಮನಿಕಾ ಬಾತ್ರಾ ಅವರನ್ನು ಹಿಂದಿಕ್ಕುವ ಮೂಲಕ ಶ್ರೀಜಾ ಅಕುಲಾ ಟೇಬಲ್​ ಟೆನಿಸ್​ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಭಾರತದ ನೂತನ ನಂ. 1 ಆಟಗಾರ್ತಿ ಎನಿಸಿದ್ದಾರೆ. 25 ವರ್ಷದ ಶ್ರೀಜಾ ನೂತನ ಐಟಿಟಿಎಫ್​ ವಿಶ್ವ ರ‍್ಯಾಂಕಿಂಗ್​ನಲ್ಲಿ 38ನೇ ಸ್ಥಾನಕ್ಕೇರುವ ಮೂಲಕ ಈ ಸಾಧನೆ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಭಾರತದ ನಂ. 1 ಟೇಬಲ್​ ಟೆನಿಸ್​ ಆಟಗಾರ್ತಿ ಎನಿಸಿದ್ದ ಮನಿಕಾ ಬಾತ್ರಾ ಈಗ 39ನೇ ಸ್ಥಾನಕ್ಕೆ ಕುಸಿದಿದ್ದಾರೆ.

  ಕಳೆದ ಜನವರಿ ಮತ್ತು ಮಾರ್ಚ್​ನಲ್ಲಿ ಡಬ್ಲ್ಯುಟಿಟಿ ಪೀಡರ್​ ಕರ್ಪಸ್​ ಕ್ರಿಸ್ಟಿ ಮತ್ತು ಫೀಡರ್​ ಬಿರುಟ್​ ಪ್ರಶಸ್ತಿ ಜಯಿಸುವ ಮೂಲಕ ಗಮನಸೆಳೆದಿದ್ದ ಶ್ರೀಜಾ 2022ರ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಅನುಭವಿ ಆಟಗಾರ ಶರತ್​ ಕಮಲ್​ ಜತೆಗೆ ಮಿಶ್ರ ಡಬಲ್ಸ್​ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದರು. ಯಶಸ್ವಿನಿ ಘೋರ್ಪಡೆ ಮತ್ತು ಕನ್ನಡತಿ ಅರ್ಚನಾ ಕಾಮತ್​ ಕ್ರಮವಾಗಿ 99 ಮತ್ತು 100ನೇ ಸ್ಥಾನದಲ್ಲಿದ್ದಾರೆ. ಶರತ್​ ಕಮಲ್​ 37ನೇ ಸ್ಥಾನದೊಂದಿಗೆ ಪುರುಷರ ವಿಭಾಗದಲ್ಲಿ ಅಗ್ರ ಭಾರತೀಯರಾಗಿ ಮುಂದುವರಿದಿದ್ದರೆ, ಜಿ. ಸತ್ಯನ್​ ಮತ್ತು ಮಾನವ್​ ಠಕರ್​ ಕ್ರಮವಾಗಿ 60 ಮತ್ತು 61ನೇ ಸ್ಥಾನದಲ್ಲಿದ್ದಾರೆ.

  ಕೆಲ ತಿಂಗಳ ಹಿಂದೆ ಭಾರತ ಅಗ್ರ ಟಿಟಿ ಆಟಗಾರ ಎನಿಸಿದ್ದ ರಾಷ್ಟ್ರೀಯ ಚಾಂಪಿಯನ್​ ಹಮೀರ್ತ್​ ದೇಸಾಯಿ ಈಗ 64ನೇ ಸ್ಥಾನಕ್ಕಿಳಿದಿದ್ದಾರೆ. ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಭಾರತ ಈಗಾಗಲೆ ತಂಡ ವಿಭಾಗದಲ್ಲಿ ಅರ್ಹತೆ ಸಂಪಾದಿಸಿದ್ದರೆ, ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಕ್ಸ್​ ಅರ್ಹತೆ ಪರಿಗಣಿಸಲು ಮೇ 16ರ ವಿಶ್ವ ರ‍್ಯಾಂಕಿಂಗ್ ಅಂತಿಮ ಗಡುವು ಆಗಿದೆ.

  IPL 2024: ಯಶಸ್ವಿ ಜೈಸ್ವಾಲ್​ ಬ್ಯಾಟಿಂಗ್​ ಕೊಂಡಾಡಿದ ವೆಸ್ಟ್​ ಇಂಡೀಸ್​ ದಿಗ್ಗಜ ಬ್ರಿಯಾನ್​ ಲಾರಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts