ನಂಜನಗೂಡಿನಲ್ಲಿ ಪತ್ರಕರ್ತರ ಕ್ರೀಡಾಕೂಟ

ನಂಜನಗೂಡು: ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ಹಾಗೂ ಪೊಲೀಸರು ಕ್ರೀಡೆ, ಧ್ಯಾನ, ಯೋಗಾಭ್ಯಾಸದಲ್ಲಿ ತೊಡಗುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಸಿ.ಮಲ್ಲಿಕ್ ಹೇಳಿದರು.

ನಗರದ ಸಿಟಿಜನ್ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪತ್ರಕರ್ತರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಒತ್ತಡ ಜೀವನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವುದರಿಂದ ರೋಗ ರುಜಿನಗಳಿಗೆ ತುತ್ತಾಗದಂತೆ ನಿಯಂತ್ರಿಸಬಹುದು. ಆ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದಾಗಿದೆ. ಈ ದಿಸೆಯಲ್ಲಿ ಪೊಲೀಸರು, ಪತ್ರಕರ್ತರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಭಾಗಿತ್ವದಲ್ಲಿ ಕ್ರೀಡಾಕೂಟ ಆಯೋಜಿಸುವ ಚಿಂತನೆಯಿದೆ ಎಂದರು. ಸಮಾಜ ಹಾಗೂ ಆಡಳಿತ ವರ್ಗವನ್ನು ಕಣ್ತೆರೆಸುವ ಹಾಗೂ ಎಚ್ಚರಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ಪತ್ರಕರ್ತರು ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿ ಬಹುಮಾನ ಪಡೆದರು. ಸಿಟಿಜನ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಸಿ.ಚಿಕ್ಕನಾಯ್ಕ, ಕೆ.ಸಿ.ಕೃಷ್ಣ, ಎಂ.ಮಾದೇಶ್, ಡಿ.ಎನ್.ಸುನಿಲ್, ಲೋಕೇಶ್, ಮಹಮದ್ ಇಲಿಯಾಸ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸಿಟಿಜನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಮಶೂದಾ ಬೇಗಂ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ನಂಜನಗೂಡು ಮಧು, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹುಲ್ಲಹಳ್ಳಿ ಮೋಹನ್, ಉಪಾಧ್ಯಕ್ಷ ಪಿ.ಮಹದೇವಪ್ರಸಾದ್, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಟಿ.ಕೋಡಿನರಸೀಪುರ ಸೇರಿದಂತೆ ಇತರರಿದ್ದರು.

ವಿಜೇತರ ಪಟ್ಟಿ: ಪುರುಷರ ವಿಭಾಗ: 100ಮೀ.ಓಟ(50ವರ್ಷದೊಳಗೆ): ಎಸ್.ಚಂದ್ರಶೇಖರ್(ಪ್ರ), ಮಧುಮೂರ್ತಿ(ದ್ವಿ), ಪಟೇಲ್ ಮಹದೇವಸ್ವಾಮಿ(ತೃ).
100ಮೀ.ಓಟ(50ವರ್ಷ ಮೇಲ್ಪಟ್ಟ): ನಂಜನಗೂಡು ಮಧು(ಪ್ರ), ಹುಲ್ಲಹಳ್ಳಿ ಮೋಹನ್(ದ್ವಿ), ಸುತ್ತೂರು ನಂಜುಂಡನಾಯ್ಕ(ತೃ).
ಗುಂಡು ಎಸೆತ(50ವರ್ಷದೊಳಗೆ): ಎಸ್.ಚಂದ್ರಶೇಖರ್(ಪ್ರ), ಭಾಗ್ಯರಾಜ್(ದ್ವಿ), ಮಧುಮೂರ್ತಿ(ತೃ).
ಗುಂಡುಎಸೆತ(50ವರ್ಷ ಮೇಲ್ಪಟ್ಟು): ನಂಜನಗೂಡು ಮಧು(ಪ್ರ), ಹುಲ್ಲಹಳ್ಳಿ ಮೋಹನ್(ದ್ವಿ), ಸುತ್ತೂರು ನಂಜುಂಡನಾಯ್ಕ(ತೃ).
ಮಹಿಳೆಯರ ವಿಭಾಗ
ಚಮಚದಲ್ಲಿ ನಿಂಬೆಹಣ್ಣು ಇಟ್ಟು ಓಟ: ಮೀನಾಕ್ಷಿ(ಪ್ರ), ಎಂ.ಪ್ರತಿಮಾ ಸಂಪಿಗೆ(ದ್ವಿ), ಮಂಜುಳ(ತೃ).
ಗುರಿ ಇಟ್ಟು ಹೊಡೆವ ಸ್ಪರ್ಧೆ: ನಾಗರತ್ನ(ಪ್ರ), ಪಿ.ಸೌಜನ್ಯ(ದ್ವಿ), ಚಂದ್ರಕಲಾ(ತೃ).

ಮಕ್ಕಳ ವಿಭಾಗ: 75ಮೀ. ಓಟ (10 ವರ್ಷ ಮೇಲ್ಪಟ್ಟು): ಪ್ರತೀಕ್ಷಾ(ಪ್ರ), ಗಣೇಶ್(ದ್ವಿ), ಜೀವನ್‌ರಾಜ್(ತೃ).
50ಮೀ ಓಟ(10 ವರ್ಷದೊಳಗೆ): ಚಿನ್ಮಯಿ(ಪ್ರ), ಆರ್.ಮಹಾಲಕ್ಷ್ಮಿ(ದ್ವಿ), ಮೋಹನ್(ತೃ).
ಬಾಂಬ್‌ಬ್ಲಾಸ್ಟ್ ಸ್ಪರ್ಧೆ: ಎಂ.ಕೆ.ಕೃತಿಕಾ(ಪ್ರ), ಮನೋಹರ್(ದ್ವಿ), ದೀಪಕ್(ತೃ).