ಕುಮಟಾ: ಕ್ರೀಡೆಗೆ ಕೇವಲ ಮನೋರಂಜನೆ ಮಾತ್ರವಲ್ಲದೆ, ವಿದ್ಯಾರ್ಥಿಗಳ ಸರ್ವಾಂಗೀಣ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವೂ ಇದೆ. ಆದ್ದರಿಂದ ಪಠ್ಯಕಲಿಕೆ ಜತೆಗೆ ಯಾವುದಾದರೊಂದು ಆಸಕ್ತಿಯ ಕ್ರೀಡಾ ಕ್ಷೇತ್ರದಲ್ಲಿ ನಿರಂತರ ಶ್ರಮಿಸಿದರೆ ಉನ್ನತ ಸಾಧನೆಗೆ ಪೂರಕವಾಗುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ಡಾ. ಎ.ವಿ. ಬಾಳಿಗಾ ಕಾಲೇಜ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಮೂಲಸೌಕರ್ಯಗಳ ಕೊರತೆಯಿದ್ದರೂ ನಮ್ಮಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಾಗಿಲ್ಲ. ಕ್ರೀಡಾಕ್ಷೇತ್ರದಲ್ಲೂ ಈಗ ಸಾಕಷ್ಟು ಉನ್ನತ ಅವಕಾಶಗಳಿವೆ. ಸತತ ಪರಿಶ್ರಮದಿಂದ ಮಾತ್ರ ಅದನ್ನು ಸಾಕಾರಗೊಳಿಸಿಕೊಳ್ಳಬಹುದು ಎಂದರು.
ಪಿಯು ಕಾಲೇಜುಗಳ ಸಂಘಟನೆ ಜಿಲ್ಲಾಧ್ಯಕ್ಷ ಸತೀಶ ನಾಯಕ, ದೈಹಿಕ ಶಿಕ್ಷಣ ನಿರ್ದೇಶಕ ಜಿ.ಡಿ. ಭಟ್, ಸರಸ್ವತಿ ಪಿಯು ಕಾಲೇಜು ಪ್ರಾಚಾರ್ಯ ಕಿರಣ ಭಟ್, ಬಾಳಿಗಾ ವಾಣಿಜ್ಯ ಕಾಲೇಜ್ ಪ್ರಾಚಾರ್ಯ ಎನ್.ಜಿ. ಹೆಗಡೆ, ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜು ಪ್ರಾಚಾರ್ಯು ವೀಣಾ ಕಾಮತ, ಹಿರೇಗುತ್ತಿ ಕಾಲೇಜು ಪ್ರಾಚಾರ್ಯ ರಾಜೀವ ನಾಯ್ಕ ಇತರರಿದ್ದರು.
ಕೆನರಾ ಕಾಲೇಜು ಸಮಿತಿ ಉಪಾಧ್ಯಕ್ಷ ಡಿ.ಎಂ. ಕಾಮತ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಿಯು ಕಾಲೇಜುಗಳ ಕ್ರೀಡಾ ಸಂಚಾಲಕ ರೋಹಿತ ನಾಯಕ, ಪೊ›.ವಿ.ಡಿ. ಭಟ್ಟ, ಇತರರಿದ್ದರು. ಪೊ›.ಗಿರೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.