ಸಿರಗುಪ್ಪ: ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ಸದೃಢವಾಗುತ್ತದೆ, ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಯಾವುದಾದರೂ ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದು ಇ.ಸಿ.ಒ ಪಂಪಾಪತಿ ತಿಳಿಸಿದರು.
ಇದನ್ನೂ ಓದಿ: ಕ್ರೀಡೆಯಲ್ಲಿ ಕಲ್ಲಹಳ್ಳಿ ಸರಕಾರಿ ಶಾಲೆಗೆ ಬಹುಮಾನ

ತಾಲೂಕಿನ ತೆಕ್ಕಲಕೋಟೆ ಕ್ಲಸ್ಟರ್ ಪ್ರೌಢ ಶಾಲಾ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿರುವ ಕ್ರೀಡ ಆಸಕ್ತಿಯನ್ನು ಗುರುತಿಸಿ,
ಅವರಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು, ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂದರು.
ಪ್ರಭಾರಿ ದೈಹಿಕ ಶಿಕ್ಷಣದ ಪರಿವೀಕ್ಷಕ ರಮೇಶ್, ಮುಖ್ಯಗುರು ಟಿ.ಹುಲುಗಪ್ಪ, ಶಿಕ್ಷಕರಾದ ಮಂಜುನಾಥ, ಹನುಮಂತಪ್ಪ, ಬಸವರಾಜ, ನಿವೃತ್ತ ಹಿಂದಿ ಶಿಕ್ಷಕ ಟಿ.ಎಂ ಅಬ್ದುಲ್ ಅಜಾದ್ ಮತ್ತು ದೈಹಿಕ ಶಿಕ್ಷಕರಾದ ನಾಗರಾಜ, ಉಸ್ಮಾನ್, ರಾಮುರ್ತಿ, ರಮೇಶ್, ಶ್ರೀನಿವಾಸ ಇದ್ದರು.