More

    ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳಸಿ

    ಶಿಡ್ಲಘಟ್ಟ: ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಮಾನವೀಯ ಮೌಲ್ಯಗಳನ್ನು ತುಂಬುವ ಮೂಲಕ ಅವರನ್ನು ಪ್ರಜ್ಞಾವಂತರನ್ನಾಗಿಸಬೇಕೆಂದು ರಾಜ್ಯ ವಿಜ್ಞಾನ ಪರಿಷತ್‌ನ ಉಪಾಧ್ಯಕ್ಷ ಹಾಗೂ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ಹೇಳಿದರು.

    ತಾಲೂಕಿನ ಬಶೆಟ್ಟಿಹಳ್ಳಿಯ ಶ್ರೀ ಸಾಯಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ವಿಜ್ಞಾನ ಜಾತ್ರೆ ಮತ್ತು ಕ್ರೀಡಾ ವಾರ್ಷಿಕೋತ್ಸವ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಎಸ್‌ಎಸ್‌ಐಎಸ್ ಒಲಂಪಿಯಾ-2020 ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪ್ರಜ್ಞಾವಂತ ಮಕ್ಕಳು ಪ್ರಸ್ತುತ ಸಮಾಜಕ್ಕೆ ಬೇಕಾಗಿದ್ದಾರೆ. ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಟಿವಿ, ಮೊಬೈಲ್‌ಗಳಿಂದ ದೂರವಿಟ್ಟು, ಸಂಸ್ಕೃತಿ ಬಿಂಬಿಸುವ ವಾಲೀಬಾಲ್, ಕಬಡ್ಡಿಯಂತಹ ಆಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದರು.

    ಮಕ್ಕಳಲ್ಲಿ ಇತರರ ಬಗ್ಗೆ ಪ್ರೀತಿ, ಗೌರವ ಭಾವನೆ ಮೂಡಿಸಿದಲ್ಲಿ ಮೌಲ್ಯಾಧಾರಿತ ಜೀವನ ನಡೆಸಲಿದ್ದಾರೆ ಎಂದು ಸಂಸ್ಥೆ ಕಾರ್ಯದರ್ಶಿ ಎಂ.ಮಂಜುನಾಥ್ ಹೇಳಿದರು.

    ಸಂಕ್ರಾಂತಿ ಸುಗ್ಗಿ, ಪಾಲಕರಿಗೆ ರಂಗೋಲಿ ಸ್ಪರ್ಧೆ ಇತರೆ ಕ್ರೀಡೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವಿಜ್ಞಾನ ಜಾತ್ರೆಯಲ್ಲಿ ಮಕ್ಕಳು ಸಾದರಪಡಿಸಿದ ವಿವಿಧ ಮಾದರಿಗಳು ಆಕರ್ಷಣೀಯವಾಗಿತ್ತು.

    ಸಂಸ್ಥೆ ಅಧ್ಯಕ್ಷೆ ದೀಪಾ ಮಂಜುನಾಥ್, ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಸೋ.ಸು.ನಾಗೇಂದ್ರನಾಥ್, ಬಿ.ಪಿ.ಲೋಕೇಶ್, ಮುಖ್ಯಶಿಕ್ಷಕಿ ಮಂಜುಳಾ ಮುರಳಿಧರ್, ವಿನಯಾನಂದ ಬಾಬು, ಶಾಂತರಾಜು, ಮುನಿಶಾಮೇಗೌಡ, ಶಿಕ್ಷಕರಾದ ಮಾಲಶ್ರೀ, ಮೀನಾಕ್ಷಿ, ಚನ್ನಕೃಷ್ಣಪ್ಪ, ರಾಧಾ, ನಯನಾ, ಲಲಿತಾ, ಸುಮಿತ್ರಾ, ಮಮತಾ, ನಾಗಮಣಿ, ಭವಾನಿ, ಅಮರಾವತಿ, ಕಲಾವತಿ, ಶ್ರೀನಿವಾಸ್, ಅಬ್ದುಲ್ ಸಲೀಂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts