ಒಡೆದ ಹೇಮಾವತಿ ಬಲದಂಡೆ ನಾಲೆ, ನೂರಾರು ಎಕರೆ ಬೆಳೆ ನಷ್ಟ

ಹಾಸನ: ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿಯ ಸೋಮನಹಳ್ಳಿ ಕೊಪ್ಪಲು ಬಳಿ ಭಾನುವಾರ ಹೇಮಾವತಿ ಬಲದಂಡೆ ನಾಲೆ ಒಡೆದು ನೂರಾರು ಎಕರೆ ಬೆಳೆ ನಾಶವಾಗಿದೆ.

ನಾಲೆ ಒಡೆದಿದ್ದರಿಂದ ಭಾರಿ ಪ್ರಮಾಣದ ನೀರು ನಾಲೆ ಪಕ್ಕದ ಜಮೀನುಗಳಿಗೆ ನುಗ್ಗಿ ಭಾರಿ ಪ್ರಮಾಣದ ಬೆಳೆ ಹಾನಿಯಾಗಿದೆ.

ಹೇಮಾವತಿ ಜಲಾಶಯದಿಂದ ನಾಲೆ 200 ಕ್ಯುಸೆಕ್ ನೀರು ಹರಿಸುತ್ತಿದ್ದು, ನಾಲೆ ಒಡೆದ ನಂತರ ಅಧಿಕಾರಿಗಳು ನೀರು ನಿಲ್ಲಿಸಿದ್ದರೂ ನೀರು ಸ್ಥಗಿತಗೊಳ್ಳಲು ಇನ್ನೂ ಹನ್ನೆರಡು ಗಂಟೆ ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *