More

  ಆಧ್ಯಾತ್ಮಿಕ ಆಚರಣೆಯಿಂದ ಜೀವನ ಸಾರ್ಥಕ

  ಕೊಟ್ಟಲಗಿ: ಮನುಷ್ಯ ಆಧ್ಯಾತ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಗದಗ ಶಿವಾನಂದ ಆಶ್ರಮದ ಜಗದ್ಗುರು ಸದಾಶಿವಾನಂದ ಭಾರತಿ ಶ್ರೀಗಳು ಹೇಳಿದರು.

  ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಆರಾಧನಾ ಮಹೋತ್ಸವದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೊಟ್ಟಲಗಿ ಗ್ರಾಮ ಆಧ್ಯಾತ್ಮಿಕ ನೆಲೆಯಾಗಿದ್ದು, ಸದಾ ಧಾರ್ಮಿಕ ಕಾರ್ಯಗಳ ಮೂಲಕ ಪವಿತ್ರ ಭೂಮಿಯಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಸಿದ್ದೇಶ್ವರ ಆರಾಧನೆ ಮೂಲಕ ಕೊಟ್ಟಲಗಿ ಗ್ರಾಮಕ್ಕೆ ಪುಣ್ಯ ಪುರುಷರ ಆಗಮನದ ಮೂಲಕ ಪವಿತ್ರ ಕ್ಷೇತ್ರವಾಗಿದೆ ಎಂದರು.

  ಯಕ್ಕಂಚಿಯ ಗುರುಪಾದ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಕೌಲಗುಡ್ಡದ ಅಮರೇಶ್ವರ ಮಹಾರಾಜರು, ಶೇಗುಣಸಿ ಗ್ರಾಮದ ಡಾ. ಮಹಾಂತಪ್ರಭು ಶ್ರೀಗಳು, ಸಿಂದಗಿಯ ಶಾಂತಾನಂದ ಶ್ರೀಗಳು, ಕಕಮರಿಯ ಆತ್ಮರಾಮ ಶ್ರೀಗಳು, ಶ್ರದ್ಧಾನಂದ ಶ್ರೀಗಳು, ಅನ್ನಪೂರ್ಣ ಮಾತಾಜಿ ಆಶೀರ್ವಚನ ನೀಡಿದರು. ಭಕ್ತರಿಗೆ ಮಹಾಪ್ರಸಾದ ಜರುಗಿತು. ಕೊಟ್ಟಲಗಿ ಗ್ರಾಮದ ಸರ್ವ ಮುಖಂಡರು ಭಕ್ತಾದಿಗಳು, ಗ್ರಾಮಸ್ಥರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts