ಕಂಪ್ಲಿ: ಪಟ್ಟಣದಲ್ಲಿ ಶ್ರೀ ಮಧ್ವ ನವಮಿ ನಿಮಿತ್ತ ಗುರುವಾರ ಶ್ರೀ ಮಧ್ವಾಚಾರ್ಯರ ಪ್ರತಿಮೆಗೆ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.
ಇದನ್ನೂ ಓದಿ:ದೇವರ ಪೂಜೆಯಿಂದ ಸಂಸ್ಕಾರ ಲಭ್ಯ
ಬೆಳಗ್ಗೆ ಕೋಟೆಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಆಂಜನೇಯಸ್ವಾಮಿ ಪ್ರತಿಮೆಗೆ ಪೂಜೆ, ಮಧು ಅಭಿಷೇಕ, ವಾಯುಸ್ತುತಿ ಪಾರಾಯಣ, ಸಮಗ್ರ ಸರ್ವಮೂಲಗ್ರಂಥ ಪಾರಾಯಣ, ಪಂಚಾಮೃತಾಭಿಷೇಕ ನೆರವೇರಿದವು. ಮಧ್ಯಾಹ್ನ ಬ್ರಾಹ್ಮಣಬೀದಿಯಲ್ಲಿನ ಶ್ರೀ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಗುರುರಾಜ ಸೇವಾ ಮಂಡಳಿಯಿಂದ ಅರ್ಚಕ ರಾಮಚಾರ್ ಜೋಯಿಸ್ ಪೌರೋಹಿತ್ಯದಲ್ಲಿ ವಾಯುದೇವರು, ಮಧ್ವಾಚಾರ್ಯರು, ಸರ್ವಮೂಲಗ್ರಂಥವನ್ನು ರಥದಲ್ಲಿರಿಸಿ ರಥೋತ್ಸವ ನಡೆಸಲಾಯಿತು. ಅಮೃತಶಿಲಾ ರಾಮಚಂದ್ರ, ಸೀತೆ, ಲಕ್ಷ್ಮಣ, ಆಂಜನೇಯ ಪ್ರತಿಮೆಗಳನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ನಂತರ ಅನ್ನ ಸಂತರ್ಪಣೆ ನಡೆಯಿತು.
ಮಂಡಳಿ ಅಧ್ಯಕ್ಷ ಗೌಡ್ರು ಗೋಪಾಲಕೃಷ್ಣ, ಕಾರ್ಯದರ್ಶಿ ಅಗಸನೂರು ನಾಗರಾಜ, ಖಜಾಂಚಿ ಬಿ.ರಮೇಶ್, ಪ್ರಮುಖರಾದ ದಿಗ್ಗಾವಿ ಗುರುರಾಜಾಚಾರ್, ಕಾಕುಕಾಳ್ ಶ್ರೀಕಾಂತಾಚಾರ್ ಇತರರಿದ್ದರು.