ಭಕ್ತರಿಂದ ರಥಕ್ಕೆ ವಿಶೇಷ ಪೂಜೆ

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರದಲ್ಲಿ ಶ್ರೀ ಪ್ರಸನ್ನ ಮೀನಾಕ್ಷಿ ಸಮೇತ ಸೋಮೇಶ್ವರಸ್ವಾಮಿ ದಿವ್ಯ ರಥೋತ್ಸವ ಮಂಗಳವಾರ ಭಕ್ತರ ಸಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ದೇವಾಲಯದ ಪ್ರಭಾರ ಇಒ ಸುರೇಶ್ ರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಭಕ್ತರು ಭಕ್ತಿಭಾವದಿಂದ ರಥ ಎಳೆದರು. ಶಿವನಸಮುದ್ರ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥ ಮೆರವಣಿಗೆ ಸಾಗಿತು. ಈ ವೇಳೆ ಭಕ್ತರು ರಥಕ್ಕೆ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರಲ್ಲದೆ, ರಥಕ್ಕೆ ಪೂಜೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸಿದರು.

ರಥೋತ್ಸವ ಹಿನ್ನೆಲೆ ಶಿವನಸಮುದ್ರ ಗ್ರಾಮದ ಪ್ರಮುಖ ಬೀದಿಗಳನ್ನು ಹಸಿರು ತಳಿರು ತೋರಣಗಳು ಹಾಗೂ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಮಳವಳ್ಳಿ, ಬೆಳಕವಾಡಿ ಭಾಗದಿಂದಲೂ ಭಕ್ತರು ಆಗಮಿಸಿದರು.

ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ನರೇಂದ್ರಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು. ದೇಗುಲದ ಅರ್ಚಕರಾದ ನಾಗರಾಜ್ ಭಟ್, ಪ್ರಭಾಕರ್ ಭಟ್, ಶ್ರೀಧರ್ ಭಟ್ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿದರು.

Leave a Reply

Your email address will not be published. Required fields are marked *