ಸಿದ್ಧಗಂಗಾ ಶ್ರೀಗಳ ಭಕ್ತರಿಂದ ವಿಶೇಷ ಪೂಜೆ

ಮೈಸೂರು: ಶತಾಯುಷಿ ಆಗಿರುವ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ಸ್ವಾಮೀಜಿ ಅವರಿಗೆ ‘ಭಾರತರತ್ನ’ ಗೌರವ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಪಾತಿ ಫೌಂಡೇಷನ್ ಸದಸ್ಯರು, ಭಕ್ತರು ಸೇರಿ ನಗರದ ತ್ಯಾಗರಾಜ ರಸ್ತೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಸ್ವಾಮೀಜಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ ಮಾಡಿಸಿದರು.
ಪಾತಿ ಫೌಂಡೇಷನ್ ಅಧ್ಯಕ್ಷ ಪಾರ್ಥಸಾರಥಿ ಮಾತನಾಡಿ, ಎಲ್ಲ ಜಾತಿ, ಧರ್ಮದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಸತಿ ಕಲ್ಪಿಸುವ ಮೂಲಕ ಶ್ರೀ ಶಿವಕುಮಾರ ಸ್ವಾಮೀಜಿ ಕರ್ನಾಟಕದ ಮನೆ ಮಾತಾಗಿದ್ದು, ಅವರು ಇನ್ನಷ್ಟು ಕಾಲ ಬಾಳಬೇಕು. ಕೇಂದ್ರ ಸರ್ಕಾರ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.

ವಿಪ್ರ ಯುವ ಮುಖಂಡ ವಿಕ್ರಂ ಅಯ್ಯಂಗಾರ್ ಮಾತನಾಡಿ, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ಕಾರ್ಯ ದೇಶಕ್ಕೆ ಮಾದರಿ. ಯಾವುದೇ ಭೇದವಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ್ದಾರೆ ಎಂದರು.

ನಗರ ಪಾಲಿಕೆ ಮಾಜಿ ಸದಸ್ಯೆ ಯಮುನಾ, ಕನ್ನಡಪರ ಹೋರಾಟಗಾರರಾದ ತಾಯೂರು ವಿಠಲಮೂರ್ತಿ, ನಂ.ಸಿದ್ದಪ,್ಪ ಎನ್.ಪ್ರಕಾಶ್, ನಾಗರಾಜು, ನವೀನ್‌ಕುಮಾರ್, ಎಚ್.ವಿ.ಭಾಸ್ಕರ್, ಮಹದೇವಸ್ವಾಮಿ, ಮದನ್‌ಕುಮಾರ್, ದೀಪಕ್, ನವೀನ್‌ಕುಮಾರ್, ಹರೀಶ್‌ನಾಯ್ಡು, ಧನರಾಜ್, ಪ್ರವೀಣ್, ಪುಷ್ಪಾವತಿ, ಶಿವಕುಮಾರ್, ಷಡಕ್ಷರಿ, ಮಹದೇವಪ್ರಸಾದ್, ನಾಗೇಂದ್ರಕುಮಾರ್, ಬಸವರಾಜು ಇತರರು ಹಾಜರಿದ್ದರು.