ಕಿಕ್ಕೇರಿ: ಇಲ್ಲಿನ ಬ್ರಹ್ಮೇಶ್ವರ ದೇಗುಲದಲ್ಲಿರುವ ವಿಘ್ನೇಶ್ವರನಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇಶ ರಕ್ಷಣೆ, ಯೋಧರ ಕ್ಷೇಮಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು.

ಅರ್ಚಕ ಆದಿತ್ಯ ಭಾರದ್ವಾಜ್ ಮಾತನಾಡಿ, ದೇಶದ ರಕ್ಷಣೆ ಬಲುಮುಖ್ಯವಾಗಿದ್ದು, ಶತ್ರುಗಳಿಂದ ಸಂರಕ್ಷಣೆ ಪಡೆಯಲು ಭಗವಂತನ ಆರಾಧನೆ ಮುಖ್ಯವಾಗಿದೆ. ವೇದಪುರಾಣಗಳಿಂದಲೂ ಶತ್ರುಗಳ ಕಾಟ ಇದೆ. ದುಷ್ಟ ಸಂಹಾರಕ್ಕೆ ಭಗವಂತ ವಿವಿಧ ರೀತಿಯಲ್ಲಿ ಧರೆಗೆ ಆಗಮಿಸಿ ಶಿಷ್ಟರನ್ನು ರಕ್ಷಿಸುತ್ತಾನೆ. ನಮ್ಮ ದೇಶ ಅಧ್ಯಾತ್ಮ, ದೈವಿಶಕ್ತಿಯ ತಪೋಭೂಮಿಯಾಗಿದೆ. ಯೋಧರು ಗಡಿಕಾಯುವ ದೇವರ ಅವತಾರವಾಗಿದ್ದಾರೆ. ನಾವಿಲ್ಲಿ ಪ್ರಾರ್ಥಿಸಿದರೆ ಯೋಧರ ಆರೋಗ್ಯ, ಆತ್ಮಸ್ಥೈರ್ಯ, ಕ್ಷೇಮ ವೃದ್ಧಿಸಲಿದೆ. ನಿತ್ಯ ಯೋಧರಿಗಾಗಿ ಪ್ರಾರ್ಥಿಸಬೇಕು ಎಂದರು.
ಅಕ್ಷಯ್, ಗ್ರಾಮಸ್ಥರು ಇದ್ದರು.