ರವಿಚಂದ್ರನ್ ಮಗಳ ಮದುವೆಗೆ ವಿಶೇಷ ವೇದಿಕೆ: ಕ್ರೇಜಿಸ್ಟಾರ್​ ಅದಕ್ಕಾಗಿ ಪ್ರೀತಿಯನ್ನಷ್ಟೇ ಖರ್ಚು ಮಾಡಿದ್ದಾರಂತೆ

ಬೆಂಗಳೂರು: ಕ್ರೇಜಿಸ್ಟಾರ್​ ರವಿಚಂದ್ರನ್​ ಅವರ ಮಗಳ ಮದುವೆ ಮೇ 28 ಮತ್ತು 29ರಂದು ನಡೆಯಲಿದ್ದು, ಅದ್ಧೂರಿಯಾಗಿ ಸಿದ್ಧತೆ ನಡೆಯುತ್ತಿದೆ. ತಮ್ಮ ಸಿನಿಮಾದಲ್ಲಿ ನಾವೀನ್ಯತೆ, ಸೃಜನಶೀಲತೆ ಇರುವಂತೆ ಮಗಳ ಮದುವೆಯನ್ನೂ ವಿಶೇಷವಾಗಿ ಮಾಡಲು ಕ್ರೇಜಿಸ್ಟಾರ್​ ಯೋಚಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ತಮ್ಮ ಮನದಾಳದ ಮಾತನ್ನು ಹೇಳಿರುವ ನಟ ರವಿಚಂದ್ರನ್​, ನನ್ನ ಮಗಳ ಮದುವೆಯನ್ನ ಅದ್ಭುತವಾಗಿ ಮಾಡುತ್ತೇನೆ. ಸಿನಿಮಾ ಮಾಡಿದಂತೆ, ಗಾಜಿನ ವೇದಿಕೆ ಹಾಕುತ್ತೇನೆ. 25 ದಿವಸ ವೇದಿಕೆಯ ಅಲಂಕಾರ ಮಾಡಲಾಗಿದೆ. ಕರಕುಶಲ ವಸ್ತುಗಳ ಮೂಲಕ ಶೃಂಗರಿಸಲಾಗುತ್ತದೆ. ವೇದಿಕೆ ನೋಡಿದರೇನೆ ಎಲ್ಲಾ ಒಂದು ಕ್ಷಣ ಕೂತು ಬೀಡುತ್ತಾರೆ ಎಂದಿದ್ದಾರೆ.

ಮಗಳ ಮದುವೆಗೆ ಸಾಕಷ್ಟು ತಲೆ, ಪ್ರೀತಿ ಖರ್ಚು ಮಾಡುತ್ತಿದ್ದೀನಿ. ಹಣ ಖರ್ಚು ಮಾಡುತ್ತಿಲ್ಲ. ಮಗಳ ಮದುವೆಗೆ ಬೆಲೆ ಕಟ್ಟಬೇಡಿ. ಆಹ್ವಾನ ಪತ್ರಿಕೆ ಕುರಿತು ಮಾತನಾಡಿದ ಅವರು, ಆಹ್ವಾನ ಪತ್ರಿಕೆ ತಯಾರಿಯಲ್ಲಿ ಖರ್ಚಾಗಿರುವುದು ನನ್ನ ತಲೆ ಅಷ್ಟೇ ಎಂದಿದ್ದಾರೆ.

ಅಮಿತಾಬ್ ಬಚ್ಚನ್, ಚಿರಂಜೀವಿ ಎಲ್ಲರಿಗೂ ಮದುವೆ ಪತ್ರಿಕೆ ಕೊಟ್ಟಿದ್ದೀನಿ. ಮದುವೆಗೆ ಎಲ್ಲರೂ ಆರಾಮಾಗಿ ಬರಬೇಕು. ಎಲ್ಲರೂ ಸಂಬಂಧಿಗಳಾಗಿ, ಸ್ನೇಹಿತರಾಗಿ ಬನ್ನಿ ಅಷ್ಟೇ. ಮದುವೆ ದಿನ ನಾನು ಕ್ರೇಜಿಸ್ಟಾರ್ ಆಗಿ ರವಿಚಂದ್ರನ್ ಆಗಿ ಇರಬೇಕು. ಅಂದು ನನ್ನ ಮಗಳು ಸೆಲೆಬ್ರಿಟಿ ಆಗಿರಬೇಕು ಎಂದಿದ್ದಾರೆ. ಹಾಗೂ ಮದುವೆಗೆ ಪಂಚೆ, ಶರ್ಟ್ ಹಾಕುತ್ತೇನೆ ಎಂದು ತಿಳಿಸಿದ್ದಾರೆ.

ಹಾಗೆಯೇ ಅಳಿಯನ ಬಗ್ಗೆ ಮಾತನಾಡಿದ ಅವರು, ಅಳಿಯ ಮೆಕ್ಯಾನಿಕಲ್​ ಎಂಜಿನಿಯರ್​ ಆಗಿದ್ದು, ಪೀಣ್ಯಾ ಹಾಗೂ ಅಬ್ರಾಡ್​ನಲ್ಲಿ ಕಾರ್ಖಾನೆಗಳಿವೆ. ಕೊಟ್ಟು ತೆಗೆದುಕೊಳ್ಳೋದು ಏನು ಇಲ್ಲಾ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *