ಹೊಳೆನರಸೀಪುರ: ಪಟ್ಟಣದ ಕೋಟೆ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಭರತ ಹುಣ್ಣಿಮೆ ಅಂಗವಾಗಿ ಬುಧವಾರ ವಿಶೇಷ ಪೂಜೆ ನೆರವೇರಿಸಲಾಯಿತು.
ಪಟ್ಟಣದ ಬಲಿಜ ಸಮಾಜದವರು ನಿರ್ವಹಿಸುತ್ತಿರುವ ದೇವಾಲಯದಲ್ಲಿ ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ ನಡೆಸಿ ವಿವಿಧ ಹೂಗಳಿಂದ ಅಲಂಕರಿಸಿ ಪೂಜಿಸಲಾಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಅರಿಶಿನ ಕುಂಕುಮ ನೀಡಲಾಯಿತು. ಭಕ್ತರು ದೇವಿಗೆ ಮಡಿಲು ತುಂಬಿ ಪ್ರಾರ್ಥನೆ ಸಲ್ಲಿಸಿದರು.
ಭರತ ಹುಣ್ಣಿಮೆ ದಿನ ಬಲಿಜ ಸಮಾಜದವರು ಪ್ರತಿವರ್ಷದಂತೆ ಈ ಬಾರಿಯೂ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಈ ಬಾರಿ ನಮ್ಮ ಬಾಣಸಿಗರಿಗೆ ಕಡೇ ಘಳಿಗೆಯಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ ಪುಳಿಯೋಗರೆ, ಮೊಸರನ್ನ ಹಾಗೂ ರಸಾಯನ ಪ್ರಸಾದ ನೀಡಿದ್ದೇವೆ ಎಂದು ಧನ್ಯಕುಮಾರ್ ವಿವರಿಸಿದರು.
ಬಲಿಜ ಸಮಾಜದ ಗೋವಿಂದರಾಜ್, ಎಎಸ್‌ಐ ಸತ್ಯನಾರಾಯಣ, ಎಚ್.ಜಿ. ವೆಂಕಟೇಶ್, ನಾಗೇಂದ್ರ ಸ್ವಾಮಿ, ಜಿತೇಂದ್ರ, ರೇಣುಕಾ ಪ್ರಸಾದ್, ಜಯಮ್ಮ, ನಾಗಣ್ಣ, ಪದ್ಮಾವತಿ, ಶ್ರೀನಿವಾಸ, ಚಂದ್ರಕಲಾ, ರಾದಮ್ಮ, ಭಾಗ್ಯ, ಗಾಯಿತ್ರಮ್ಮ ಇತರರಿದ್ದರು.