ಅರಸೀಕೆರೆ ಗ್ರಾಮಾಂತರ: ಕಸಬಾ ಹೋಬಳಿ ಹಾರನಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮ ತಾರಕ ಹೋಮ, ಆಂಜನೇಯ ಮೂಲ ಮಂತ್ರ ಹೋಮ, ಶ್ರೀ ಶನೈಶ್ಚರಸ್ವಾಮಿ ಶಾಂತಿ ಹೋಮ, ನವಗ್ರಹ ಹೋಮ ಜರುಗಿತು.
ಶ್ರೀ ಆಂಜನೇಯ ಸ್ವಾಮಿ ಯುವಕ ಮಂಡಳಿ ವತಿಯಿಂದ ಕೋಟೆ ಆಂಜನೇಯ ಸ್ವಾಮಿ, ಶ್ರೀ ಶನೈಶ್ಚರಸ್ವಾಮಿಗೆ ಪಂಚಾಮೃತ ಅಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಗ್ರಾಮ ದೇವತೆ ಕೊಡಮ್ಮ ದೇವಿ, ಹುಚ್ಚಮ್ಮ ದೇವಿ, ಶ್ರೀ ಧೂತರಾಯ ಸ್ವಾಮಿ, ಶ್ರೀ ವೀರಭದ್ರ ಸ್ವಾಮಿ, ಶ್ರೀ ಶನೈಶ್ಚರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.