ವಿಶೇಷ ವ್ಯಕ್ತಿತ್ವದ ರಾಜೇಂದ್ರ ಶ್ರೀ: ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣನೆ

blank

ಮೈಸೂರು: ಶ್ರೀರಾಜೇಂದ್ರ ಸ್ವಾಮೀಜಿ ವಿಶೇಷವಾದ ವ್ಯಕ್ತಿತ್ವ ಹೊಂದಿದ್ದು, ಅವರ ಸನಿಹಕ್ಕೆ ಬಂದವರೆಲ್ಲರೂ ಪವಿತ್ರವಾದ ಆಧ್ಯಾತ್ಮದ ಅನುಭೂತಿ ಅನುಭವಿಸುತ್ತಿದ್ದರು ಎಂದು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.
ಸಾಲಿಗ್ರಾಮ ತಾಲೂಕು ಭೇರ್ಯದಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ವೀರಶೈವ-ಲಿಂಗಾಯತ ಮಠಾಧಿಪತಿಗಳ ಗೋಷ್ಠಿಯಿಂದ ಭಾನುವಾರ ಆಯೋಜಿಸಿದ್ದ ರಾಜೇಂದ್ರಶ್ರೀಗಳ 109ನೇ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ, ದೀಕ್ಷಾ ಸಂಸ್ಕಾರದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು.
ರಾಜೇಂದ್ರ ಶ್ರೀಗಳು ಸದಾ ಸಮಾಜದ ಕಷ್ಟಕ್ಕೆ ಸ್ಪಂದಿಸುವ ಹೃದಯ ವೈಶಾಲ್ಯತೆ. 1960 ದಶಕದಲ್ಲಿಯೇ ಕೆ.ಆರ್.ನಗರ ಸೇರಿದಂತೆ ಹಲವು ಕಡೆಗಳಲ್ಲಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನದಾಸೋಹ ಕಲ್ಪಿಸಿದ್ದರು. ಸಿದ್ಧಗಂಗಾ ಶ್ರೀ ಶಿವಕುಮಾರಸ್ವಾಮೀಜಿ ಹಾಗೂ ರಾಜೇಂದ್ರ ಶ್ರೀಗಳದ್ದು ಒಂದೇ ತತ್ವವಾಗಿದ್ದು, ದೇಹ ಎರಡು ಆತ್ಮ ಒಂದೇ ಎಂಬಂತೆ ಬದುಕಿದವರು ಎಂದರು.
ಸಮಾಜ ಯಾವ ರೀತಿಯಲ್ಲಿ ಸಾಗಬೇಕು ಎಂಬುದಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು. ತಮ್ಮ ಬಳಿ ಬಂದವರೆಲ್ಲರೂ ಪವಿತ್ರವಾದ ಆಧ್ಯಾತ್ಮದ ಅನುಭೂತಿಯನ್ನು ಅನುಭವಿಸುತ್ತಿದ್ದರು. ರಾಷ್ಟ್ರಕವಿ ಕುವೆಂಪು ಅವರು ಶ್ರೀಗಳ ಪಟ್ಟಾಧಿಕಾರ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎಲ್ಲಿ ಜ್ಞಾನವಿರುತ್ತದೆಯೊ ಅಲ್ಲಿ ಅಜ್ಞಾನಕ್ಕೆ ಜಾಗವಿಲ್ಲ. ಮಠಾಧಿಪತಿಗಳ ಗೋಷ್ಠಿಯಿಂದ ಪ್ರತಿಭಾ ಪುರಸ್ಕಾರ, ಸಾಮೂಹಿಕ ವಿವಾಹಗಳಂತಹ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀಶಿವಸಿದ್ಧೇಶ್ವರ ಸ್ವಾಮಿ ಮಾತನಾಡಿ, ದೇಶಕ್ಕೆ ಆಧ್ಯಾತ್ಮವೇ ಭದ್ರ ಬುನಾದಿಯಾಗಿದ್ದು, ಎಂತೆಂತಹ ದಾಳಿಗಳು ನಡೆದರೂ ಭಾರತವನ್ನು ನಾಶ ಮಾಡಲು ಸಾಧ್ಯವಾಗಿಲ್ಲ. ಆಧುನಿಕ ಶಿಕ್ಷಣ ಪದ್ಧತಿಯಿಂದ ದೇಶದಲ್ಲಿ ಹಲವು ಬದಲಾವಣೆಗಳಾದವು. ಆಧ್ಯಾತ್ಮದೊಂದಿಗೆ ಶಿಕ್ಷಣದ ಬೇರುಗಳು ಗಟ್ಟಿಯಾಗಲು ಮಠಮಾನ್ಯಗಳು ಕಾರಣವಾದವು ಎಂದರು.
ಕರ್ನಾಟಕಕ್ಕೆ ಸುತ್ತೂರು ಮತ್ತು ಸಿದ್ಧಗಂಗಾ ಮಠಗಳು ಕಲಶಪ್ರಾಯವಾಗಿ ನಿಂತಿವೆ. ಎರಡೂ ಮಠಕ್ಕೂ ಅತ್ಯಂತ ಅವಿನಾಭಾವ ಸಂಬಂಧವಿದೆ. ಜಗವೆಲ್ಲ ನಗುತಿರಲಿ, ಜಗದಳಿವು ನನಗಿರಲಿ ಎಂಬಂತೆ ಬಾಳಿದವರು ರಾಜೇಂದ್ರ ಶ್ರೀಗಳು. ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆ ಇಂದು ಬೃಹತ್ ಆಲದಮರವಾಗಿ ಬೆಳೆದು ನಿಂತಿದೆ. ಜಗತ್ತಿನಲ್ಲಿ ಏನನ್ನಾದರೂ ಬದಲಾಯಿಸಲು ಸಾಧ್ಯವಿದ್ದರೆ ಅದು ಶಿಕ್ಷಣದಿಂದ ಮಾತ್ರ ಎಂಬುದನ್ನು ಪೂಜ್ಯರು ಅರಿತಿದ್ದರು ಎಂದರು.
ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಮಾತನಾಡಿ, ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ನನ್ನಂತಹ ಅನೇಕರಿಗೆ ಸುತ್ತೂರು ಶ್ರೀಮಠ ಕಲಿಸಿಕೊಟ್ಟಿದೆ. ರಾಜೇಂದ್ರ ಶ್ರೀಗಳನ್ನು ನೆನೆಯುವುದೇ ನಮಗೆ ಸೌಭಾಗ್ಯ. ಇಂದು ಸುತ್ತೂರು ಶ್ರೀಗಳು ಶ್ರೀಮಠದ ಕೀರ್ತಿಯನ್ನು ಜಗದ್ವ್ಯಾಪಿಗೊಳಿಸಿದ್ದಾರೆ ಎಂದರು.
ಶಾಸಕ ಡಿ. ರವಿಶಂಕರ್, ರಾಜೇಂದ್ರ ಶ್ರೀಗಳು ಸಮಾಜಕ್ಕೆ ಅನೇಕ ಮಹತ್ವದ ಕೊಡುಗೆಗಳನ್ನು ಬಣ್ಣಿಸಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದ 76 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 150 ಜನ ದೀಕ್ಷಾ ಸಂಸ್ಕಾರ ಪಡೆದುಕೊಂಡರು.
ಕರ್ಪೂರವಳ್ಳಿ ಜಂಗಮ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಒಂದು ಲಕ್ಷದ ಎಂಟು ಸಾವಿರ ರೂ. ಹಾಗೂ ಶರಣ ಸಾಹಿತ್ಯ ಪರಿಷತ್‌ನಿಂದ ಒಂದು ಲಕ್ಷದ ಎಂಟು ಸಾವಿರ ರೂ. ಅನ್ನು ಘೋಷಿಸಲಾಯಿತು. ಅಂಕನಹಳ್ಳಿ, ಎಲೆಮುದ್ದನಹಳ್ಳಿ, ಹರವೆ ಶ್ರೀ, ಅರಕೆರೆ ಶ್ರೀಗಳು ಸೇರಿದಂತೆ ಇನ್ನಿತರರು ಇದ್ದರು.

Share This Article

Skin Care | ಚಳಿಗಾಲದಲ್ಲಿ ನಿಮ್ಮ ತ್ವಚೆಯು ಹಾಳಾಗದಂತೆ ಎಚ್ಚರವಹಿಸಿ; ಈ ಫೇಸ್​ಪ್ಯಾಕ್ ಟ್ರೈ ಮಾಡಿ ಫಲಿತಾಂಶ ನೀವೇ ನೋಡಿ..

ಚಳಿಗಾಲ ಆರಂಭವಾಯಿತು ಎಂದರೆ ಸಾಕು ತ್ವಚೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುವುದನ್ನು ನಾವು ನೊಡಬಹುದು. ಇನ್ನು ಮುಖದ…

ಈ ಆಹಾರ ಪದಾರ್ಥದಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ; Health Tips ನಿಮಗಾಗಿ

ಕ್ಯಾನ್ಸರ್​​ನಂತಹ ಗಂಭೀರ ಕಾಯಿಲೆಯನ್ನು ತಡೆಗಟ್ಟಲು ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.…

ಚಳಿಗಾಲದಲ್ಲಿ ಕೈ&ಕಾಲ್ಬೆರಳುಗಳ ಊತಕ್ಕೆ ಕಾರಣ ಈ ಕಾಯಿಲೆ; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ… | Health Tips

ಚಳಿಗಾಲದಲ್ಲಿ ನೆಗಡಿ ಮಾತ್ರವಲ್ಲದೆ ಹಲವಾರು ಕಾಯಿಲೆಗಳು ಸಮಸ್ಯೆಯನ್ನು ಹೆಚ್ಚಿಸುತ್ತವೆ. ಅದರಲ್ಲಿ ಚಿಲ್ಬ್ಲೈನ್ಸ್ ರೋಗವು ಒಂದಾಗಿದೆ. ಬಹುಶಃ…