23.5 C
Bengaluru
Sunday, January 19, 2020

ಇರುವುದೊಂದೇ ಜೀವ…

Latest News

ಮಹಾ ಸಿಎಂ ಠಾಕ್ರೆ ಹೇಳಿಕೆ ವಿವಾದ| ಪ್ರತಿಭಟನಾರ್ಥವಾಗಿ ಇಂದು ಶಿರ್ಡಿ ಪಟ್ಟಣ, ಗ್ರಾಮ ಬಂದ್

ಶಿರ್ಡಿ(ಮಹಾರಾಷ್ಟ್ರ): ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮರಾಠವಾಡದಲ್ಲಿ ಶಿರ್ಡಿ ಸಾಯಿಬಾಬಾ ಅವರ ಜನ್ಮಸ್ಥಳವೆಂದೇ ಜನಜನಿತವಾಗಿರುವ ಪಥ್ರಿ ಪ್ರದೇಶದ ಅಭಿವೃದ್ಧಿಗಾಗಿ 100 ಕೋಟಿ ರೂಪಾಯಿ ಮೀಸಲಿಟ್ಟ...

ಬೆಳಗಾವಿ ಗಡಿ ವಿವಾದವಲ್ಲ, ಬಾಷಾ ವಿವಾದವಾಗಿದೆ- ಉಭಯ ಸಿಎಂಗಳು ಮಾತುಕತೆ ನಡೆಸಿ ತುರ್ತು ಪರಿಹಾರ ಕಾಣಬೇಕು ಎಂದ ಸಂಜಯ್ ರಾವತ್

ಮುಂಬೈ: ಬೆಳಗಾವಿ ವಿಚಾರದಲ್ಲಿ ಮರಾಠಿಗರು ಪದೇಪದೆ ಕಿರಿಕ್ ಮಾಡುತ್ತಿದ್ದು, ಇದೀಗ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಯ ಆದ ನಂತರದಲ್ಲಿ...

ಫಾಸ್ಟ್​ಟ್ಯಾಗ್ ರೀಚಾರ್ಜ್ ಸೋಗಿನಲ್ಲಿ ಧೋಖಾ, ಬ್ಯಾಂಕ್ ಅಧಿಕಾರಿ ಎಂದು ಹೇಳಿ ಕರೆ ಮಾಡಿ ವಂಚನೆ 

ಬೆಂಗಳೂರು:  ಟೋಲ್ ಶುಲ್ಕ ಪಾವತಿಗೆ ಫಾಸ್ಟ್​ಟ್ಯಾಗ್ ಕಡ್ಡಾಯ ಆದೇಶವನ್ನೇ ದುರುಪಯೋಗಪಡಿಸಿಕೊಂಡಿರುವ ಸೈಬರ್ ಕಳ್ಳರು ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವ್ಯಕ್ತಿ ಬಳಿ 50 ಸಾವಿರ ರೂ. ದೋಚಿದ್ದಾರೆ. ಬಾಬುಸಾಬ್​ಪಾಳ್ಯದ ರಾಹುಲ್...

ನಾಳೆಯಿಂದ ಮಲೆಗಳಲ್ಲಿ ಮದುಮಗಳು, ಕಲಾಗ್ರಾಮದಲ್ಲಿ ಫೆ. 29ರವರೆಗೆ ಆಯೋಜನೆ 

ಬೆಂಗಳೂರು:  ರಾಷ್ಟ್ರಕವಿ ಕುವೆಂಪು ವಿರಚಿತ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ಆಧಾರಿತ ನಾಟಕ ಪ್ರದರ್ಶನಕ್ಕೆ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಕಲಾಗ್ರಾಮದಲ್ಲಿ ಜ.20ರಿಂದ ಫೆ.29ರವರೆಗೆ ಪ್ರದರ್ಶನಗೊಳ್ಳಲಿದೆ. ರಾಷ್ಟ್ರೀಯ...

ಅಕ್ಷರ ಜಾತ್ರೆಗೆ ಅನುದಾನದ ಬರ, ಬಿಡಿಗಾಸು ಬಿಚ್ಚದ ಸರ್ಕಾರ: ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ಧತೆಗೆ ಅಡ್ಡಿ ಆತಂಕ 

ಜ್ಞಾನಗಂಗೆ ಪರಿಸರದಲ್ಲಿ ಫೆ. 5ರಿಂದ ನಡೆಯಲಿರುವ ಮೂರು ದಿನಗಳ ಅಕ್ಷರ ಜಾತ್ರೆಗೆ ಅನುದಾನದ ಬರ ಉಂಟಾಗುವ ಆತಂಕ ಎದುರಾಗಿದೆ. ಸಮ್ಮೇಳನಕ್ಕೆ ಎರಡು ವಾರ ಬಾಕಿಯಿದ್ದು, ಸರ್ಕಾರ...

ಕರ್ನಾಟಕ ಒಂದರಲ್ಲಿಯೇ ಪ್ರತಿ ವರ್ಷ ಕನಿಷ್ಠ 10 ಸಾವಿರ ಮಂದಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದರೆ, ಸುಮಾರು 50 ಸಾವಿರ ಮಂದಿ ಗಾಯಾಳು ಗಳಾಗುತ್ತಿದ್ದಾರೆ. ಅತ್ಯಧಿಕ ರಸ್ತೆ ಅಪಘಾತ ಸಂಭವಿಸುತ್ತಿರುವ ಭಾರತದ ರಾಜ್ಯಗಳ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ! 15ರಿಂದ 45 ವರ್ಷ ವಯಸ್ಸಿನವರೇ ಅಪಘಾತಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣಗಳೇನು? ಅಪಘಾತ ಸಂಭವಿಸದ ಹಾಗೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬಹುದು?

ಸುನಾಮಿ, ಭೂಕಂಪದಂಥ ನೈಸರ್ಗಿಕ ವಿಕೋಪಗಳನ್ನು ನೆನೆಸಿಕೊಂಡರೆ ಮೈ ಜುಂ ಎನ್ನುತ್ತದೆಯಲ್ಲವೇ? ಆದರೆ ನಿಮಗೆ ಗೊತ್ತೆ? ನೈಸರ್ಗಿಕ ವಿಕೋಪಗಳಲ್ಲಿ ಸಾವನ್ನಪು್ಪವವರ ಸಂಖ್ಯೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಾಯುತ್ತಿರುವುದು ರಸ್ತೆ ಅಪಘಾತಗಳಲ್ಲಿ!

ಹೌದು. ಭಾರತ ಒಂದರಲ್ಲಿಯೇ ಪ್ರತಿವರ್ಷ 12 ಲಕ್ಷ ಮಂದಿ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಅತ್ಯಧಿಕ ರಸ್ತೆ ಅಪಘಾತ ಸಂಭವಿಸುತ್ತಿರುವ ಕುಖ್ಯಾತಿಯ ಪಟ್ಟಿಯಲ್ಲಿ ಕರ್ನಾಟಕಕ್ಕೆ ನಾಲ್ಕನೆಯ ಸ್ಥಾನ. 2018ರ ನವೆಂಬರ್ 30ರವರೆಗೆ ಕರ್ನಾಟಕದಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳು 37,930. ಈ ಪೈಕಿ ಮೃತಪಟ್ಟವರ ಸಂಖ್ಯೆ 9444, ಗಾಯಾಳುಗಳ ಸಂಖ್ಯೆ 47,436.

ಅಷ್ಟಕ್ಕೂ ಸಂಚಾರ ನಿಯಮ ಪಾಲಿಸದೇ ಇರುವುದು ಅಪಘಾತ ಸಂಭವಿಸಲು ಮೂಲ ಕಾರಣ ಎಂಬುದು ಯಾರಿಗೂ ತಿಳಿಯದ ವಿಷಯವೇನಲ್ಲ. ಆದರೂ ತಮಗೇನೂ ಆಗುವುದಿಲ್ಲ ಎಂಬ ಹುಂಬ ಧೈರ್ಯ ಪ್ರಾಣಕ್ಕೆ ಕುತ್ತಾಗುತ್ತಿದೆ. ನಿಯಮಗಳನ್ನು ಮೀರಿದ ಸಂದರ್ಭಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತಕ್ಕೀಡಾಗುವವರ ಸಂಖ್ಯೆಯೂ ಅಧಿಕವಾಗಿದೆ.

ಸಾವಿನ ಬಾಗಿಲಿಗೆ ಮೊಬೈಲ್ ಫೋನ್: ಈಗ ಜನರಿಗೆ ಕೈಯಲ್ಲಿ ಮೊಬೈಲ್ ಫೋನ್ ಇಲ್ಲದೇ ಹೋದರೆ ಸ್ವಲ್ಪ ಸಮಯವೂ ಇರಲು ಆಗುವುದಿಲ್ಲ ಎನ್ನುವುದು ನಿಜವೇ. ಹಾಗೆಂದು ವಾಹನ ಚಾಲನೆ ಮಾಡುವ ವೇಳೆಯೂ ಮೊಬೈಲ್, ಕೈಯಲ್ಲಿ ಇರಬೇಕು ಎಂದರೆ ಹೇಗೆ? ರಸ್ತೆ ಅಪಘಾತಗಳ ಪೈಕಿ ಮೊಬೈಲ್ ಫೋನ್​ಗೆ 1ನೇ ಸ್ಥಾನ. ಕಳೆದ ವರ್ಷ ಮೊಬೈಲ್ ಫೋನ್ ಒಂದರಿಂದಲೇ ಸಾಯುತ್ತಿರುವವರ ಸಂಖ್ಯೆ 2 ಸಾವಿರ ಮೀರಿದೆ. ತಲೆಯ ಮೇಲೆ ಇರಬೇಕಿರುವ ಹೆಲ್ಮೆಟ್ ಬೈಕ್​ನ ಕನ್ನಡಿಯ ಮೇಲಿದ್ದರೆ, ಜೇಬಿನಲ್ಲಿರಬೇಕಾದ ಮೊಬೈಲ್ ಫೋನ್ ಕುತ್ತಿಗೆಯನ್ನು ಓರೆಯಾಗಿಸಿ, ಕಿವಿ-ಭುಜವನ್ನು ಒಂದು ಮಾಡಿರುತ್ತದೆ. ಟ್ರಾಫಿಕ್ ಶಬ್ದದಿಂದಲೋ ಅಥವಾ ಸಿಗ್ನಲ್ ವೀಕ್ ಆಗಿದ್ದಾಗಲೋ ಅತ್ತ ಕಡೆಯಿಂದ ಬರುವ ಕರೆಗಳ ಧ್ವನಿ ಕೇಳದಿದ್ದಾಗ ಅದರ ಮೇಲೆ ಮನಸ್ಸು ಕೇಂದ್ರೀಕೃತವಾಗುತ್ತದೆ. ಅತ್ತ ಕಡೆಯ ಧ್ವನಿ ಕೇಳಿಸುತ್ತಿದ್ದರೂ ಮಾತನಾಡುವ ಭರದಲ್ಲಿ ಟ್ರಾಫಿಕ್ಕೂ ಕಾಣಿಸುವುದಿಲ್ಲ, ಸಿಗ್ನಲ್ಲೂ ಗೋಚರಿಸುವುದಿಲ್ಲ.

ಅಕ್ಕ-ಪಕ್ಕದಲ್ಲಿ ಬರುವ ವಾಹನಗಳು, ಮನುಷ್ಯರ ಪರಿವೆಯೂ ಇರುವುದಿಲ್ಲ. ಇನ್ನು ಕೆಲವರದ್ದು ಗಾಡಿ ಚಲಾಯಿಸುತ್ತಲೇ ಮೆಸೇಜ್ ಮಾಡುವ ಹುಚ್ಚು ಸಾಹಸ. ಆ ಒಂದು ಕ್ಷಣದ ಮೈಮರೆಯುವಿಕೆ, ಸವಾರರನ್ನು ಸಾವಿನ ಸನಿಹಕ್ಕೆ ಒಯ್ಯುತ್ತದೆ, ಇಲ್ಲವೇ ಶಾಶ್ವತವಾಗಿ ಅಂಗವಿಕರಲನ್ನಾಗಿ ಮಾಡುತ್ತಿದೆ.

ವೇಗಕ್ಕಿರಲಿ ಮಿತಿ: Speed thrills, but kills ಎಂಬ ಬೋರ್ಡ್ ಎಲ್ಲಾ ಕಡೆ ನೋಡುತ್ತಿರುತ್ತೀರಿ ಅಲ್ಲವೇ? ಆದರೆ ‘ನನಗೆ ನನ್ನ ಚಾಲನೆ ಮೇಲೆ ಫುಲ್ ಕಾನ್ಪಿಡೆನ್ಸ್ ಇದೆ’ ಎಂದುಕೊಂಡು ಸ್ಪೀಡ್ ಆಗಿ ಗಾಡಿ ಓಡಿಸುವವರೇ ಹೆಚ್ಚು. ಇನ್ನು ಕೆಲವರಿಗೆ ಸ್ಪೀಡ್ ಡ್ರೖೆವ್ ಎನ್ನುವುದು ಕ್ರೇಜು- ಮೋಜು. ಅದರಲ್ಲೂ ಯುವಕರಲ್ಲಿ ಈ ಕ್ರೇಜ್ ಹೆಚ್ಚಾಗುವುದು ಯಾರಾದರೂ ತಮ್ಮನ್ನು ಗಮನಿಸುತ್ತಿದ್ದಾರೆ ಎಂದು ತಿಳಿದಾಗ. ಆದರೆ ಇಂಥ ಮೋಜಿಗೆ ಜೀವ ಕಳೆದುಕೊಳ್ಳುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದೆ. ಇದರ ಜತೆ ಪ್ರಾಣಕ್ಕೆ ಕುತ್ತು ತರುವ ಡ್ರ್ಯಾಗ್​ರೇಸ್, ವ್ಹೀಲಿಂಗ್ ಹುಚ್ಚು. ಇತರರನ್ನು ತಮ್ಮತ್ತ ಸೆಳೆದುಕೊಳ್ಳುವ ತಂತ್ರವಿದು. ಇದು ಒಂದೆಡೆಯಾದರೆ, ಕಚೇರಿಯನ್ನೋ, ತಾವು ತಲುಪಬೇಕಾಗಿರುವ ಸ್ಥಳವನ್ನೋ ಲಗುಬಗೆಯಿಂದ ತಲುಪುವ ಅವಸರ ಇನ್ನು ಹಲವರದ್ದು. ಅದಕ್ಕಾಗಿ ಗಾಡಿಯ ವೇಗ ಹೆಚ್ಚಿಸುತ್ತಾರೆ. ಆದರೆ 5-10 ನಿಮಿಷವನ್ನು ಉಳಿಸಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿರುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ಈ ರೀತಿ ಎಡವಟ್ಟು ಮಾಡಿಕೊಳ್ಳುವವರ ಸಂಖ್ಯೆಎಲ್ಲಾ ರೀತಿಯ ರಸ್ತೆ ಅಪಘಾತಗಳಿಗೆ ಹೋಲಿಸಿದರೆ ಶೇ 43.70. ಕಳೆದ ವರ್ಷ ವೇಗದ ಚಾಲನೆ ಮಾಡಿ ಭಾರತದಲ್ಲಿ 69,969 ಮಂದಿ ಜೀವ ಕಳೆದುಕೊಂಡಿದ್ದರೆ, 2,12,815 ಮಂದಿ ಗಾಯಗೊಂಡಿದ್ದಾರೆ.

ಹೇರ್​ಸ್ಟೈಲ್​ಗಿಂತ ಹೆಲ್ಮೆಟ್ ಮುಖ್ಯ

ದ್ವಿಚಕ್ರವಾಹನ ಚಾಲಕರಿಗೆ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದರೂ ಎಷ್ಟೋ ಮಂದಿ ಅದನ್ನು ಧರಿಸುವುದೇ ಇಲ್ಲ. ವಾಹನ ಸವಾರರ ಪ್ರಾಣಕ್ಕೆ ಕುತ್ತು ಬರುವುದು ತಲೆಗೆ (ಮೆದುಳಿಗೆ) ಏಟು ಬಿದ್ದಾಗಲೇ ಎಂಬುದನ್ನು ಗಮನದಲ್ಲಿ ಇರಿಸಿಕೊಂಡೇ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಆದರೆ ಈಗಿನ ಯುವಕ-ಯುವತಿಯರಿಗೆ ಹೇರ್​ಸ್ಟೈಲ್ ಎಲ್ಲಿ ಹಾಳಾಗಿಬಿಡುವುದೋ ಎಂಬ ಭಯ. ಇಲ್ಲವೇ ನಾಮ್ೇವಾಸ್ತೆ ಎಂಬಂತೆ ಯಾವುದೇ ರೀತಿಯ ಸುರಕ್ಷತೆ ಇಲ್ಲದ ಹೆಲ್ಮೆಟ್ ಧರಿಸುವುದು, ಹೆಲ್ಮೆಟ್ ಅನ್ನು ಮೇಲ್ಮುಖವಾಗಿ ತಲೆಯ ಮೇಲೆ ಸ್ಟೈಲ್ ಆಗಿ ಇರಿಸಿಕೊಳ್ಳುವುದು… ಇವೆಲ್ಲಾ ಸಾಮಾನ್ಯವಾಗಿ ಬಿಟ್ಟಿದೆ. ಸೆಖೆ ಕಾಲದಲ್ಲಿ ಹೆಲ್ಮೆಟ್ ಧರಿಸಿದಾಗ ಧಗೆ ಉಂಟಾಗುವುದು ನಿಜವಾದರೂ ಧಗೆ ಪ್ರಾಣಕ್ಕಿಂತ ಹೆಚ್ಚು ಅಲ್ಲ ಅಲ್ಲವೇ? ಸರ್ಕಾರ ಹೆಲ್ಮೆಟ್ ಕಡ್ಡಾಯ ಮಾಡಿದ ಮೇಲೆ ಹಿಂದಿಗಿಂತ ಶೇ 42ರಷ್ಟು ಮಂದಿ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನುತ್ತದೆ ಪೊಲೀಸ್ ಇಲಾಖೆ ದಾಖಲೆ. ಅದೇ ರೀತಿ ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸುವುದು ಅತಿ ಅವಶ್ಯಕ. ಅಪಘಾತ ಸಂಭವಿಸಿದಾಗ ಸವಾರರ ಮುಖ ಸ್ಟೇರಿಂಗ್​ಗೆ ಹೋಗಿ ಗುದ್ದಬಾರದು ಎಂಬ ಕಾರಣಕ್ಕೆ ಈ ಸುರಕ್ಷತೆ ಮಾಡಲಾಗಿದೆ. ಆದರೆ ಕೆಲವರಿಗೆ ಈ ನಿಯಮ ಪಾಲಿಸುವುದೂ ಕಷ್ಟ!

ಡ್ರಂಕ್ ಆಂಡ್ ಡ್ರೖೆವ್

ಕುಡಿದ ಅಮಲಿನಲ್ಲಿ ವ್ಯಕ್ತಿ ಏನೇನು ಎಡವಟ್ಟು ಮಾಡಿಕೊಳ್ಳಲು ಸಾಧ್ಯ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಪಾರ್ಟಿ, ಫಂಕ್ಷನ್​ಗಳಲ್ಲಿ ಕುಡಿದು ಮತ್ತೇರಿದಾಗ ಗಾಡಿ ಓಡಿಸಿ ಜೀವ ಕಳೆದುಕೊಳ್ಳುವವರಿಗೇನೂ ಕಮ್ಮಿ ಇಲ್ಲ. ಇಂಥ ಸಂದರ್ಭಗಳಲ್ಲಿ ದಾರಿ ಬದಿಯಲ್ಲಿ ಹೋಗುತ್ತಿರುವವರು, ಬೇರೆ ಗಾಡಿಗಳಲ್ಲಿ ಚಲಿಸುತ್ತಿರುವವರು ಬಲಿಯಾಗುವುದೇ ಹೆಚ್ಚು. ಇದರ ಜತೆಗೆ, ನಿದ್ದೆಗಣ್ಣಿನ ಚಾಲನೆ ಕೂಡ ಅತ್ಯಂತ ಅಪಾಯಕಾರಿ. ರೆಪ್ಪೆ ಭಾರವಾಗಿದ್ದರೆ, ಕಣ್ಣು ತೆರೆಯಲು ಕಷ್ಟವಾಗುತ್ತಿದ್ದರೆ, ತೂಕಡಿಕೆ- ಆಕಳಿಕೆ ಬರುತ್ತಿದ್ದರೆ ತಕ್ಷಣ ಗಾಡಿ ಚಲಾಯಿಸುವುದನ್ನು ನಿಲ್ಲಿಸಿಬಿಡಬೇಕು. ಪೊಲೀಸ್ ಇಲಾಖೆಯಿಂದ ನಾವು ಎಷ್ಟೇ ಅರಿವು ಕಾರ್ಯಾಗಾರ, ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಮಾಡಬಹುದು. ಆದರೆ ಅಂತಿಮವಾಗಿ ನಿಮ್ಮ ಪ್ರಾಣಕ್ಕೆ ನೀವೇ ಜವಾಬ್ದಾರರು ಎಂಬುದಂತೂ ಸತ್ಯ. ಕಾನೂನು-ನಿಯಮಗಳಿಂದಲೇ ಎಲ್ಲವನ್ನೂ ಸರಿ ಮಾಡಲು ಆಗುವುದಿಲ್ಲ. ಆದ್ದರಿಂದ, ಯುವಕರೇ ಸ್ವಲ್ಪ ಹುಷಾರ್! ವಾಹನಗಳು ಇರುವುದು ನೀವು ತಲುಪಬೇಕಿರುವ ಜಾಗವನ್ನು ತಲುಪಿಸಲೇ ವಿನಾ, ಮಸಣದವರೆಗೆ ಒಯ್ಯಲು ಹಾಗೂ ಅಮಾಯಕರನ್ನು ಸಾವಿನ ಬಾಯಿಗೆ ನೂಕಲು ಅಲ್ಲ. ನೀವೂ ಬದುಕಿ, ಇತರರನ್ನೂ ಬದುಕಲು ಬಿಡಿ.

ಪರವಾನಗಿ ರದ್ದು

ರಸ್ತೆ ಸುರಕ್ಷೆಯ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ರಸ್ತೆ ಸುರಕ್ಷಾ ಸಮಿತಿ ರಚನೆ ಮಾಡಲು ನಿರ್ದೇಶಿಸಿತ್ತು. ಜತೆಗೆ, ಒಂದಿಷ್ಟು ನಿಯಮಗಳ ಜಾರಿಗೆ ಆದೇಶಿಸಿದೆ. ಈ ನಿಯಮದ ಪ್ರಕಾರ ವಾಹನ ಚಾಲನೆಯ ಸಂದರ್ಭದಲ್ಲಿ ಮೊಬೈಲ್​ನಲ್ಲಿ ಮಾತನಾಡಿದರೆ, ಅತಿ ವೇಗ ಚಾಲನೆ ಮಾಡಿದರೆ, ಮಿತಿ ಮೀರಿ ಸರಕು ಸಾಗಿಸಿದರೆ, ಮದ್ಯಪಾನ ಮಾಡಿ ವಾಹನ ಸಂಚಾರ ಮಾಡಿದರೆ, ಗೂಡ್ಸ್ ವಾಹನಗಳಲ್ಲಿ ಮಾನವ ಸಾಗಾಟ ಮಾಡಿ ಸಿಕ್ಕಿಬಿದ್ದರೆ ದಂಡ ಕಟ್ಟಲೂ ಚಾಲಕನಿಗೆ ಅವಕಾಶವಿರುವುದಿಲ್ಲ. ಕಡ್ಡಾಯವಾಗಿ ಆತನ ಪರವಾನಗಿ ಮೂರು ತಿಂಗಳ ಕಾಲ ಅಮಾನತಿನಲ್ಲಿರಿಸಲಾಗುತ್ತದೆ. ಒಂದು ವೇಳೆ ಇದೇ ತಪ್ಪನ್ನು ಪದೇ ಪದೇ ಮಾಡಿದರೆ ಚಾಲಕನ ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಅಧಿಕಾರ ಸಾರಿಗೆ ಇಲಾಖೆಗೆ ಇದೆ.

ಇವುಗಳೂ ನೆನಪಿರಲಿ

 • ನೀರು ಬಿದ್ದಿರುವ, ಮರಳು ಜಲ್ಲಿ ತುಂಬಿದ ರಸ್ತೆಗಳಲ್ಲಿ ಚಲಿಸುವಾಗ ನಿಧಾನವಾಗಿ ಚಲಾಯಿಸಿ. ಆಗ ಬ್ರೇಕ್ ಹಾಕುವಾಗ ವಾಹನ ಜಾರುವುದಿಲ್ಲ.
 • ನಿಮ್ಮ ವಾಹನಗಳ ಟೈರ್​ಗಳನ್ನು ಆಗಾಗ ಪರೀಕ್ಷಿಸಿಕೊಳ್ಳಿ. ಅವು ಸವೆದುಹೋಗಿದ್ದರೆ ಬದಲಾಯಿಸಿಕೊಳ್ಳಿ.
 • ಕೆಲವು ಅಪಘಾತಗಳು ಬ್ರೆಕ್ ಫೇಲ್ ಆಗುವುದರಿಂದಲೂ ಸಂಭವಿಸುತ್ತವೆ. ಆದ್ದರಿಂದ ಚಾಲನೆಗೂ ಮುನ್ನ ಬ್ರೆಕ್ ಅನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ.
 • ಗಾಡಿಯನ್ನು ಆಗಾಗ್ಗೆ ಸರ್ವೀಸ್ ಮಾಡಿಸುತ್ತಿರಿ.
 • ರಸ್ತೆ ದಾಟುವಾಗ ಎಚ್ಚರವಿರಲಿ.

ರಸ್ತೆ ಸುರಕ್ಷತೆಗೆ ತೆಗೆದು ಕೊಂಡಿರುವ ಕ್ರಮಗಳು

ಪೊಲೀಸ್ ಇಲಾಖೆಯಿಂದ ರಸ್ತೆ ಸುರಕ್ಷತೆಗಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

 • ಜನರಲ್ಲಿ ಅದರಲ್ಲೂ ಮುಖ್ಯವಾಗಿ 25-40 ವರ್ಷ ವಯೋಮಾನದವರಿಗೆ ಅರಿವು ಕಾರ್ಯಕ್ರಮಗಳ ಆಯೋಜನೆ.
 • ವಾಹನ ಚಾಲನೆ ಮಾಡುವಾಗ ಮೈಮೇಲೆ ಎಚ್ಚರಿಕೆ ಇರುವ ಮಟ್ಟದಲ್ಲಷ್ಟೇ ಮದ್ಯ ಪೂರೈಕೆ ಮಾಡುವಂತೆ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರಿಗೆ ತರಬೇತಿ ಕಾರ್ಯಾಗಾರ.
 • ಚಾಲಕರಲ್ಲಿ ಬ್ಲಡ್ ಆಲ್ಕೋಹಾಲ್ ಕಂಟೆಂಟ್ (ಬಿಎಸಿ) ಪತ್ತೆಯಾದರೆ ಅವರಿಗೆ ಜೈಲು ಶಿಕ್ಷೆ ವಿಧಿಸುವ ನಿಯಮ.
 • ತಪ್ಪಿತಸ್ಥರ ಡಿಎಲ್ ರದ್ದತಿಗೆ ಕ್ರಮ.
 • ತಾವು ಕುಡಿದಿರುವ ಪ್ರಮಾಣ ಎಷ್ಟು ಎಂಬುದು ಚಾಲಕರಿಗೇ ತಿಳಿಸುವಂಥ ಉಪಕರಣ ತಯಾರಿ.
 • ರಸ್ತೆ ದುರಸ್ತಿ.
 • ಸಾರ್ವಜನಿಕ ಸಾರಿಗೆಗಳಿಗೆ ಸ್ಪೀಡ್ ಗವರ್ನರ್ ಅಡವಳಿಕೆ.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...