ಕೊನೆಗೂ ಈ ಚಿತ್ರಗಳಲ್ಲಿ ರಾಜ್ ನಟಿಸಲೇ ಇಲ್ಲ!

blank

ಡಾ. ರಾಜಕುಮಾರ್ ಅಭಿನಯದ ‘ಅಮೋಘವರ್ಷ ನೃಪತುಂಗ’ ಎಂಬ 200ನೇ ಚಿತ್ರದ ಗೀತೆಗಳ ಧ್ವನಿಮುದ್ರಣ ಕೆಲಸ ಇಂದಿನಿಂದ ಪ್ರಾರಂಭ … ಇಂಥದ್ದೊಂದು ಜಾಹೀರಾತು 33-34 ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಕೆಲವರಿಗೆ ನೆನಪಿರಬಹುದು. ಆದರೆ, ಕಾರಣಾಂತರಗಳಿಂದ ಈ ಚಿತ್ರ ಸೆಟ್ಟೇರಲಿಲ್ಲ. ಕೊನೆಗೆ ಡಾ. ರಾಜಕುಮಾರ್ ಅವರ 200ನೇ ಚಿತ್ರವಾಗಿ ‘ದೇವತಾ ಮನುಷ್ಯ’ ಬಿಡುಗಡೆಯಾಯಿತು. ಬರೀ ‘ಅಮೋಘವರ್ಷ ನೃಪತುಂಗ’ ಚಿತ್ರವೊಂದೇ ಅಲ್ಲ, ರಾಜಕುಮಾರ್ ಅವರು ಇಷ್ಟಪಟ್ಟು ಒಪ್ಪಿಕೊಂಡಿದ್ದ ಕೆಲವು ಚಿತ್ರಗಳು ಕಾರಣಾಂತರಗಳಿಂದ ಶುರುವಾಗಲೇ ಇಲ್ಲ. ಆ ಬಗ್ಗೆ ಅವರ ಅಭಿಮಾನಿಗಳಲ್ಲಿ ಈಗಲೂ ಬೇಸರವಿದ್ದೇ ಇದೆ.

blank

ರಾಜಕುಮಾರ್ ಅವರಿಗೆ ‘ಭಕ್ತ ಅಂಬರೀಶ’ ಚಿತ್ರದಲ್ಲಿ ನಟಿಸುವುದು ಜೀವಮಾನದ ಆಸೆಯಾಗಿತ್ತು ಎಂಬುದು ಗೊತ್ತಿರುವ ವಿಷಯವೇ. ಅದಕ್ಕೆ ಕಾರಣವೂ ಇದೆ. ಪ್ರಮುಖವಾಗಿ, ರಾಜಕುಮಾರ್​ರಂಗಭೂಮಿಯಲ್ಲಿದ್ದ ಸಮಯದಲ್ಲಿ ‘ಭಕ್ತ ಅಂಬರೀಶ’ ನಾಟಕದಲ್ಲಿ ಅಭಿನಯಿಸುತ್ತಿದ್ದರಂತೆ. ಕೊನೆಗೆ ಅವರು ಚಿತ್ರರಂಗಕ್ಕೆ ಬಂದು ಸಿನಿಮಾಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದರೂ, ಆ ನಾಟಕ ಮತ್ತು ಅದರಲ್ಲಿನ ಅಂಬರೀಶನ ಪಾತ್ರ ಅವರನ್ನು ಕಾಡುತ್ತಲೇ ಇತ್ತಂತೆ. ಅದೇ ಕಾರಣಕ್ಕೆ, ‘ಭಕ್ತ ಅಂಬರೀಶ’ ಚಿತ್ರದಲ್ಲಿ ನಟಿಸುವ ಆಸೆಯನ್ನು ಆಗಾಗ ವ್ಯಕ್ತಪಡಿಸುತ್ತಲೇ ಇದ್ದರು ರಾಜ್. ಅದಕ್ಕೆ ಸರಿಯಾಗಿ, ವಿಜಯ್ ನಿರ್ದೇಶನದಲ್ಲಿ ಚಿತ್ರ ಸಹ ಸೆಟ್ಟೇರಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರ ಮುಂದುವರೆಯಲೇ ಇಲ್ಲ.

‘ಭಕ್ತ ಅಂಬರೀಶ’ ಅಲ್ಲದೆ ರಾಜಕುಮಾರ್ ಅವರು ನಟಿಸದೇ ಇರುವ, ಆದರೂ ಅವರು ನಟಿಸುತ್ತಾರೆ ಎಂಬ ಕಾರಣಕ್ಕೆ ಸುದ್ದಿಯಾಗಿದ್ದ ಇನ್ನೊಂದು ಚಿತ್ರವೆಂದರೆ ಅದು ‘ಅಮೋಘವರ್ಷ ನೃಪತುಂಗ’. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರವು ರಾಜಕುಮಾರ್ ಅವರ 200ನೇ ಚಿತ್ರವಾಗಬೇಕಿತ್ತು. ಎಂ. ರಂಗರಾವ್ ಅವರ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳ ಧ್ವನಿಮುದ್ರಣ ಕೆಲಸಗಳು ಸಹ ಪ್ರಾರಂಭವಾಗಿದ್ದವು. ಆದರೆ, ಚಿತ್ರ ಕಾರಣಾಂತರಗಳಿಂದ ಸೆಟ್ಟೇರಲೇ ಇಲ್ಲ. ಅದರ ಬದಲು ಅವರ 200ನೇ ಚಿತ್ರವಾಗಿದ್ದು ‘ದೇವತಾ ಮನುಷ್ಯ’.

‘ಅಮೋಘವರ್ಷ ನೃಪತುಂಗ’ ಚಿತ್ರವು ತ.ರಾ.ಸು. ಅವರ ಕಾದಂಬರಿಯನ್ನಾಧರಿಸಿದ ಚಿತ್ರ. ತ.ರಾ.ಸು ವಿರಚಿತ ‘ಚಂದವಳ್ಳಿಯ ತೋಟ’, ‘ಮಾರ್ಗದರ್ಶಿ’, ‘ಚಕ್ರತೀರ್ಥ’ ಮುಂತಾದ ಕಾದಂಬರಿಗಳನ್ನು ಆಧರಿಸಿ ನಿರ್ವಿುಸಲಾದ ಚಿತ್ರಗಳಲ್ಲಿ ರಾಜಕುಮಾರ್ ಅವರು ನಟಿಸಿದ್ದು, ಅಂತೆಯೇ ‘ಅಮೋಘವರ್ಷ ನೃಪತುಂಗ’ ಚಿತ್ರದಲ್ಲೂ ನಟಿಸುವ ಆಸೆ ವ್ಯಕ್ತಪಡಿಸಿದ್ದರಂತೆ. ಅದಕ್ಕೆ ಕಾರಣಕರ್ತರಾದವರು ರಾಜಕುಮಾರ್ ಅವರ ಬಾಲ್ಯದ ಗೆಳೆಯ ತಿಪಟೂರು ರಾಮಸ್ವಾಮಿ. ‘ನೃಪತುಂಗ’ ಕಾದಂಬರಿಯನ್ನು ಓದಿ ಬಹಳ ಪ್ರಭಾವಿತರಾದ ರಾಮಸ್ವಾಮಿಗಳು, ರಾಜಕುಮಾರ್ ಅವರಿಗೆ ಪುಸ್ತಕವನ್ನು ಕೊಟ್ಟು, ಈ ಚಿತ್ರದಲ್ಲಿ ನೀವು ನಟಿಸಿದರೆ ಬಹಳ ಚೆನ್ನಾಗಿರುತ್ತದೆ ಎಂದು ಹೇಳಿದ್ದರಂತೆ. ಜತೆಗೆ ಒಂದು ಷರತ್ತನ್ನೂ ಹಾಕಿದ್ದರಂತೆ. ಅದೇನೆಂದರೆ, ನೃಪತುಂಗ ಮತ್ತು ಅವನ ಮಗನ ಪಾತ್ರವನ್ನೂ ರಾಜಕುಮಾರ್ ಅವರೇ ಮಾಡಬೇಕು ಎಂದು ಹೇಳಿದ್ದರಂತೆ. ಅದಕ್ಕೆ ಸರಿಯಾಗಿ, ಅಪ್ಪ-ಮಗನ ಪಾತ್ರವನ್ನು ಮಾಡುವುದಕ್ಕೆ ರಾಜಕುಮಾರ್ ಸಹ ಒಪ್ಪಿಕೊಂಡರಂತೆ. ಕೊನೆಗೆ ‘ಅಮೋಘವರ್ಷ ನೃಪತುಂಗ’ ಚಿತ್ರವನ್ನು ನಿರ್ವಿುಸುವ ಯೋಜನೆ ಪ್ರಾರಂಭವಾಗಿ, ಚಿತ್ರದ ಹಕ್ಕುಗಳನ್ನು ಪಡೆಯುವುದಕ್ಕೆ ರಾಜಕುಮಾರ್ ಮತ್ತು ಪಾರ್ವತಮ್ಮ ಇಬ್ಬರೂ ತ.ರಾ.ಸು ಅವರ ಅನುಮತಿ ಪಡೆಯುವುದಕ್ಕೆ ಮೈಸೂರಿನ ಅವರ ಮನೆಗೆ ಹೋಗುತ್ತಾರೆ. ತ.ರಾ.ಸು ಅವರನ್ನು ಭೇಟಿ ಮಾಡಿ, ಹಕ್ಕುಗಳಿಗೆ ಮನವಿ ಸಲ್ಲಿಸುತ್ತಾರೆ. ಇದರಿಂದ ತುಂಬ ಖುಷಿಗೊಂಡ ತ.ರಾ.ಸು, ಹಕ್ಕುಗಳನ್ನು ಕೊಡುವುದಕ್ಕೆ ಮುಂದಾಗಿದ್ದಲ್ಲದೆ, ಚಿತ್ರದ ಸಂಭಾಷಣೆಗಳನ್ನು ಬರೆದುಕೊಡುವುದಾಗಿಯೂ ಹೇಳುತ್ತಾರಂತೆ. ಆದರೆ, ಅದ್ಯಾಕೋ ಈ ಚಿತ್ರ ಸೆಟ್ಟೇರಲೇ ಇಲ್ಲ. ‘‘ನೃಪತುಂಗ’ ಚಿತ್ರವನ್ನು ಡಾ. ರಾಜಕುಮಾರ್ ಅವರೇನಾದರೂ ಮಾಡಿದ್ದರೆ, ಶತಶತಮಾನಗಳವರೆಗೂ ಅದೊಂದು ದಾಖಲೆಯಾಗಿ ಉಳಿದುಹೋಗುತ್ತಿತ್ತು’ ಎಂದು ರಾಮಸ್ವಾಮಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದಲ್ಲದೆ ರಾಜಕುಮಾರ್ ಅವರು ಅಭಿನಯಿಸಬೇಕಿದ್ದ ಇನ್ನೊಂದು ಚಿತ್ರವೆಂದರೆ, ಅದು ‘ಗಂಡುಗಲಿ ಕುಮಾರರಾಮ’. ಈ ಚಿತ್ರದ ಮುಹೂರ್ತ ಸಹ ನೆರವೇರಿದ್ದು, ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಬೇಕಿತ್ತು ಎಂದು ಚರಿತ್ರೆಯ ಪುಟಗಳು ಹೇಳುತ್ತವೆ. ಆದರೆ, ಕಥೆಯಲ್ಲಿನ ಕೆಲವು ಘಟನೆಗಳ ಬಗ್ಗೆ ಅಪಸ್ವರಗಳು ಕೇಳಿಬಂದ ಕಾರಣ, ಆ ಚಿತ್ರವನ್ನು ಮುಂದುವರೆಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತದೆ. ನಂತರದ ವರ್ಷಗಳಲ್ಲಿ, ರಾಜಕುಮಾರ್ ಅವರು ಮಾಡಬೇಕಿದ್ದ ಪಾತ್ರವನ್ನು ಅವರ ಮಗ ಶಿವರಾಜಕುಮಾರ್ ಮಾಡಿದರು ಎನ್ನುವುದು ವಿಶೇಷ.

blank

ಇದಲ್ಲದೆ, ಚಿತ್ರೀಕರಣ ಪ್ರಾರಂಭವಾಗಿ ಮಧ್ಯದಲ್ಲೇ ನಿಂತು ಹೋದ ರಾಜಕುಮಾರ್ ಅವರ ಇನ್ನೊಂದು ಪ್ರಮುಖ ಚಿತ್ರ ಎಂದರೆ, ಅದು ‘ಲವ-ಕುಶ’. ತೆಲುಗಿನ ಖ್ಯಾತ ನಟ ಕೃಷ್ಣ ಅವರು ತಮ್ಮ ಪದ್ಮಾಲಯ ಸ್ಟುಡಿಯೋಸ್​ನಲ್ಲಿ ‘ಲವ-ಕುಶ’ ಚಿತ್ರದ ನಿರ್ವಣಕ್ಕೆ ಕೆಲವು ವರ್ಷಗಳ ಹಿಂದೆ ಮುಂದಾಗಿದ್ದರು. ರಾಜಕುಮಾರ್ ಮತ್ತು ಜಯಪ್ರದಾ, ರಾಮ-ಸೀತೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರದ ಚಿತ್ರೀಕರಣ ಸಹ ಅರ್ಧದಷ್ಟು ಮುಗಿದಿತ್ತು. ಆದರೆ, ಚಿತ್ರದ ವಿತರಣೆಯ ವಿವಾದದಿಂದಾಗಿ ಈ ಚಿತ್ರ ಮುಂದುವರೆಯಲಿಲ್ಲ ಎಂದು ಹೇಳಲಾಗುತ್ತದೆ.

ಕೊನೆಗೂ ಈ ಚಿತ್ರಗಳಲ್ಲಿ ರಾಜ್ ನಟಿಸಲೇ ಇಲ್ಲ!

ಕೋವಿಡ್​ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್​ ಸಿಗುತ್ತಿಲ್ಲ ಎಂಬ ಚಿಂತೆಯೇ?; ಇಲ್ಲಿದೆ ನೋಡಿ ರಿಯಲ್ ಟೈಮ್ ಮಾಹಿತಿ

ಉಗುರು ಉದ್ದ ಇದೆ, ಓಲೆ ದೊಡ್ಡದಿದೆ, ಜತೆಗೆ ಮೊಬೈಲ್​ಫೋನ್​ ಇದೆ ಎಂದು ಬೈದ ಪ್ರಾಂಶುಪಾಲ; ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

 

Share This Article

ಪುಷ್ಯ ನಕ್ಷತ್ರಕ್ಕೆ ಸೂರ್ಯನ ಎಂಟ್ರಿ! ಈ ತಿಂಗಳು 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Astrology

Astrology : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜನಿಸಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಅವರ…

ಮುಖದ ಸೌಂದರ್ಯಕ್ಕೆ ಐಸ್​​ಕ್ಯೂಬ್.. ಕೂಲ್.. ಕೂಲ್! ಐಸ್‌ಕ್ಯೂಬ್‌ನಿಂದ ಸೌಂದರ್ಯದ ಆರೈಕೆ.. Ice Facial Benefits

Ice Facial Benefits:  ಮಹಿಳಯರು ಸೌಂದರ್ಯಪ್ರಿಯರು. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಾಗೂ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು  ಮಾರುಕಟ್ಟೆಯಲ್ಲಿ…

ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits

Goat Milk Health Benefits :  ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…