More

  ಜಗನ್ v/s ​ಆಂಧ್ರ ಹೈಕೋರ್ಟ್: ಕಾಳಗದ ಹಕೀಕತ್ ಏನು?

  | ರಾಘವ ಶರ್ಮ ನಿಡ್ಲೆ ನವದೆಹಲಿ

  ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸುಪ್ರೀಂಕೋರ್ಟ್​ನ 2ನೇ ಹಿರಿಯ ನ್ಯಾಯಮೂರ್ತಿ ಎನ್.ವಿ. ರಮಣ ವಿರುದ್ಧ ಗಂಭೀರ ಆಪಾದನೆಗಳ ಪಟ್ಟಿ ಮಾಡಿ, ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್.ಎ. ಬೋಬ್ಡೆಯವರಿಗೆ ಕಳೆದ ಅಕೊ್ಟೕಬರ್​ನಲ್ಲಿ ದೂರು ನೀಡಿದ್ದ ವಿಚಾರ ಭಾರಿ ವಿವಾದವೆಬ್ಬಿಸಿತ್ತು. ನ್ಯಾಯಮೂರ್ತಿ ಎನ್.ವಿ.ರಮಣ ಆಂಧ್ರ ಹೈಕೋರ್ಟ್ ಕಾರ್ಯನಿರ್ವಹಣೆಯಲ್ಲಿ ಮೂಗು ತೂರಿಸುತ್ತಿದ್ದಾರೆ, ಹಲವು ಭ್ರಷ್ಟಾಚಾರ ಕೇಸುಗಳಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರಕ್ಷಣೆ ಮಾಡುತ್ತಿದ್ದಾರೆ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲೂ ಪ್ರಭಾವ ಬೀರುತ್ತಿದ್ದಾರೆ ಎನ್ನುವುದು ಜಗನ್ ದೂರಿನ ಸಾರವಾಗಿತ್ತು.

  ಈ ದೂರನ್ನು ಅಫಿಡವಿಟ್ ಮುಖೇನ ಸಲ್ಲಿಸಬೇಕು ಎಂದು ಜಗನ್​ಗೆ ಸುಪ್ರೀಂಕೋರ್ಟ್ ಸಿಜೆಐ ಎಸ್.ಎ.ಬೋಬ್ಡೆ ಇತ್ತೀಚೆಗೆ ನಿರ್ದೇಶನ ನೀಡಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಕಚೇರಿಯಿಂದ ದೂರಿನ ಪ್ರತಿಯನ್ನೇ ಅಫಿಡವಿಟ್ ರೂಪದಲ್ಲಿ ಸುಪ್ರೀಂಕೋರ್ಟ್​ಗೆ ಸಲ್ಲಿಸಲಾಗಿದೆ. ಮುಖ್ಯವಾಗಿ, ಜಗನ್ ಆರೋಪಗಳಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ಆಂಧ್ರ ಹೈಕೋರ್ಟ್ ಸಿಜೆಐ ಆಗಿದ್ದ ಜೆ.ಕೆ. ಮಹೇಶ್ವರಿಯವರಲ್ಲಿ ಸಿಜೆಐ ಕೇಳಿಕೊಂಡಿದ್ದಾರೆ. ಅಂತಿಮವಾಗಿ ಹೊರಬೀಳುವ ಸತ್ಯ ಏನೇ ಇರಬಹುದು, ಪಾರದರ್ಶಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಮುಖ್ಯ ನ್ಯಾಯಮೂರ್ತಿಗಳು ಇಂಥದ್ದೊಂದು ದೃಢ ನಿರ್ಧಾರ ತೆಗೆದುಕೊಂಡಿರಬಹುದು. ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಈಗಾಗಲೇ 300 ಪುಟಗಳ ಉತ್ತರ ನೀಡಿದ್ದಾರೆ ಎನ್ನಲಾಗಿದ್ದು, ಹಾಲಿ ಸರ್ಕಾರದ ನಡವಳಿಕೆ, ಜಗನ್ ಅಕ್ರಮಗಳ ಬಗ್ಗೆ ವಿಸõತ ಮಾಹಿತಿ ರವಾನಿಸಿದ್ದಾರೆ.

  ಜಗನ್ ಹೇಳುವುದೇನು?

  ‘ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆತಿ್ಮೕಯರು’ ಎಂಬ ನೇರ ಅರೋಪ ಜಗನ್ ಅಫಿಡವಿಟ್​ನಲ್ಲಿದೆ. ಇದನ್ನು ಪುಷ್ಟೀಕರಿಸುವ ದಾಖಲೆಗಳನ್ನೂ ಸಲ್ಲಿಸಲಾಗಿದೆ. ಈ ದೂರು ಸಲ್ಲಿಕೆಗೆ ಮುನ್ನ ಸೆಪ್ಟೆಂಬರ್ 16ರಂದು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠವು, ದೇಶದಲ್ಲಿರುವ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳ (ಸಂಸದ, ಶಾಸಕ) ಮೇಲಿರುವ ಕ್ರಿಮಿನಲ್ ಕೇಸುಗಳ ತ್ವರಿತಗತಿ ವಿಚಾರಣೆಯಾಗಬೇಕು ಮತ್ತು ವಿಚಾರಣೆಗೆ ಅಗತ್ಯವಿರುವ ವಿಶೇಷ ಕೋರ್ಟ್​ಗಳ ರಚನೆ, ಪ್ರತಿ ಜಿಲ್ಲೆಗಳಲ್ಲೂ ಬಾಕಿ ಇರುವ ಒಟ್ಟು ಕೇಸುಗಳು, ನ್ಯಾಯಾಧೀಶರ ಸಂಖ್ಯೆ, ಕೇಸುಗಳ ವಿಂಗಡಣೆ, ಪ್ರತಿ ಜಡ್ಜ್​ಗೆ ಹಂಚಿಕೆ ಮಾಡಿರುವ ಕೇಸುಗಳ ಪಟ್ಟಿ ಸೇರಿ ಸಮಗ್ರ ವರದಿ ಸಲ್ಲಿಸುವಂತೆ ಎಲ್ಲ ಹೖಕೋರ್ಟ್ ಸಿಜೆಗಳಿಗೆ ಸೂಚನೆ ನೀಡಿದ್ದರು. ಮುಖ್ಯವಾಗಿ, ಕ್ರಿಮಿನಲ್ ಕೇಸುಗಳಲ್ಲಿ ಅಪರಾಧಿ ಎಂದು ಸಾಬೀತಾಗುವ ರಾಜಕಾರಣಿಗಳಿಗೆ ಚುನಾವಣೆ ಸ್ಪರ್ಧೆಯಿಂದ ಶಾಶ್ವತ ನಿಷೇಧ ಹೇರುವ ಅರ್ಜಿಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದ್ದರು. ಈ ಆದೇಶ ಹೊರಬಿದ್ದ ಕೆಲವೇ ದಿನಗಳಲ್ಲಿ ರಮಣ ಕಾರ್ಯವೈಖರಿ ಪ್ರಶ್ನಿಸಿ ಜಗನ್ ಸುಪ್ರೀಂಕೋರ್ಟ್ ಸಿಜೆಐಗೆ ಪತ್ರ ಬರೆದಿದ್ದರು. ರಮಣ ತೀರ್ಪಿಗೂ, ಜಗನ್ ಪತ್ರಕ್ಕೂ ಸಂಬಂಧವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಪತ್ರ ಬರೆಯುವಿಕೆಯ ಸಂದರ್ಭಗಳು ಸಹಜ ಅನುಮಾನಗಳನ್ನು ಸೃಷ್ಟಿಸಿವೆ. ನ್ಯಾಯಾಂಗದಲ್ಲಿ ಪಾರರ್ಶಕತೆ ಇರಬೇಕು, ಅದು ಪಕ್ಷಪಾತಿ ಆಗಿರಬಾರದು ಮತ್ತು ಸ್ವತಂತ್ರವಾಗಿರಬೇಕು ಎಂಬುದು ಹಳೆಯ ಬೇಡಿಕೆ. ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ 2011ರಲ್ಲಿ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದ ವೇಳೆಯೂ ‘ಸ್ವತಂತ್ರ ನ್ಯಾಯಾಂಗ’ಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ, ‘ನ್ಯಾಯಮೂರ್ತಿಗಳು ನಿವೃತ್ತರಾದ ಕನಿಷ್ಠ 1 ವರ್ಷದ ಮಟ್ಟಿಗಾದರೂ ಸರ್ಕಾರದ ಯಾವುದೇ ರೀತಿಯ ಹುದ್ದೆಗಳನ್ನು ಸ್ವೀಕರಿಸದಿರುವ ತೀಮಾನ ಕೖಗೊಂಡರೆ ನ್ಯಾಯಾಂಗದ ಸ್ವಾತಂತ್ರ್ಯ ಕಾಪಾಡಬಹುದು’ ಎಂಬ ನ್ಯಾಯಮೂರ್ತಿ ರಾಕೇಶ್​ಕುಮಾರ್ ತೀರ್ಪಿನಲ್ಲಿರುವ ಸಲಹೆ ಗಮನಾರ್ಹ.

  ಕಹಿಸತ್ಯ ಬಯಲು

  ರಾಕೇಶ್​ಕುಮಾರ್ ಸಿಟ್ಟಿಗೂ ಕಾರಣವಿಲ್ಲದಿಲ್ಲ. ರಾಜ್ಯ ಸರ್ಕಾರಕ್ಕೆ ಸೇರಿದ ಭೂಮಿ ಹರಾಜು ಹಾಕುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ತಕರಾರು ಅರ್ಜಿ ವಿಚಾರಣೆ ನಡೆಸುವುದರಿಂದ ತಾವು ಹಿಂದಕ್ಕೆ ಸರಿಯಬೇಕು ಎಂದು ಸರ್ಕಾರಿ ವಕೀಲರು ರಾಕೇಶ್​ಕುಮಾರ್​ರನ್ನು ಕೋರಿದ್ದರು. ಇದು ನ್ಯಾಯಮೂರ್ತಿಗಳನ್ನು ಕೆರಳಿಸಿತ್ತು. ‘ಮೊದಲು ನನ್ನ ವಿಶ್ವಾಸಾರ್ಹತೆ ಪ್ರಶ್ನಿಸಲಾಯಿತು, ಈಗ ವಿಚಾರಣೆಯಿಂದ ಹಿಂದೆ ಸರಿಯಬೇಕು ಎನ್ನುತ್ತಿದ್ದಾರೆ. ವಿಧಾನಸಭೆ ನಿಲುವನ್ನೊಪ್ಪದ ವಿಧಾನಪರಿಷತ್ ರದ್ದುಪಡಿಸಿ ಎಂದು ನಿರ್ಣಯ ಮಾಡಿದಿರಿ. ನಂತರ ಚುನಾವಣಾ ಆಯೋಗವೂ ನಿಮ್ಮ ಕೆಂಗಣ್ಣಿಗೆ ಗುರಿಯಾಯ್ತು. ಈಗ ನ್ಯಾಯಾಂಗವನ್ನೂ ಬಿಟ್ಟಿಲ್ಲ. ಸುಪ್ರೀಂಕೋರ್ಟ್ ಮೇಲೂ ದಾಳಿ ಮಾಡಿದ್ದೀರಿ’ ಎಂದು ಕುಮಾರ್ ಕೆಂಡ ಕಾರಿದ್ದಾರೆ. ಸರ್ಕಾರಿ ಭೂಮಿ ಹರಾಜು ವಿಷಯದಲ್ಲಿ ಸರ್ಕಾರದ ‘ಘನ ಉದ್ದೇಶ’ ಅರಿತ ನ್ಯಾಯಮೂರ್ತಿಗಳು, ನಿವೃತ್ತಿ ಅಂಚಿನಲ್ಲಿ ‘ಕಹಿಸತ್ಯ’ಗಳನ್ನೆಲ್ಲ ಹೇಳಿ ಹೊರ ನಡೆದಿದ್ದಾರೆ. ಅರ್ಜಿದಾರ ಅಥವಾ ಪ್ರತಿವಾದಿ ತಮಗೆ ಬೇಕಿರುವ ನ್ಯಾಯಪೀಠ ಪಡೆದುಕೊಳ್ಳುವುದಾದರೆ (‘ಬೆಂಚ್ ಹಂಟಿಂಗ್’ ) ನ್ಯಾಯಾಂಗ ಪಾವಿತ್ರ್ಯ, ಘನತೆ ಉಳಿದುಕೊಳ್ಳುವುದಾದರೂ ಹೇಗೆ? ಇದನ್ನೇ ದಾಖಲಿಸಿರುವ ನ್ಯಾಯಮೂರ್ತಿ ಕುಮಾರ್, ‘ರಾಜ್ಯ ಸರ್ಕಾರದಿಂದ ಈ ವರ್ತನೆ ನಿರೀಕ್ಷಿಸಿರಲಿಲ್ಲ. ಆದರೆ, ಈ ರಾಜ್ಯದಲ್ಲಿ ಏನೂ ಬೇಕಾದರೂ ಆಗಬಹುದು. ಹಾಗಂತ, ನಿಮ್ಮ ಕ್ರಮಗಳಿಂದ ನ್ಯಾಯಾಲಯವನ್ನು ಹೆದರಿಸಬಹುದು ಎಂದುಕೊಳ್ಳಬೇಡಿ’ ಎಂದಿದ್ದಾರೆ.

  ವಿವಾದದ ಹಿನ್ನೆಲೆ

  ವ್ಯಾಪಕ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಸಿಬಿಐನಲ್ಲಿ 11 ಕೇಸು, ಜಾರಿ ನಿರ್ದೇಶನಾಲಯದಲ್ಲಿ (ಇ.ಡಿ.) 6 ಕೇಸು ಮತ್ತು 18 ಐಪಿಸಿ (ಅಪರಾಧ ದಂಡ ಸಂಹಿತೆ) ಕೇಸುಗಳು ದಾಖಲಾಗಿವೆ. ಇವು 8-10 ವರ್ಷಗಳಿಂದ ತನಿಖಾ ಹಂತದಲ್ಲಿರುವ ಪ್ರಕರಣಗಳು. ಕೆಲವೊಂದು ಸಂದರ್ಭಗಳಲ್ಲಿ ಪ್ರಕರಣಗಳು ಆಂಧ್ರ ಹೈಕೋರ್ಟ್ ಮುಂದೆ ವಿಚಾರಣೆಗೆ ಬಂದು ಸದ್ದು ಮಾಡಿರುವುದು ಬಿಟ್ಟರೆ ಹೆಚ್ಚಿನ ಪ್ರಗತಿಯೇನೂ ಈ ಕೇಸುಗಳಲ್ಲಿ ಆಗಿಲ್ಲ. ಕೆಲ ದಿನಗಳ ಹಿಂದೆ ಆಂಧ್ರ ಹೈಕೋರ್ಟ್​ನಿಂದ ನಿವೃತ್ತರಾದ ನ್ಯಾಯಮೂರ್ತಿ ರಾಕೇಶ್​ಕುಮಾರ್, ನಿವೃತ್ತಿಗೆ ಒಂದೆರಡು ದಿನಗಳ ಮುನ್ನ ಜಗನ್ ರೆಡ್ಡಿ ಸರ್ಕಾರದ ನಡವಳಿಕೆ ಬಗ್ಗೆ ತೀವ್ರ ಆಕ್ಷೇಪಗಳನ್ನು ಹೊಂದಿದ ತೀರ್ಪೆಂದನ್ನು ಪ್ರಕಟಿಸಿದರು. ಆಂಧ್ರಪ್ರದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಕುಮಾರ್ ಮಾತುಗಳು ಆತಂಕ ಹುಟ್ಟಿಸುತ್ತವೆ. ನ್ಯಾಯಾಂಗದಂಥ ಗೌರವಾನ್ವಿತ ಸಂಸ್ಥೆಯನ್ನೂ ಆಡಳಿತಶಾಹಿಗಳು ಹೇಗೆ ಕಪಿಮುಷ್ಟಿಯಲ್ಲಿಟ್ಟುಕೊಂಡಿವೆ ಎನ್ನುವುದನ್ನು ಸವಿಸ್ತಾರವಾಗಿ ದಾಖಲಿಸಿರುವ ನ್ಯಾಯಮೂರ್ತಿ ಕುಮಾರ್, ಆಂಧ್ರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿಯವರನ್ನು ಸಿಕ್ಕಿಂ ಹೈಕೋರ್ಟಿಗೆ ಮತ್ತು ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್​ರನ್ನು ಉತ್ತರಾಖಂಡ ಹೖಕೋರ್ಟಿಗೆ ವರ್ಗಾವಣೆ ಮಾಡುವ ಸುಪ್ರೀಂಕೋರ್ಟ್ ಶಿಫಾರಸನ್ನೂ ಪ್ರಶ್ನಿಸಿದ್ದಾರೆ.

  ‘ಜಗನ್ ರೆಡ್ಡಿ ಆಂಧ್ರ ಹೈಕೋರ್ಟ್ ಸಿಜೆ ಮತ್ತು ಇತರ ಕೆಲ ನ್ಯಾಯಮೂರ್ತಿಗಳ ವಿರುದ್ಧ ಸುಪ್ರೀಂಕೋರ್ಟ್​ಗೆ ದೂರು ಸಲ್ಲಿಸಿದ ಬೆನ್ನಲ್ಲೇ ವರ್ಗಾವಣೆ ಶಿಫಾರಸು ಕಾರ್ಯಗತಗೊಂಡಿದೆ. ಜಗನ್ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಮುಂದಾಗಿದ್ದ ಸಂದರ್ಭದಲ್ಲೇ ಅವರಿಗೆ ಏನು ಬೇಕಿತೊ್ತೕ ಅದನ್ನು ಸಾಧಿಸುವಲ್ಲಿ ಆಂಧ್ರ ಮುಖ್ಯಮಂತ್ರಿ ಸಫಲರಾಗಿದ್ದಾರೆ. ಇದರಿಂದಾಗಿ ಜಗನ್ ಮೇಲಿನ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬ ಉಂಟಾಗಲಿದೆ ಮತ್ತು ಪರಿಸ್ಥಿತಿಯ ಲಾಭವೂ ಅವರಿಗೇ ದಕ್ಕಲಿದೆ’ ಎಂದು ನ್ಯಾಯಮೂರ್ತಿ ರಾಕೇಶ್​ಕುಮಾರ್ ಆಕೊ್ರೕಶ ಹೊರಹಾಕಿದ್ದಾರೆ.

  7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ!

  ವಾಹನದ ಮೇಲೆ ಕರೊನಾ ಬೋರ್ಡ್; ಮಾಡುತ್ತಿದ್ದುದು ಮತ್ತೇರಿಸೋ ಕೆಲಸ!

  ಕರೊನಾ ಎಂಬುದೇ ಸುಳ್ಳು, ವಂಚನೆ!; ಆಸ್ಪತ್ರೆ ಮುಂದೆಯೇ ಪ್ರತಿಭಟನೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts