More

  ಖಾದರ್- ಕೆಎನ್ನಾರ್ ಚಾಯ್ ಪೇ ಚರ್ಚೆ !

  ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಂಗಳವಾರ ಬೆಳಗ್ಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮನೆಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

  ಶಿರಾದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾರ್ಗ ಮಧ್ಯೆ ಬೆಂಗಳೂರಿಗೆ ತೆರಳುವಾಗ ಕ್ಯಾತಸಂದ್ರದ ಕೆ.ಎನ್.ರಾಜಣ್ಣ ನಿವಾಸಕ್ಕೆ ಯು.ಟಿ.ಖಾದರ್ ಭೇಟಿ ನೀಡಿ ಚಹಾ ಸೇವಿಸಿದರು. ಈ ಸಂದರ್ಭದಲ್ಲಿ 20 ನಿಮಿಷಕ್ಕು ಹೆಚ್ಚು ಕಾಲ ಲೋಕಾಭಿರಾಮವಾಗಿ ಖಾದರ್-ಕೆಎನ್ನಾರ್ ಮಾತನಾಡಿದ್ದಾರೆ.

  ಕೆಎನ್ನಾರ್ ಪುತ್ರ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಮಾಜಿ ಶಾಸಕ ಎಷ್.ಷಫೀ ಅಹ್ಮದ್, ಕಲ್ಲಳ್ಳಿ ದೇವರಾಜ್ ಮತ್ತಿತರರ ಮುಖಂಡರು ಹಾಜರಿದ್ದರು.

  ಜಮೀರ್ ಭೇಟಿ : ವಸತಿ ಸಚಿವ ಜಮೀರ್ ಅಹಮದ್ ಸಹ ಖಾಸಗಿ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ತುಮಕೂರು ನಗರಕ್ಕೆ ಭೇಟಿ ನೀಡಿದ್ದರು.
  ಸದಾಶಿವನಗರದ ನಯಾಜ್ ಅಹಮದ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಇಲಾಹಿ ಸಿಕಂದರ್ ಮನೆಗೆ ಭೇಟಿ ನೀಡಿ, ಶುಭಕೋರಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts