ಮಂಗಳೂರು: ಮಿನಿ ಲಾರಿಗೆ ಹಾಲು ಸಾಗಾಟದ ಟೆಂಪೊ ಡಿಕ್ಕಿ ಹೊಡೆದ ಪರಿಣಾಮ ಟೆಂಪೊ ಚಾಲಕ ಗಾಯಗೊಂಡ ಘಟನೆ ಮಂಗಳೂರಿನ ಪಡೀಲ್‌ನಲ್ಲಿ ಸಂಭವಿಸಿದೆ.
ಇದನ್ನೂ ಓದಿ: ಶರವು ದೇವಸ್ಥಾನದಲ್ಲಿ ಕಾಪ ದೇವಸ್ಥಾನದ ಹೊರಕಾಣಿಕೆ ಸಂಗ್ರಹಣಾ ಕಚೇರಿಯ ಉದ್ಘಾಟನೆ
ನಗರದ ಬಿ.ಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಟೆಂಪೊ ಡಿವೈಡರ್ ಮೇಲೇರಿ ಮತ್ತೊಂದು ಬದಿಯಲ್ಲಿ ಬರುತ್ತಿದ್ದ ಮಿನಿ ಲಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಟೆಂಪೊ ಚಾಲಕನಿಗೆ ಗಾಯವಾಗಿದೆ. ಅಪಘಾತದಿಂದಾಗಿ ಕೆಲವು ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಗುದ್ದಿದ ರಭಸಕ್ಕೆ ಟೆಂಪೊ ಮುಂಭಾಗ ಜಖಂಗೊಂಡಿದ್ದು, ಚಾಲಕನಿಗೆ ಗಾಯಗಳಾಗಿವೆ.
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಪೀಕರ್ ಯು.ಟಿ. ಖಾದರ್, ಚಾಲಕನ ರಕ್ಷಣೆಗೆ ಧಾವಿಸಿದರು. ಅವರು ರಕ್ಷಣಾ ಕಾರ್ಯ ಮತ್ತು ಸಂಚಾರ ನಿರ್ವಹಣೆಯಲ್ಲಿ ಸ್ವತಃ ಪಾಲ್ಗೊಂಡು ನೆರವಾದರು. ಟೆಂಪೊದಲ್ಲಿ ಗಾಯಗೊಂಡು ಸಿಲುಕಿಕೊಂಡಿದ್ದ ಚಾಲಕನನ್ನು ಸುರಕ್ಷಿತವಾಗಿ ಕೆಳಗಿಳಿಸಿ, ಸೂಕ್ತ ಚಿಕಿತ್ಸೆಗೂ ವ್ಯವಸ್ಥೆ ಮಾಡಿಸಿದ್ದಾರೆ.
ನಿಮ್ಮ ಸಿಬಿಲ್ ಸ್ಕೋರ್ ಕುಸಿದಿದ್ಯಾ? ರಾಕೆಟ್ನಂತೆ ಜಿಗಿಯಲು ಈ ಸಿಂಪಲ್ ಟಿಪ್ ಅನುಸರಿಸಿ | CIBIL Score