ಕಡಬಿ: ಸಮ್ಮೇಳನಾಧ್ಯಕ್ಷರಾಗಿ ಡಾ.ಎಸ್.ಎಸ್.ಅಂಗಡಿ ಆಯ್ಕೆ

ಕಡಬಿ: ಸವದತ್ತಿ ತಾಲೂಕಿನ ಯರಝರ್ವಿ ಗ್ರಾಮದಲ್ಲಿ ನಡೆಯಲಿರುವ 6ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಎಸ್.ಎಸ್.ಅಂಗಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಯರಝರ್ವಿ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಸಭೆ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.

ಹಿರಿಯ ಕವಿ ಡಾ.ವೈ.ಎಂ.ಯಾಕೊಳ್ಳಿ, ಡಾ.ಎ.ಎಂ.ಶಂಕರಲಿಂಗಪ್ಪ ಮಾತನಾಡಿ, ಎಲ್ಲ ಸಾಹಿತ್ಯ ಸಮ್ಮೇಳನಗಳು ತಾಲೂಕು ಮಟ್ಟದಲ್ಲಿ ಜರುಗಲಿದ್ದು, ಈ ಬಾರಿ ಹಳ್ಳಿ ಮಟ್ಟದಲ್ಲಿ ಜರುಗುತ್ತಿರುವುದು ನಮಗೆಲ್ಲ ಹೆಮ್ಮೆ ಸಂಗತಿಯಾಗಿದೆ ಎಂದರು.

ಸವದತ್ತಿ ಸಾಹಿತಿ ಬಿ.ಐ.ಚಿನಗುಡಿ ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಚುಟುಕು ಸಾಹಿತ್ಯ, ಹಳ್ಳಿಯ ಸೊಗಡು ಮಕ್ಕಳಲ್ಲಿ ಬೆಳಸಬೇಕು ಎಂದು ಸಲಹೆ ನೀಡಿದರು.

ಎನ್.ಎಸ್.ಇಂಚಲ, ಈರಣ್ಣ ಚಳಕೋಪ್ಪ, ತಾಪಂ ಸದಸ್ಯ ಬಸವರಾಜ ಮುತ್ತೇನ್ನವರ, ಸಿದ್ದಪ್ಪ ಮಾಳಗಿ, ದುಂಡಪ್ಪ ಕೋಡಳ್ಳಿ, ಚಂದ್ರಕಾಂತ ತುಪ್ಪದ, ಸಿ.ಬಿ.ದೊಡಗೌಡರ, ಬಿ.ವಿ.ನರಗುಂದ, ಇತರರು ಇದ್ದರು.