ಚೆನ್ನೈ: ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನದಿಂದ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಸಾಕಷ್ಟು ನೊಂದಿದೆ. ಅವರು ನಿಧನರಾಗಿ ಎರಡು ದಿನಗಳ ನಂತರವೂ, ಎಸ್ಪಿಬಿ ಅವರ ಸಾಧನೆಗಳ ಕುರಿತಾಗಿ ಚರ್ಚೆ ಆಗುತ್ತಲೇ ಇದೆ.
ಈ ಮಧ್ಯೆ, ಅವರ ಕೊನೆಯ ಹಾಡು ಯಾವುದು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಎಸ್ಪಿಬಿ ಅವರು 40ಕ್ಕೂ ಹೆಚ್ಚು ಸಾವಿರ ಹಾಡುಗಳನ್ನು ತಮ್ಮ ವೃತ್ತಿಜೀವನದಲ್ಲಿ ಹಾಡಿದ್ದರು. ಲಾಕ್ಡೌನ್ ಶುರುವಾಗುವುದಕ್ಕಿಂತ ಮುನ್ನವೂ ಅವರು ಹಾಡಿದ್ದರು. ಹಾಗೆ ಹಾಡಿದ ಕೊನೆಯ ಹಾಡು ಯಾವ ಚಿತ್ರಕ್ಕಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ಇದನ್ನೂ ಓದಿ: ಕಾರಾವಾನ್ನಲ್ಲಿ ಕುಳಿತು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರಂತೆ ಸುಶಾಂತ್
ಎಸ್ಪಿಬಿ ಅವರು ಹಾಡಿರುವ ಕೊನೆಯ ಹಾಡು, ರಜನಿಕಾಂತ್ ಅವರ ‘ಅಣ್ಣಾತ್ತೆ’ ಚಿತ್ರಕ್ಕಂತೆ. ಹಾಗಂತ ಖುದ್ದು ಸಂಗೀತ ನಿರ್ದೇಶಕ ಡಿ. ಇಮಾನ್ ಹೇಳಿಕೊಂಡಿದ್ದಾರೆ. ಎಸ್ಪಿಬಿ ಅವರು ರಜನಿಕಾಂತ್ ಅವರಿಗೆ ನೂರಾರು ಹಾಡುಗಳನ್ನು ಹಾಡಿದ್ದರು. ಅದರಲ್ಲೂ ಪ್ರತೀ ಚಿತ್ರದಲ್ಲೂ ತಮ್ಮ ಇಂಟ್ರೊಡಕ್ಷನ್ ಹಾಡನ್ನು ಎಸ್ಪಿಬಿ ಅವರೇ ಹಾಡಬೇಕು ಎಂದು ರಜನಿಕಾಂತ್ ಪಟ್ಟುಹಿಡಿಯುತ್ತಿದ್ದರಂತೆ. ಈಗ ಆ ಸಾಲಿಗೆ ‘ಅಣ್ಣಾತ್ತೆ’ ಸಹ ಸೇರಿಕೊಂಡಿರುವುದು ವಿಶೇಷ.
ರಜನಿಕಾಂತ್ ಮತ್ತು ಎಸ್ಪಿಬಿ ಅವರ ಜತೆಯಾಟ ಸುಮಾರು 40 ವರ್ಷಗಳ ಹಿಂದಿನದ್ದು. 1980ರಲ್ಲಿ ಬಿಡುಗಡೆಯಾದ ‘ಬಿಲ್ಲ’ ಚಿತ್ರದ ‘ಮೈ ನೇಮ್ ಈಸ್ ಬಿಲ್ಲ’ ಎಂಬ ರಜನಿಕಾಂತ್ ಇಂಟ್ರೊಡಕ್ಷನ್ ಹಾಡನ್ನು ಹಾಡಿದ್ದು ಎಸ್ಪಿಬಿಯವರೇ. ಆ ನಂತರ ‘ಭಾಷಾ’, ‘ಮುತ್ತು’, ‘ಪಡೆಯಪ್ಪ’ ಸೇರಿದಂತೆ ರಜನಿಕಾಂತ್ ಅವರ ಹಲವು ಚಿತ್ರಗಳ ಇಂಟ್ರೊಡಕ್ಷನ್ ಹಾಡುಗಳನ್ನು ಎಸ್ಪಿಬಿ ಹಾಡಿದ್ದರು.
ಇದನ್ನೂ ಓದಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್ ಹೇಳಿದ್ದೇನು?
ರಜನಿಕಾಂತ್ ಅವರ ಹಿಂದಿನ ಚಿತ್ರ ‘ದರ್ಬಾರ್’ನ ನಾಯಕನ ಪರಿಚಯದ ಹಾಡಿಗೂ ಎಸ್ಪಿಬಿ ಧ್ವನಿಯಾಗಿದ್ದರು. ಆ ನಂತರ ‘ಅಣ್ಣಾತ್ತೆ’ ಚಿತ್ರ ಶುರುವಾದಾಗ, ಎಸ್ಪಿಬಿ ಅವರಿಂದಲೇ ಹಾಡಿಸಬೇಕು ಎಂಬುದು ಚಿತ್ರತಂಡದ ನಿರ್ಧಾರವಾಗಿತ್ತು. ಅದರಂತೆ, ಲಾಕ್ಡೌನ್ ಶುರುವಾಗುವುದಕ್ಕಿಂತ ಸ್ವಲ್ಪ ಮುಂಚೆ, ಎಸ್ಪಿಬಿ ಅವರಿಂದ ನಾಯಕನ ಪರಿಚಯದ ಗೀತೆಯನ್ನು ಹಾಡಿಸಲಾಗಿದೆ. ಈ ಕುರಿತು ಸ್ವತಃ ಸಂಗೀತ ನಿರ್ದೇಶಕ ಡಿ. ಇಮಾನ್ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಎಸ್ಪಿಬಿ ಅವರಿಗೆ ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
‘ಅಣ್ಣಾತ್ತೆ’ ಚಿತ್ರವನ್ನು ಶಿವ ನಿರ್ದೇಶನ ಮಾಡುತ್ತಿದ್ದು, ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ. ಚಿತ್ರದಲ್ಲಿ ರಜನಿಕಾಂತ್ ಜತೆಗೆ ಖುಷ್ಬೂ, ನಯನತಾರಾ, ಮೀನಾ, ಕೀರ್ತಿ ಸುರೇಶ್ ಮುಂತಾದವರು ನಟಿಸುತ್ತಿದ್ದು, ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.
Legends are Immortal!
— D.IMMAN (@immancomposer) September 25, 2020
You will be in our hearts forever!
With the Legendary SPB uncle while recording an energetic song for Our Superstar @rajinikanth sir’s #Annaatthe Lyric by @Viveka_Lyrics @directorsiva ‘s directorial n @sunpictures ‘s production #DImmanMusical#RIPSPBSir pic.twitter.com/bdQ3yUzUJk
ವಿಚಾರಣೆ ವೇಳೆ ಮೂರು ಬಾರಿ ಅತ್ತರಂತೆ ದೀಪಿಕಾ!