ಕೊಲಂಬಿಸ್ : ನೆದರ್ಲೆಂಡ್ ತಂಡ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದೆ. ಇದರೊಂದಿಗೆ 1980ರ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದ ಮೊದಲ ತಂಡ ಎನಿಸಿದೆ. ಶುಕ್ರವಾರ ನಡೆದ ಮಹಿಳಾ ವಿಭಾಗದ ೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದ ನೆದರ್ಲೆಂಡ್, ಶೂಟೌಟ್‌ನಲ್ಲಿ 3-1 ಗೋಲುಗಳ ಅಂತರದಿಂದ ಚೀನಾ ತಂಡವನ್ನು ಮಣಿಸಿತು. ನಿಗದಿತ ಸಮಯದಲ್ಲಿ ಪಂದ್ಯ 1-1ರಿಂದ ಸಮಬಲಗೊಂಡಿತ್ತು.
ನೆದರ್ಲೆಂಡ್ ತಂಡ ಸ್ವರ್ಣ ಪದಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2020ರ ಟೋಕಿಯೊ ಗೇಮ್ಸ್‌ನ ಮಹಿಳಾ ವಿಭಾಗದಲ್ಲೂ ನೆದರ್ಲೆಂಡ್ ತಂಡ ಚಾಂಪಿಯನ್ ಆಗಿತ್ತು. ಅರ್ಜೆಂಟೀನಾ ತಂಡ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಜಯಿಸಿತು. ಪುರುಷರ ವಿಭಾಗದ ೈನಲ್‌ನ ಶೂಟೌಟ್‌ನಲ್ಲಿ ಡಚ್ಚರ ತಂಡ, ಹಾಲಿ ವಿಶ್ವಚಾಂಪಿಯನ್ ಜರ್ಮನಿಗೆ 3-1 ರಿಂದ ಶಾಕ್ ನೀಡಿದ ಚಿನ್ನ ಒಲಿಸಿಕೊಂಡಿತು.
32 ವರ್ಷಗಳ ಬಳಿಕ ಸ್ಪೇನ್‌ಗೆ ಚಿನ್ನ: ಹಾಲಿ ಯೂರೋಕಪ್ ಚಾಂಪಿಯನ್ ಸ್ಪೇನ್ ತಂಡ ಒಲಿಂಪಿಕ್ಸ್ ಪುರುಷರ ುಟ್‌ಬಾಲ್‌ನಲ್ಲಿ 32 ವರ್ಷಗಳ ಬಳಿಕ ಸ್ವರ್ಣ ಪದಕವನ್ನು ತನ್ನದಾಗಿಸಿಕೊಂಡಿದೆ. ಲಾ ರೋಜಾ ಖ್ಯಾತಿಯ ಸ್ಪೇನ್ ತಂಡ ಶುಕ್ರವಾರ ರಾತ್ರಿ ನಡೆದ ೈನಲ್ ಪಂದ್ಯದಲ್ಲಿ 5-3 ಗೋಲುಗಳಿಂದ ಆತಿಥೇಯ ್ರಾನ್ಸ್ ತಂಡವನ್ನು ಮಣಿಸಿತು. ಟೋಕಿಯೊ ಗೇಮ್ಸ್‌ನಲ್ಲಿ ರಜತ ಪದಕ ಜಯಿಸಿದ್ದ ಸ್ಪೇನ್ ಈ ಬಾರಿ ಪದಕ ಬಣ್ಣ ಬದಲಾಯಿಸಿಕೊಂಡಿದೆ. ಇದರೊಂದಿಗೆ 1992ರ ಬಳಿಕ ಪುರುಷರ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಯುರೋಪಿಯನ್ ತಂಡ ಎನಿಸಿದೆ. 1992ರಲ್ಲಿ ಸ್ಪೇನ್ ಕೊನೆಯದಾಗಿ ಚಿನ್ನ ಜಯಿಸಿತ್ತು. ಮೊರಾಕೊ ತಂಡ 6-0 ಗೋಲುಗಳಿಂದ ಈಜಿಪ್ಟ್ ತಂಡವನ್ನು ಮಣಿಸಿ ಕಂಚಿನ ಪದಕ ಒಲಿಸಿಕೊಂಡಿತು. ಮಹಿಳಾ ವಿಭಾಗದಲ್ಲಿ ಹಾಲಿ ವಿಶ್ವಚಾಂಪಿಯನ್ ಸ್ಪೇನ್ ತಂಡ ಕಂಚಿಗೆ ಸಮಾಧಾನ ಕಂಡಿದೆ. ೈನಲ್‌ನಲ್ಲಿ ಬ್ರೆಜಿಲ್ ಹಾಗೂ ಅಮೆರಿಕ ತಂಡಗಳು ಸೆಣಸಲಿವೆ.