More

  ಕರೊನಾದಿಂದಾಗಿ ಸತ್ತವರ ಸಂಖ್ಯೆಯನ್ನೇ ಸುಳ್ಳು ಹೇಳ್ತಿದೆ ಸರ್ಕಾರ: ಅಖಿಲೇಶ್ ಯಾದವ್ ಆರೋಪ

  ಲಕನೌ: ಉತ್ತರ ಪ್ರದೇಶ ಸರ್ಕಾರ ಕೋವಿಡ್ 19 ಸಾವಿನ ಅಂಕಿಅಂಶಗಳನ್ನು ಮರೆಮಾಡಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಆರೋಪಿಸಿದ್ದಾರೆ. ಸರ್ಕಾರ ಜನರಿಗೆ ಸಹಾಯ ಮಾಡಲು ಇಚ್ಛಿಸುತ್ತಿಲ್ಲವಾದ್ದರಿಂದು ಅದು ನಿಜ ಅಂಕಿ ಅಂಶವನ್ನು ಬಯಲು ಮಾಡಲು ಹಿಂಜರಿಯುತ್ತಿದೆ ಎಂದು ಅವರು ದೂರಿದ್ದಾರೆ.

  ರಾಜ್ಯದಲ್ಲಿ ಪಂಚಾಯತ್ ಮತದಾನದ ಸಮಯದಲ್ಲಿ ಶಿಕ್ಷಕರು ಸಾಯುತ್ತಿರುವ ವಿಷಯವನ್ನೂ ಅವರು ಎತ್ತಿ ಹೇಳಿದರು. ಪಂಚಾಯತ್ ಮತದಾನ ಕರ್ತವ್ಯಕ್ಕೆ ಹೋದಾಗ ಕೇವಲ 3 ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹೇಳಿತ್ತು. ನಂತರ ಸಂಘಸಂಸ್ಥೆಗಳು ಮತ್ತು ನಾವು ಸರಿಯಾದ ವರದಿಗಾಗಿ ಒತ್ತಾಯಿಸಿದ ನಂತರ ಸರ್ಕಾರ ನಿಜಾಂಶ ಒಪ್ಪಿಕೊಂಡಿದೆ. ಕರೊನಾ ಕಾರಣದಿಂದ ಏಪ್ರಿಲ್ ಮೊದಲ ವಾರದಿಂದ ಈವರೆಗೆ ರಾಜ್ಯದಲ್ಲಿ 1,600 ಕ್ಕೂ ಹೆಚ್ಚು ಶಿಕ್ಷಕರು ಮತ್ತು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಶಿಕ್ಷಣ ಇಲಾಖೆ ಈ ಹಿಂದೆ ಹೇಳಿಕೊಂಡಿತ್ತು ಮತ್ತು ಅವರಲ್ಲಿ 90 ಪ್ರತಿಶತ ಜನರು ಪಂಚಾಯತ್ ಮತದಾನದ ಕರ್ತವ್ಯದಲ್ಲಿದ್ದವರು ಎಂದು ತಿಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

  ಆದರೆ, ಚುನಾವಣಾ ಕರ್ತವ್ಯದಲ್ಲಿದ್ದು ಸತ್ತವರೆಲ್ಲರಿಗೂ ಕರೊನಾವೇ ಕಾರಣ ಎಂದು ಹೇಳಲಾಗುವುದಿಲ್ಲ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಕೋವಿಡ್ 19 ಕಾರಣದಿಂದಾಗಿ ಕೇವಲ ಮೂವರು ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಸಚಿವ ಸತೀಶ್ ಚಂದ್ರ ದ್ವಿವೇದಿ ಹೇಳಿದ್ದಾರೆ. (ಏಜೆನ್ಸೀಸ್)

  ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ತವರು ರಾಜ್ಯದ ಜನರಿಗೆ ಶುಭ ಸುದ್ದಿ ನೀಡಿದ ಜ್ಯೋತಿರಾದಿತ್ಯ ಸಿಂಧ್ಯಾ

  ಉತ್ತರಾಖಂಡದಲ್ಲೂ ಉಚಿತ ವಿದ್ಯುತ್ ಭರವಸೆ ನೀಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

  See also  ಬೇರೊಬ್ಬನ ಜತೆ ಮದ್ವೆಯಾಗ್ತಿದ್ದ ಪ್ರೇಯಸಿಯನ್ನು ಮಂಟಪದಲ್ಲೇ ಗುಂಡಿಟ್ಟು ಹತ್ಯೆಗೈದ ಮಾಜಿ ಪ್ರಿಯಕರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts