ಉತ್ತರಪ್ರದೇಶದ ರಾಜಕೀಯ ಮೈತ್ರಿಯಿಂದ ನನಗೇನೂ ನಿರಾಸೆಯಾಗಿಲ್ಲ: ರಾಹುಲ್​ ಗಾಂಧಿ

ನವದೆಹಲಿ: ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳು ಮೈತ್ರಿಮಾಡಿಕೊಂಡಿದ್ದು ನನಗೆ ಯಾವುದೇ ನಿರಾಸೆ ಉಂಟು ಮಾಡಿಲ್ಲ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹೇಳಿದ್ದಾರೆ.

ದುಬೈ ಪ್ರವಾಸದಲ್ಲಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಯಾ ಪಕ್ಷದ ಮುಖಂಡರು ಸೇರಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವು ಏನು ಮಾಡಬೇಕೆಂದು ನಿರ್ಧರಿಸಿಕೊಳ್ಳುತ್ತೇವೆ. ಉತ್ತರಪ್ರದೇಶದ ಜನರ ಸೇವೆ ಮಾಡಲು ಕಾಂಗ್ರೆಸ್​ಗೆ ಸಾಕಷ್ಟು ಅವಕಾಶವಿದೆ. ಬಿಎಸ್​ಪಿ ಮತ್ತು ಎಸ್​ಪಿ ಮುಖಂಡರ ಬಗ್ಗೆ ನನಗೆ ಅಪಾರ ಗೌರವವಿದೆ. ಬೇಕಾಗಿದ್ದನ್ನು ಮಾಡುವ ಹಕ್ಕು ಅವರಿಗೆ ಇದೆ. ಕಾಂಗ್ರೆಸ್​ನ್ನು ರಾಜ್ಯದಲ್ಲಿ ಬಲಪಡಿಸುವ ಜವಾಬ್ದಾರಿ ನಮ್ಮ ಮೇಲೆ ಇದ್ದು, ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್​ ರಾಜಕೀಯ ಮೈತ್ರಿ ಮಾಡಿಕೊಂಡಿದ್ದು ಸಮರ್ಥವಾಗಿ ನಿಭಾಯಿಸುತ್ತಿದೆ. ಬಿಎಸ್​ಪಿ-ಎಸ್​ಪಿ ಪಕ್ಷಗಳು ಕಾಂಗ್ರೆಸ್​ ಬಗ್ಗೆ ಅಸಮಾಧಾನ ಹೊಂದಿವೆ. ಆದರೆ ಅದನ್ನೂ ನಾವು ಖುಷಿಯಿಂದಲೇ ಸ್ವೀಕರಿಸುತ್ತೇವೆ ಎಂದರು.

Leave a Reply

Your email address will not be published. Required fields are marked *