ಬಿತ್ತನೆ ಕಾರ್ಯದಲ್ಲಿ ತೊಡಗಿದ ಅನ್ನದಾತ

ಎಂ.ಕೆ.ಹುಬ್ಬಳ್ಳಿ: ಕಳೆದ ಒಂದು ವಾರದಿಂದ ಸುರಿದ ಮಳೆ ಬುಧವಾರ ತುಸು ವಿರಾಮ ನೀಡುತ್ತಿದ್ದಂತೆ ಬಿತ್ತನೆ ಕಾರ್ಯ ಮತ್ತೆ ಚುರುಕುಗೊಂಡಿದೆ. ನಿರಂತರ ಮಳೆಯಿಂದ ಭೂಮಿ ಹದವಿಲ್ಲದೇ ಬಿತ್ತನೆ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದ ರೈತರು ಬುಧವಾರ ಸೋಯಾ ಬಿತ್ತನೆಯಲ್ಲಿ ತೊಡಗಿದ್ದಾರೆ. ಉತ್ತಮ ಮಳೆಯಿಂದ ಉತ್ತಮ ಫಸಲು ಬರಬಹುದೆಂಬ ನಿರೀಕ್ಷೆಯು ಅನ್ನದಾತನ ಮೊಗದಲ್ಲಿ ಕಾಣಸಿಗುತ್ತಿದೆ.

ಎಂ.ಕೆ.ಹುಬ್ಬಳ್ಳಿ, ಹುಣಶೀಕಟ್ಟಿ, ತುರಮರಿ, ಕಾದರವಳ್ಳಿ ಸೇರಿ ತಾಲೂಕಿನೆಲ್ಲೆಡೆ ಬಿತ್ತನೆ ಕಾರ್ಯ ಮತ್ತೆ ಆರಂಭಗೊಂಡಿದೆ. ಇನ್ನೂ ಈಗಾಗಲೇ ಬಿತ್ತನೆ ಕಾರ್ಯ ಮುಗಿಸಿದ ಹಲವು ರೈತರು ಎಡೆಕುಂಟೆ ಹೊಡೆಯುತ್ತಿದ್ದಾರೆ. ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಶುರುವಾಗಿದ್ದು ನದಿ ಪಾತ್ರದ ಬೋರವೆಲ್‌ಗಳಲ್ಲಿ ನೀರಿನ ಪ್ರಮಾಣದಲ್ಲಿ ಬದಲಾಗಿದೆ. ಬಿಸಿಲಿನ ತಾಪಕ್ಕೆ ಒಣಗುತ್ತಿದ್ದ ಕಬ್ಬಿನ ಬೆಳೆಗೆ ಮಳೆ ಮರುಜೀವ ನೀಡಿದೆ ಎನ್ನುತ್ತಾರೆ ಹುಣಶೀಕಟ್ಟಿ ಗ್ರಾಮದ ಪ್ರವೀಣ ಪತ್ರಿ.

Leave a Reply

Your email address will not be published. Required fields are marked *