ಸಿನಿಮಾ

ಬ್ಯಾಡಗಿ ತಾಲೂಕಿನ ನಾಲ್ಕು ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ

ಬ್ಯಾಡಗಿ: ಹವಾಮಾನ ಇಲಾಖೆ ವರದಿಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಬೀಳುವ ಎಲ್ಲ ಲಕ್ಷಣಗಳಿದ್ದು ರೈತರಿಗೆ ಬೀಜ ಗೊಬ್ಬರ ಹಾಗೂ ಪರಿಕರಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಜಿ. ಶಾಂತಾಮಣಿ ತಿಳಿಸಿದ್ದಾರೆ.

ಗುರುವಾರ ಪ್ರಕಟಣೆ ನೀಡಿರುವ ಅವರು, ಬೀಜ, ರಸಗೊಬ್ಬರ ಹಾಗೂ ವಿವಿಧ ಔಷಧಗಳನ್ನು ಕಾಗಿನೆಲೆ, ಬ್ಯಾಡಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಹೆಚ್ಚುವರಿಯಾಗಿ ಮೋಟೆಬೆನ್ನೂರು, ಚಿಕ್ಕಬಾಸೂರು ಗ್ರಾಮಗಳಲ್ಲಿ ಬೀಜ ವಿತರಣೆ ಕೇಂದ್ರ ಆರಂಭಿಸಲಾಗಿದೆ. ರೈತರು ತಮಗೆ ಅನುಕೂಲವಾಗುವ ಸ್ಥಳಗಳಲ್ಲಿ ತೆರಳಿ ಬೀಜಗೊಬ್ಬರ ಖರೀದಿಸಬೇಕು. ಅಧಿಕೃತವಾಗಿ ರಸೀದಿಗಳನ್ನು ಪಡೆಯುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

ಇ- ಕೆವೈಸಿ ಮಾಡಿಸುವುದರಿಂದ ರೈತರಿಗೆ ಪಿ.ಎಂ. ಕಿಸಾನ್ ಯೋಜನೆ ಸೇರಿದಂತೆ ಇತರೆ ಹಣಗಳು ಜಮೆಯಾಗಲು ಸರಳವಾಗಲಿದೆ. ಒಂದು ವೇಳೆ ಪಹಣಿ ಪತ್ರದಲ್ಲಿ ಹೆಸರಿರುವ ಫಲಾನುಭವಿ ಮೃತಪಟ್ಟಲ್ಲಿ ವಾರಸುದಾರರು ತಕ್ಷಣ ಮಾಹಿತಿ ನೀಡಬೇಕು. ರೈತರಿಗೆ ತಾಡಪಾಲುಗಳನ್ನು ವಿತರಿಸಲಾಗುತ್ತಿದ್ದು, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್