ಮಕ್ಕಳಲ್ಲಿ ವಿಶ್ವ ಮಾನವ ಸಂದೇಶ ಬಿತ್ತಿ; ಸಂಗಮೇಶ್ವರ ಬಬಲೇಶ್ವರ

KRISHNA JAYANTI

ವಿಜಯಪುರ: ಶ್ರೀ ಕೃಷ್ಣನ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಅವರನ್ನು ಆದರ್ಶ ಪ್ರಾಯ ವ್ಯಕ್ತಿಯಾಗಿ ರೂಪಿಸಿ ವಿಶ್ವ ಮಾನವ ಸಂದೇಶ ಎಲ್ಲೆಡೆ ಪಸರಿಸುವಂತಾಗಿಸಬೇಕು ಎಂದು ಧಾರವಾಡದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಿಂದ ಸೋಮವಾರ ಜರುಗಿದ ಶ್ರೀ ಕೃಷ್ಣ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವ ಸಮುದಾಯಗಳ ಪ್ರೀತಿಗೆ ಪಾತ್ರರಾದ ಶ್ರೀ ಕೃಷ್ಣರ ಕೌಶಲ, ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ, ಆದರ್ಶ, ಸ್ನೇಹ, ರಾಜತಾಂತ್ರಿಕ ನಿಪುಣತೆ, ಸಹನೆ, ತಾಳ್ಮೆಯಂತಹ ಗುಣಗಳಿಂದ ವಿಶಿಷ್ಟವಾಗಿ ಹೊರಹೊಮ್ಮಿದ ಶ್ರೀ ಕೃಷ್ಣ ಎಲ್ಲರಲ್ಲೂ ಬೆರೆಯುವ ವ್ಯಕ್ತಿತ್ವ ಅವರದ್ದು. ಕುಚೇಲ ಶ್ರೀಕೃಷ್ಣನ ಸ್ನೇಹ, ಯಾವ ಬೇಧ ಭಾವಗಳಿಲ್ಲದ ಅಪರೂಪದ ವ್ಯಕ್ತಿತ್ವ, ಶ್ರೀ ಕೃಷ್ಣನ ಆದರ್ಶಗಳು ನಮ್ಮ ಮನೆ ಮನ ಬೆಳಗುವಂತಾಗಲಿ. ಮಕ್ಕಳಿಗೆ ಶ್ರೀಕೃಷ್ಣನ ಆದರ್ಶಗಳನ್ನು ತಾಯಂದಿರು ತಿಳಿಸಿಕೊಡಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಶ್ರೀ ಕೃಷ್ಣನ ಜೀವನ ಚರಿತ್ರೆ ವರ್ಣರಂಜಿತವಾಗಿದ್ದು, ಎಲ್ಲ ವರ್ಗದ ಜನರ ಮೇಲೆ ಪ್ರಭಾವ ಬೀರಿದೆ. ಭಾರತೀಯರಲ್ಲಿ ಶ್ರೀಕೃಷ್ಣನಿಗೆ ಶ್ರೇಷ್ಠ ಸ್ಥಾನವಿದೆ. ಕೃಷ್ಣ ಸರ್ವ ಸಮರ್ಥನಾಗಿದ್ದರು, ಸರ್ವರ ಸಹಭಾಗಿತ್ವ ಉಪಯೋಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದ ಪರಿ ಹಾಗೂ ಆತನ ಜೀವನದ ಪ್ರತಿಯೊಂದು ಘಟನೆಯೂ ಅನುಸರಣಿಯವಾಗಿದೆ. ಪ್ರಸ್ತುತ ವರ್ತಮಾನದಲ್ಲಿ ಶ್ರೀ ಕೃಷ್ಣರ ಸಂದೇಶಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ಪಂಡಿತ ಆಚಾರ್ಯ ವಿನಾಯಕ ಗುಡಿ ಉಪನ್ಯಾಸ ನೀಡುತ್ತಾ, ಶ್ರೀಕೃಷ್ಣನ ವಿಶೇಷ ಗುಣಗಳು ಗಮನ ಸೆಳೆಯುತ್ತವೆ. ಇಂದಿಗೂ ಶ್ರೀಕೃಷ್ಣನ ವ್ಯಕ್ತಿತ್ವ ಮಾದರಿಯಾಗಿದೆ ಎಂದರು.

ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ದುರ್ಗಪ್ಪ ಉಳ್ಳಾಗಡ್ಡಿ ಮತ್ತಿತರರಿದ್ದರು. ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ವೀಣಾ ಥಿಟೆ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೂ ಮುನ್ನ ಸಿದ್ಧೇಶ್ವರ ದೇವಸ್ಥಾನದಿಂದ ಬೃಹತ್ ಮೆರವಣಿಗೆ ನಡೆಯಿತು. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು. ಮೆರವಣಿಗೆಯು ವಿವಿಧ ಕಲಾ ವಾದ್ಯಮೇಳದೊಂದಿಗೆ ಮಾರ್ಕೆಟ್ ರಸ್ತೆಯ ಮೂಲಕ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತದ ಮೂಲಕ ರಂಗಮಂದಿರ ತಲುಪಿತು.

ಗುರು ಕನ್ನೂರ, ರಾಮು ಮನಗೂಳಿ, ಮಹಾದೇವ ದಲಾಲಿ, ಯಂಕಪ್ಪ ಜಾಲವಾದಿ, ಯಲ್ಲಪ್ಪ ದ್ಯಾಬೇರಿ, ಮಹಾದೇವಿ ಬಾಗಲಕೋಟ, ಯಂಕಪ್ಪ ಜೋರಪುರ, ಸುರೇಶ್ ಗೊಲ್ಲರ, ಹಣಮಂತ ತೊರವಿ, ಯಲ್ಲಪ್ಪ ರಬಕವಿ, ಭೀಮವ್ವ ಬಾಗಲಕೋಟೆ, ದುರ್ಗಾವ್ವ ಚಿಕ್ಕರೂಗಿ, ಸಾಮವ್ವ ಗೊಲ್ಲರ, ಯಲ್ಲವ್ವ ನಾಗಠಾಣ, ರಮೇಶ್ ಗೊಲ್ಲರ, ಮಹಾಂತೇಶ್ ಗೊಲ್ಲರ, ದೇವೇಂದ್ರ ಮೀರೆಕರ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ, ಅಡಿವೆಪ್ಪ ಸಾಲಗಲ್ಲ, ವಿದ್ಯಾವಂತಿ ಅಂಕಲಗಿ ಮತ್ತಿತರರಿದ್ದರು.

Share This Article

Curry Leaf Juice ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ರಸ ಕುಡಿಯಿರಿ..ಬೊಜ್ಜು ಕಡಿಮೆಯಾಗುತ್ತದೆ..

Curry Leaf Juice : ಕರಿಬೇವಿನ ಎಲೆಗಳನ್ನು ಆಯುರ್ವೇದದಲ್ಲಿ ಔಷಧಿ ಎಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಇಷ್ಟೆಲ್ಲಾ…

Health Tips : ನೀವು ಮಧ್ಯರಾತ್ರಿ ಎಚ್ಚರಗೊಳ್ಳುತ್ತೀರಾ? ಆರೋಗ್ಯ ಸಮಸ್ಯೆ ಇರೋದು ಪಕ್ಕಾ…

Health Tips : ಮನುಷ್ಯನಿಗೆ ಆಹಾರ ಮತ್ತು ನೀರು ಎಷ್ಟು ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯ…

‘ಗೋಲ್ಡನ್ ಮಿಲ್ಕ್’ ಮಾಡುವ ಸರಿಯಾದ ವಿಧಾನ ಇಲ್ಲಿದೆ; ಉತ್ತಮ ಆರೋಗ್ಯಕ್ಕಾಗಿ ಈ Recipe

ಒಂದು ಚಮಚ ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಅದು ದೇಹಕ್ಕೆ ವರದಾನವಾಗಿದೆ. ಅರಿಶಿನ ಹಾಲು ಅನೇಕ…