South Films: ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸಿನಿಮಾಗಳು ಪ್ರತಿವಾರ ತೆರೆಗೆ ಅಪ್ಪಳಿಸುತ್ತಿದ್ದು, ಅವುಗಳಲ್ಲಿ ಕೆಲವು ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರುತ್ತಿವೆ. ಚಿತ್ರಗಳ ಸೋಲುಗಳು ಆಯಾ ಚಿತ್ರತಂಡಕ್ಕೆ ಹಾಗೂ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಹೊಡೆತ ನೀಡುತ್ತಿದೆ. ಈ ಸೂಕ್ಷ್ಮ ವಿಚಾರ ಅರಿಯುವಲ್ಲಿ ಚಿತ್ರಪ್ರೇಮಿಗಳು ಹಿಂದುಳಿದಿದ್ದಾರೆ. ಕಾರಣ, ಚಿತ್ರಮಂದಿರದಲ್ಲಿ ತೆರೆಕಂಡ ಸಿನಿಮಾಗಳನ್ನು ಥಿಯೇಟರ್ನಲ್ಲಿಯೇ ನೋಡುವ ಬದಲಿಗೆ ಒಟಿಟಿ ಅಥವಾ ಪೈರೆಸಿ ವಿಡಿಯೋ ಬರುವವರೆಗೂ ಕಾದು ವೀಕ್ಷಿಸುವುದು ಅತ್ಯಂತ ಬೇಸರದ ಸಂಗತಿ.

ಇದನ್ನೂ ಓದಿ: ಅಮೆರಿಕಾದಲ್ಲಿ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣನಾದ ಮೈಸೂರಿನ ಉದ್ಯಮಿ
ಕಳೆದ ಕೆಲವು ವಾರಗಳಿಂದ ದಕ್ಷಿಣ ಭಾರತ ಚಿತ್ರರಂಗದ ಬಹುತೇಕ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಷ್ಟಾಗಿ ಕಮಾಲ್ ಮಾಡಿಲ್ಲ. ಇತ್ತೀಚೆಗಷ್ಟೇ ರಿಲೀಸ್ ಆದ ಮೋಹನ್ ಲಾಲ್ ಅಭಿನಯದ ‘ಎಂಪುರಾನ್’ ಚಿತ್ರ ಬಿಡುಗಡೆಗೂ ಮುನ್ನ ಭಾರೀ ವಿವಾದಕ್ಕೆ ಸಿಲುಕಿದ್ದೇ ಆದರೂ ಸದ್ಯ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿದೆ. ಇದು ಚಿತ್ರತಂಡಕ್ಕೆ ಸಕ್ಸಸ್ ತಂದುಕೊಟ್ಟಿದೆ. ಪ್ರಸ್ತುತ ನಾಲ್ಕು ಬಹುನಿರೀಕ್ಷಿತ ಸಿನಿಮಾಗಳು ಮೇ.01ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದ್ದು, ಪ್ರೇಕ್ಷಕರ ಗಮನ ಸೆಳೆಯಲು ಎದುರು ನೋಡುತ್ತಿವೆ.
ತೆರೆಕಾಣಲಿರುವ ದಕ್ಷಿಣ ಭಾರತದ 4 ಸಿನಿಮಾಗಳು
1. HIT: 3 ( ತೆಲುಗು)
ಕಲಾವಿದರು: ನಟ ನಾನಿ, ನಟಿ ಶ್ರೀನಿಧಿ ಶೆಟ್ಟಿ, ರಾವ್ ರಮೇಶ್
ನಿರ್ದೇಶಕ: ಶೈಲೇಶ್ ಕೊಲನು
ಒಂದು ಆಕ್ಷನ್ ಥ್ರಿಲ್ಲರ್ ಜಾನರ್ ಚಿತ್ರ ಇದಾಗಿದ್ದು, ನಟ ನಾನಿ ಅರ್ಜುನ್ ಸರ್ಕಾರ್ ಎಂಬ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. HIT ಮತ್ತು HIT2 ಯಶಸ್ಸಿನ ಬೆನ್ನಲ್ಲೇ ಹಿಟ್ 3 ಇದೀಗ ತೆರೆಗೆ ಬರಲು ಎದುರುನೋಡುತ್ತಿದೆ. ಇತ್ತೀಚೆಗಷ್ಟೇ ಚಿತ್ರ ತಯಾರಕರು ಟ್ರೇಲರ್ ರಿಲೀಸ್ ಮಾಡಿದರು. ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ಲಭಿಸಿದ್ದೇ ಆದರೂ ಸಿನಿಮಾ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಮೇ.5ರಿಂದ ಈ ಐಫೋನ್ಗಳಲ್ಲಿ ವಾಟ್ಸ್ಆ್ಯಪ್ ಸೇವೆ ಸ್ಥಗಿತ! ಹೀಗಿದೆ ಕಾರಣ | WhatsApp
2. ರೆಟ್ರೋ (ತಮಿಳು)
ಕಲಾವಿದರು: ನಟ ಸೂರ್ಯ, ನಟಿ ಪೂಜಾ ಹೆಗ್ಡೆ, ಜೋಜು ಜಾರ್ಜ್
ನಿರ್ದೇಶಕ: ಕಾರ್ತಿಕ್ ಸುಬ್ಬರಾಜ್
ರೆಟ್ರೋ ಚಿತ್ರದಲ್ಲಿ ತನ್ನ ಕಳೆದುಹೋದ ಪ್ರೀತಿಯನ್ನು ಮತ್ತೆ ಸೇರುವ ಪರಿವೇಲ್ ಕಣ್ಣನ್ ಕುರಿತಾದ ಕಥೆ. ಇದೊಂದು ನವೀರಾದ ಪ್ರೇಮಕಥೆ. ಪ್ರೀತಿ-ಪ್ರೇಮದ ಜೊತೆಗೆ ಸಾಹಸ ದೃಶ್ಯಗಳು ಕೂಡ ಚಿತ್ರದಲ್ಲಿವೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ಜಯರಾಮ್, ಪ್ರಕಾಶ್ ರಾಜ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ.
3. ಟೂರಿಸ್ಟ್ ಫ್ಯಾಮಿಲಿ (ತಮಿಳು)
ಕಲಾವಿದರು: ಸಿಮ್ರಾನ್, ಶಶಿಕುಮಾರ್, ಯೋಗಿ ಬಾಬು
ನಿರ್ದೇಶಕ: ಅಭಿಶಾನ್ ಜೀವಿಂತ್
ಶ್ರೀಲಂಕಾದಿಂದ ಬಂದ ಪ್ರವಾಸಿ ಕುಟುಂಬವೊಂದು ತಮಿಳುನಾಡಿನಲ್ಲಿ ಆಶ್ರಯ ಪಡೆಯಲು ಬಂದಾಗ ತಮಗೆ ಎದುರಾಗುವ ಸಮಸ್ಯೆಗಳು, ಮನಮುಟ್ಟುವ ಹೃದಯಸ್ಪರ್ಶಿ ಸನ್ನಿವೇಶಗಳು ಈ ಚಿತ್ರದಲ್ಲಿವೆ. ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿರುವ ರೆಟ್ರೋ ಮತ್ತು HIT 3 ನಂತಹ ಚಿತ್ರಗಳೊಂದಿಗೆ ಈ ಸಿನಿಮಾ ಕೂಡ ಸ್ಪರ್ಧಿಸಲಿದೆ. ಇದು ಚಿತ್ರತಂಡಕ್ಕೆ ಗೆಲುವು ತಂದುಕೊಡಲಿದೆಯಾ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ಇದನ್ನೂ ಓದಿ: ನಮ್ಮ ರಾಷ್ಟ್ರಕ್ಕಾಗಿ ನಾವು ರಕ್ತ ಹರಿಸುವೆವು; ಬಿಲಾವಲ್ ಭುಟ್ಟೋಗೆ ಪವನ್ ಕಲ್ಯಾಣ್ ತಿರುಗೇಟು | Pawan Kalyan
4. ಪಪ್ಪಿ (ಕನ್ನಡ)
ಕಲಾವಿದರು: ನಟ ಆದಿತ್ಯ ಜಿ, ಜಗದೀಶ್ .ಕೆ, ದುರ್ಗಪ್ಪ ಕಾಂಬ್ಳಿ
ನಿರ್ದೇಶನ: ಆಯುಷ್ ಮಲ್ಲಿ
ಉಜ್ವಲ ಭವಿಷ್ಯದ ಕನಸು ಕಾಣುತ ಬೆಂಗಳೂರಿಗೆ ವಲಸೆ ಬರುವ ಉತ್ತರ ಕರ್ನಾಟಕದ ಬಡ ಕುಟುಂಬದ ಪ್ರಯಾಣವನ್ನು ಪರಿ ಪರಿಯಾಗಿ ಅರ್ಥೈಸುವ ಪ್ರಯತ್ನವನ್ನು ಈ ಕನ್ನಡ ಚಿತ್ರ ಮಾಡಿದೆ. ಹಾಸ್ಯ, ಸಂಬಂಧ, ಭಾವನೆಗಳ ಕಥಾಹಂದರ ಇದರಲ್ಲಿದೆ ಎಂಬುದು ಗಮನಾರ್ಹ. ಒಟ್ಟಿನಲ್ಲಿ ನಾಲ್ಕು ಸಿನಿಮಾಗಳು ಇದೇ ಮೇ.01ರಂದು ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರ ಗಮನ ಗೆದ್ದು, ಉತ್ತಮ ಆದಾಯ ಗಳಿಸಲಿ ಎಂದು ಆಶಿಸೋಣ.
ಬೌಲರ್ಗಳನ್ನು ನೋಡಲ್ಲ, ನನಗೆ ಕಿಂಚಿತ್ತು ಭಯವಿಲ್ಲ! ಎದುರಾಳಿ ತಂಡಗಳಿಗೆ ಶತಕ ‘ವೈಭವ’ ಸಂದೇಶ | Vaibhav Suryavanshi