17.8 C
Bengaluru
Wednesday, January 22, 2020

ಸ್ವರ್ಣ ಅರ್ಧಶತಕ!: ದಕ್ಷಿಣ ಏಷ್ಯಾ ಗೇಮ್ಸ್​, ಭಾರತದ ಪಾರಮ್ಯ

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಕಠ್ಮಂಡು: ವುಶು ಸ್ಪರ್ಧಿಗಳು ಹಾಗೂ ಸ್ವಿಮ್ಮರ್​ಗಳ ಭರ್ಜರಿ ನಿರ್ವಹಣೆಯ ನೆರವಿನಿಂದ ಭಾರತ ತಂಡ ನಾಲ್ಕನೇ ದಿನದ ಸ್ಪರ್ಧೆಯಲ್ಲಿಯೇ 56 ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ದಕ್ಷಿಣ ಏಷ್ಯಾ ಗೇಮ್ಸ್​ನಲ್ಲಿ ತನ್ನ ಪಾರಮ್ಯ ಮುಂದುವರಿಸಿದೆ. ಅದರೊಂದಿಗೆ ಕೂಟದಲ್ಲಿ ಭಾರತ ಗೆದ್ದ ಸ್ವರ್ಣ ಪದಕಗಳ ಸಂಖ್ಯೆಯೂ ಅರ್ಧಶತಕದ ಗಡಿ ದಾಟಿದೆ. ಒಂದೇ ದಿನದಲ್ಲಿ ಭಾರತ ಗೆದ್ದ ಗರಿಷ್ಠ ಪದಕಗಳು ಇದಾಗಿದೆ.

ಪ್ರಸ್ತುತ ಭಾರತ ಕೂಟದಲ್ಲಿ 62 ಚಿನ್ನ, 41 ಬೆಳ್ಳಿ ಹಾಗೂ 21 ಕಂಚಿನೊಂದಿಗೆ 124 ಪದಕ ಸಾಧನೆ ಮಾಡಿದೆ. 36 ಚಿನ್ನ, 27 ಬೆಳ್ಳಿ ಹಾಗೂ 38 ಕಂಚಿನೊಂದಿಗೆ 101 ಪದಕ ಗೆದ್ದಿರುವ ನೇಪಾಳ 2ನೇ ಸ್ಥಾನದಲ್ಲಿದ್ದರೆ, 17 ಚಿನ್ನ ಸಹಿತ 107 ಪದಕದೊಂದಿಗೆ ಶ್ರೀಲಂಕಾ 3ನೇ ಸ್ಥಾನದಲ್ಲಿದೆ. ಗುರುವಾರದ ಸ್ಪರ್ಧೆಗಳಿಂದಲೇ ಭಾರತ 30 ಚಿನ್ನ, 18 ಬೆಳ್ಳಿ ಹಾಗೂ 8 ಕಂಚು ಜಯಿಸಿತು. ಅದರಲ್ಲೂ ಸ್ವಿಮ್ಮಿಂಗ್, ವುಶು, ವೇಟ್​ಲಿಫ್ಟಿಂಗ್ ಹಾಗೂ ಅಥ್ಲೆಟಿಕ್ಸ್​ನಿಂದ ಭಾರತಕ್ಕೆ ಹೆಚ್ಚಿನ ಪದಕ ಬಂದವು. ಅದರಲ್ಲೂ ವುಶು ವಿಭಾಗದಿಂದಲೇ 7 ಸ್ವರ್ಣ ಪದಕಗಳು ಖಾತೆಗೆ ಸೇರಿದವು.

ವುಶು ಸ್ಪರ್ಧೆಯಲ್ಲಿ ಸೂರಜ್ ಸಿಂಗ್, ಪುರುಷರ ಗುನ್ಶು ವಿಭಾಗದಲ್ಲಿ ದಿನದ ಮೊದಲ ಸ್ವರ್ಣ ಪದಕ ಜಯಿಸಿದರು. ಆ ಬಳಿಕ, ವೈ ಸಂತೋಯ್ ದೇವಿ (ಮಹಿಳೆಯರ ಸನ್ಶು 52 ಕೆಜಿ), ಪೂನಮ್ (75 ಕೆಜಿ), ದೀಪಿಕಾ (70 ಕೆಜಿ), ಸುಶೀಲಾ (65 ಕೆಜಿ), ರೋಶಿಬಿನಾ ದೇವಿ (60 ಕೆಜಿ) ಹಾಗೂ ಸುನಿಲ್ ಸಿಂಗ್ (52 ಕೆಜಿ) ಚಿನ್ನದ ಪದಕ ಗೆದ್ದರು. ಟೇಕ್ವಾಂಡೋದಲ್ಲಿ ಅದ್ಭುತ ನಿರ್ವಹಣೆ ಮುಂದುವರಿದಿದ್ದು, 3 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು ಭಾರತದ ಖಾತೆಗೆ ಸೇರಿದೆ. ಅಥ್ಲೆಟಿಕ್ಸ್​ನಲ್ಲಿ 1 ಚಿನ್ನದೊಂದಿಗೆ 6 ಪದಕಗಳು ಬಂದವು. -ಪಿಟಿಐ/ಏಜೆನ್ಸೀಸ್

ರಾಜ್ಯದ ಲಿಖಿತ್, ಅಪೇಕ್ಷಾಗೆ ಬಂಗಾರ

ಸ್ವಿಮ್ಮಿಂಗ್ ಸ್ಪರ್ಧೆಯಿಂದ ಭಾರತದಲ್ಲಿ ದಿನದಲ್ಲಿ ಗರಿಷ್ಠ 11 ಪದಕ ಜಯಿಸಿತು. ಇದರಲ್ಲಿ 4 ಚಿನ್ನ, 6 ಬೆಳ್ಳಿ ಹಾಗೂ 1 ಕಂಚಿನ ಪದಕವಾಗಿದೆ. ಕರ್ನಾಟಕದ ಎಸ್​ಪಿ ಲಿಖಿತ್ ಪುರುಷರ 200ಮೀ ಬ್ರೆಸ್ಟ್​ಸ್ಟ್ರೋಕ್ ವಿಭಾಗವನ್ನು 2 ನಿಮಿಷ 14.67 ಸೆಕೆಂಡ್​ನಲ್ಲಿ ಕ್ರಮಿಸುವ ಮೂಲಕ ಸ್ವರ್ಣ ಗೆದ್ದರೆ, ಧನುಷ್ ಸುರೇಶ್ (2ನಿ. 19.27ಸೆ) ಬೆಳ್ಳಿ ಜಯಿಸಿದರು. ರಾಜ್ಯದ ಅಪೇಕ್ಷಾ ಫೆರ್ನಾಂಡಿಸ್ ಮೂಲಕ ಭಾರತ 2ನೇ ಚಿನ್ನ ಒಲಿಯಿತು. 200 ಮೀ ಬ್ರೆಸ್ಟ್​ಸ್ಟ್ರೋಕ್ ವಿಭಾಗವನ್ನು 2 ನಿಮಿಷ 38.05 ಸೆಕೆಂಡ್​ನಲ್ಲಿ ಕ್ರಮಿಸಿ ಚಿನ್ನ ಗೆದ್ದರು. ಮಹಿಳೆಯರ 100 ಮೀ. ಬಟರ್​ಫ್ಲೈ ವಿಭಾಗದಲ್ಲಿ ದಿವ್ಯಾ ಸತೇಜಾ 1 ನಿಮಿ 02.78 ಸೆಕೆಂಡ್​ನಲ್ಲಿ ಕ್ರಮಸಿ ಸ್ವರ್ಣ ಗೆದ್ದರೆ, ಕೊನೆಯಲ್ಲಿ ಮಹಿಳೆಯ 400ಮೀ ಫ್ರೀಸ್ಟೈಲ್ ರಿಲೇ ತಂಡ 3 ನಿಮಿಷ. 55.17 ಸೆಕೆಂಡ್​ನಲ್ಲಿ ಕ್ರಮಿಸಿ ಸ್ವರ್ಣ ಜಯಿಸಿತು.

ವೇಟ್​ಲಿಫ್ಟಿಂಗ್​ನಲ್ಲಿ 4 ಚಿನ್ನದ ಪದಕ ಗೆಲುವು

ಮೊದಲ ದಿನದ ವೇಟ್​ಲಿಫ್ಟಿಂಗ್ ಸ್ಪರ್ಧೆಯಲ್ಲಿ 4 ಚಿನ್ನ ಗೆಲ್ಲಲು ಭಾರತ ಯಶ ಕಂಡಿತು. ಜಿಹಿಲ್ಲಿ ದಲಾಬೆಹೆರಾ ಪುರುಷರ 66 ಕೆಜಿ ವಿಭಾಗದಲ್ಲಿ 151 ಕೆಜಿ ಭಾರ ಎತ್ತುವ ಮೂಲಕ ಸ್ವರ್ಣ ಜಯಿಸಿದರು. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಸ್ನೇಹಾ ಸೋರೆನ್ 157 ಕೆಜಿ ಭಾರ ಎತ್ತುವ ಮೂಲಕ ಅಗ್ರಸ್ಥಾನ ಪಡೆದರು. ಕಾಮನ್ವೆಲ್ತ್ ಚಾಂಪಿಯನ್​ಷಿಪ್ ಸ್ವರ್ಣ ಪದಕ ವಿಜೇತೆ ಎಸ್ ಬಿಂದಿಯಾರಾಣಿ ದೇವಿ 55 ಕೆಜಿ ವಿಭಾಗದಲ್ಲಿ 181 ಕೆಜಿ ಭಾರ ಎತ್ತುವ ಮೂಲಕ ಪದಕ ವೇದಿಕೆಯಲ್ಲಿ ಮೊದಲ ಸ್ಥಾನ ಪಡೆದರು. ಸಿದ್ಧಾರ್ಥ್ ಗೊಗೋಲ್ 61 ಕೆಜಿ ವಿಭಾಗದಲ್ಲಿ 264 ಕೆಜಿ ಭಾರ ಎತ್ತುವ ಮೂಲಕ ನಾಲ್ಕನೇ ಚಿನ್ನ ಗಳಿಸಿಕೊಟ್ಟರು.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...