ಐಸಿಸಿ ವಿಶ್ವಕಪ್​ 2019: ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ

ಕಾರ್ಡಿಫ್​: ಐಸಿಸಿ ವಿಶ್ವಕಪ್​ 2019ರ 21ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ್​ ತಂಡಗಳು ಮುಖಾಮುಖಿಯಾಗುತ್ತಿದ್ದು ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್​ಆಯ್ಕೆ ಮಾಡಿಕೊಂಡಿದೆ.

ಸೋಫಿಯಾ ಗಾರ್ಡನ್ಸ್​ನಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಎರಡು ತಂಡಗಳು ಉತ್ತಮ ರೀತಿಯಲ್ಲಿಯೇ ತಯಾರಿ ನಡೆಸಿವೆ. ವಿಶ್ವಕಪ್​​ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಗೆ ಈ ಪಂದ್ಯ ಅಗ್ನಿ ಪರೀಕ್ಷೆಯಾಗಿದೆ.

ದಕ್ಷಿಣ ಆಫ್ರಿಕಾ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಒಂದು ಅಂಕ ಪಡೆದಿರುವ ತಂಡ 9ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಆಡಿದ ಮೂರು ಪಂದ್ಯಗಳಲ್ಲಿ ಮೂರರಲ್ಲಿಯೂ ಸೋಲನ್ನು ಅನುಭವಿಸಿದ್ದು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಗೆಲುವಿನ ನಿರೀಕ್ಷೆಯಲ್ಲಿರುವ ಎರಡೂ ತಂಡಗಳು ಇಂದಿನ ಪಂದ್ಯಕ್ಕೆ ಉತ್ತಮ ರೀತಿಯಲ್ಲಿಯೇ ಸಜ್ಜಾಗಿದೆ. ಉಭಯ ತಂಡಗಳು ಕಳೆದ 11 ಆವೃತ್ತಿಗಳಲ್ಲಿಯೂ ವಿಶ್ವಕಪ್​​ ಗೆಲ್ಲುವಲ್ಲಿ ವಿಫಲವಾಗಿವೆ. (ಏಜೆನ್ಸೀಸ್​)

ದಕ್ಷಿಣ ಆಫ್ರಿಕಾ: ಕ್ವಿಂಟನ್​ ಡಿ ಕಾಕ್​ (ವಿ.ಕೀ), ಫಾಫ್ ಡು ಪ್ಲೆಸಿಸ್ (ನಾ), ಹಶಿಮ್ ಆಮ್ಲಾ, ಐಡೆನ್ ಮಾರ್ಕ್ರಮ್, ರಾಸ್ಸಿ ವ್ಯಾನ್ ಡೆರ್ ಡುಸೆನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಕ್ರಿಸ್ ಮೋರಿಸ್, ಕಗಿಸೊ ರಬಾಡಾ, ಇಮ್ರಾನ್ ತಾಹಿರ್, ಬ್ಯೂರನ್ ಹೆಂಡ್ರಿಕ್ಸ್,

ಅಫ್ಘಾನಿಸ್ತಾನ: ಗುಲ್ಬಾದಿನ್ ನಾಯಿಬ್ (ನಾ), ಇಕ್ರಮ್ ಅಲಿ ಖಿಲ್ (ವಿ.ಕೀ), ಹಜರದುಲ್ಲಾ ಜಾಝಾಯಿ, ನೂರ್ ಅಲಿ ಜದ್ರಾನ್, ರಹ್ಮತ್ ಷಾ, ಹಶ್ಮಾತುಲ್ಲಾ ಶಾಹಿದಿ, ಮೊಹಮ್ಮದ್ ನಬಿ, ರಶೀದ್ ಖಾನ್, ಅಫ್ತಾಬ್ ಅಲಮ್, ಹಮೀದ್ ಹಸನ್, ಅಸ್ಗರ್ ಅಫಘಾನ್

Leave a Reply

Your email address will not be published. Required fields are marked *