ಏಕದಿನ ವಿಶ್ವಕಪ್​: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ದಕ್ಷಿಣ ಆಫ್ರಿಕಾ

ಸೌಥಾಂಪ್ಟನ್: 12ನೇ ಆವೃತ್ತಿಯ ಏಕದಿನ ವಿಶ್ವಕಪ್​ನ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಾಸ್​ ಗೆದ್ದ ದಕ್ಷಿಣ ಆಫ್ರಿಕಾದ ನಾಯಕ ಡು ಪ್ಲೆಸಿಸ್ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

ಎರಡು ಪಂದ್ಯಗಳಲ್ಲಿ ಸೋಲು, ಗಾಯದ ಸಮಸ್ಯೆಗಳಿಂದ ಆರಂಭದಲ್ಲೇ ಜಂಘಾಬಲವನ್ನು ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ ಟೀಮ್ ಈ ಪಂದ್ಯದಲ್ಲಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಮತ್ತೊಂದೆಡೆ ಈ ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.
ತಂಡಗಳು ಹೀಗಿವೆ.

ಭಾರತ: ವಿರಾಟ್​ ಕೊಹ್ಲಿ (ನಾ), ರೋಹಿತ್​ ಶರ್ಮಾ, ಶಿಖರ್​ ಧವನ್​, ಕೆ.ಎಲ್​. ರಾಹುಲ್​, ಎಂ.ಎಸ್​. ಧೋನಿ (ವಿ.ಕೀ.), ಕೇದಾರ್​ ಜಾಧವ್​, ಹಾರ್ದಿಕ್​ ಪಾಂಡ್ಯ, ಭುವನೇಶ್ವರ್​ ಕುಮಾರ್​, ಕುಲ್​ದೀಪ್​ ಯಾದವ್​, ಯಜುವೇಂದ್ರ ಚಹಾಲ್​, ಜಸ್​ಪ್ರೀತ್​ ಬುಮ್ರಾ.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿಕಾಕ್ (ವಿ.ಕೀ.), ಹಾಶಿಂ ಆಮ್ಲ, ಡು ಪ್ಲೆಸಿಸ್ (ನಾ), ವೆನ್​ ಡೆರ್​ ಡ್ಯುಸೆನ್​, ಡೇವಿಡ್ ಮಿಲ್ಲರ್, ಜೆಪಿ ಡುಮಿನಿ, ಪೆಹ್ಲುಕ್​ವಾಯೊ, ಕ್ರಿಸ್ ಮಾರಿಸ್, ಕಗಿಸೊ ರಬಾಡ, ಇಮ್ರಾನ್​ ತಾಹಿರ್, ತಬ್ರಿಯಾಜ್​ ಶಂಸಿ.

Leave a Reply

Your email address will not be published. Required fields are marked *