ಕರಾಚಿ: ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಲ ದಾಖಲೆ ಬರೆದಿದ್ದಾರೆ. ಕರಾಚಿಯ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ತಂಡ ಆತಿಥೇಯ ಪಾಕಿಸ್ತಾನ ತಂಡದ ಬಿಗಿ ಹಿಡಿತದಲ್ಲಿ ಸಿಲುಕಿದರೂ ರಬಾಡ ಮಾತ್ರ ಭರ್ಜರಿ ನಿರ್ವಹಣೆ ಮೂಲಕ ಗಮನಸೆಳೆದಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ (44), ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಕಬಳಿಸಿದ ದಕ್ಷಿಣ ಆಫ್ರಿಕಾದ 8ನೇ ಹಾಗೂ 3ನೇ ಅತಿವೇಗದ ಬೌಲರ್ ಎನಿಸಿದರು. ಡೇಲ್ ಸ್ಟೈನ್ 39 ಮತ್ತು ಅಲನ್ ಡೊನಾಲ್ಡ್ 42 ಟೆಸ್ಟ್‌ಗಳಲ್ಲಿ ಈ ಸಾಧನೆ ತೋರಿದ್ದರು.
ಇದನ್ನೂ ಓದಿ: ಹಸೆಮಣೆಗೇರಿದ ಟೀಮ್ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್,
25 ವರ್ಷ, 248 ದಿನ ವಯಸ್ಸಿನ ರಬಾಡ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪೂರೈಸಿದ 4ನೇ ಅತಿ ಕಿರಿಯ ಎನಿಸಿದರು. ವಕಾರ್ ಯೂನಿಸ್, ಕಪಿಲ್ ದೇವ್ ಮತ್ತು ಹರ್ಭಜನ್ ಸಿಂಗ್ ಮೊದಲ 3 ಸ್ಥಾನದಲ್ಲಿದ್ದಾರೆ. ರಬಾಡ (8154) 3ನೇ ಅತಿಕಡಿಮೆ ಎಸೆತಗಳಲ್ಲಿ 200 ವಿಕೆಟ್ ಕಬಳಿಸಿದ ಸಾಧನೆಯನ್ನೂ ಮಾಡಿದರು. ವಕಾರ್ ಯೂನಿಸ್ (7730 ಎಸೆತ) ಹಾಗೂ ಡೇಲ್ ಸ್ಟೇನ್ (7848) ಮೊದಲ ಎರಡು ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ತಂಡದ ಬಿಗಿ ಹಿಡಿತದಲ್ಲಿ ದಕ್ಷಿಣ ಆಫ್ರಿಕಾ
ಪಾಕಿಸ್ತಾನ ತಂಡ ಮೊದಲ ಇನಿಂಗ್ಸ್‌ನಲ್ಲಿ 378 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ 158 ರನ್ ಹಿನ್ನಡೆಯೊಂದಿಗೆ ದ್ವಿತೀಯ ಸರಣಿ ಬ್ಯಾಟಿಂಗ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 187 ರನ್ ಪೇರಿಸಿದ್ದು, 29 ರನ್ ಮುನ್ನಡೆ ಸಾಧಿಸಿದೆ. ದಕ್ಷಿಣ ಆಫ್ರಿಕಾ ತಂಡ ಮೊದಲ ಇನಿಂಗ್ಸ್ 220 ರನ್‌ಗಳಿಸಿತ್ತು.
Test match cricket at it's finest at the National Stadium in Karachi #PAKvSA #SeeUsOnThePitch pic.twitter.com/gkGYfBLtXs
— Proteas Men (@ProteasMenCSA) January 28, 2021