ಕೇಪ್‌ಟೌನ್: ಸರ್ವಾಂಗೀಣ ನಿರ್ವಹಣೆ ತೋರಿದ ದಕ್ಷಿಣ ಆಫ್ರಿಕಾ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ಎದುರು 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಟೆಂಬಾ ಬವುಮಾ ಪಡೆ 2 ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದೆ.
ಸೋಮವಾರ ಮುಕ್ತಾಯಗೊಂಡ ಪಂದ್ಯದ ನಾಲ್ಕನೇ ದಿನ 1 ವಿಕೆಟ್‌ಗೆ 49 ರನ್‌ಗಳಿಂದ ಆಟ ಆರಂಭಿಸಿದ ಪಾಕ್, ಕಗಿಸೋ ರಬಾಡ (115ಕ್ಕೆ 3) ಹಾಗೂ ಕೇಶವ್ ಮಹಾರಾಜ್ (137ಕ್ಕೆ 3) ಬಿಗಿ ಬೌಲಿಂಗ್ ದಾಳಿಗೆ 122.1 ಓವರ್‌ಗಳಲ್ಲಿ 478 ರನ್‌ಗಳಿಗೆ ದ್ವಿತೀಯ ಇನಿಂಗ್ಸ್ ಮುಗಿಸಿತು. ಇನಿಂಗ್ಸ್ ಸೋಲು ತಪ್ಪಿಸಿಕೊಂಡ ಪಾಕ್, ಆಫ್ರಿಕಾಕ್ಕೆ ಕೇವಲ 58 ರನ್ ಗುರಿ ನೀಡಿತು. ಬೆಡ್ಡಿಂಗ್ ಹ್ಯಾಮ್ (44*) ಹಾಗೂ ಏಡನ್ ಮಾರ್ಕ್ರಮ್ (14*) 7.1 ಓವರ್‌ಗಳಲ್ಲಿ ವಿಕೆಟ್‌ನಷ್ಟವಿಲ್ಲದೆ 58 ರನ್‌ಗಳಿಸಿ ಗೆಲ್ಲಿಸಿದರು.
ದ.ಆಫ್ರಿಕಾ: 615 ಹಾಗೂ 7.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 58 (ಬೆಡ್ಡಿಂಗ್‌ಹ್ಯಾಮ್ 44*, ಮಾರ್ಕ್ರಮ್ 14*). ಪಾಕಿಸ್ತಾನ: 194 ಹಾಗೂ 122.1 ಓವರ್‌ಗಳಲ್ಲಿ 478 (ಮಸೂದ್ 145, ರಿಜ್ವಾನ್ 41, ಸಲ್ಮಾನ್ 48, ರಬಾಡ 115ಕ್ಕೆ 3, ಕೇಶವ್ 137ಕ್ಕೆ 3).