ಲಾರ್ಡ್ಸ್‌ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ WTC 2025 ಪ್ರಶಸ್ತಿಯನ್ನು ಗೆದ್ದಿತು.
ಇದನ್ನೂ ಓದಿ:Black Box ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಚಿವ ರಾಮ್ ಮೋಹನ್ ನಾಯ್ಡು: ವಿಮಾನ ದುರಂತದ ಬಗ್ಗೆ ಹೇಳಿದ್ದೇನು?
282ರನ್ಗಳ ಗುರಿಯನ್ನು ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡ ನಾಯಕ ಟೆಂಬಾ ಬಾವುಮಾ ಹಾಗೂ ಮಾಕ್ರಂ ಅವರ ಶತಕದ ನೆರವಿನಿಂದ 285 ರನ್ ಗಳಿಸುವ ಮೂಲಕ 27 ವರ್ಷಗಳ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದುಕೊಂಡಿತು.
ಇದನ್ನೂ ಓದಿ:15 ದಿನದಲ್ಲಿ ರಾಜಕುಮಾರ್ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಶಾಸಕರ ಭರವಸೆ
ಆಫ್ರಿಕಾ ತಂಡ ಇದರೊಂದಿಗೆ ಪ್ರಥಮ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಗಿ ಹೊರ ಹೊಮ್ಮಿದೆ. ಐಡೆನ್ ಮಾರ್ಕ್ರಾಮ್ ಅವರ ಭರ್ಜರಿ ಶತಕ ಗೆಲುವಿಗೆ ದೊಡ್ಡ ಕೊಡುಗೆಯೇ ಎಂದು ಹೇಳಬಹುದು. ಎರಡೂ ಇನ್ನಿಂಗ್ಸ್ನಲ್ಲೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಂಹಸ್ವಪ್ನವಾಗಿ ಕಾಡಿದ ಕಗಿಸೋ ರಬಾಡ ಒಟ್ಟು 9 ವಿಕೆಟ್ ಉರುಳಿಸಿ ಬಹುದೊಡ್ಡ ಕೊಡುಗೆ ನೀಡಿದರು.
ದಿಢೀರ್ ಭಾರತಕ್ಕೆ ಮರಳಿದ ಗಂಭೀರ್: ಟೀಮ್ ಇಂಡಿಯಾ ಮುಖ್ಯ ಕೋಚ್ ತಾಯಿಗೆ ಅನಾರೋಗ್ಯ