ಕರಾಚಿ: ಆರಂಭಿಕ ಬ್ಯಾಟ್ಸ್‌ಮನ್ ಅಡಿನ್ ಮಾರ್ಕ್ರಮ್ (74ರನ್, 224 ಎಸೆತ, 10 ಬೌಂಡರಿ) ಹಾಗೂ ರಾಸೀ ವ್ಯಾನ್ ಡರ್ ಡುಸೆನ್ (64ರನ್, 151ಎಸೆತ, 5ಬೌಂಡರಿ) ಜೋಡಿಯ ಪ್ರತಿಹೋರಾಟದ ನಡುವೆಯೂ ಆತಿಥೇಯ ಪಾಕಿಸ್ತಾನ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ. ದಿನದಾಟದ ಕಡೇ ಅವಧಿಯಲ್ಲಿ ಸ್ಪಿನ್ನರ್ ಯಾಸಿರ್ ಷಾ (53ಕ್ಕೆ 3) ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ ನೀಡಿದರು.
ಇದನ್ನೂ ಓದಿ: ಯೂಟ್ಯೂಬ್ ನಿಂದ ನೋಟು ಮುದ್ರಿಸುವುದನ್ನು ಕಲಿತವ ಈಗ ಪೊಲೀಸರ ಅತಿಥಿ
ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 8 ವಿಕೆಟ್‌ಗೆ 308ರನ್‌ಗಳಿಂದ ದಿನದಾಟ ಆರಂಭಿಸಿದ ಪಾಕಿಸ್ತಾನ ತಂಡ 378 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ 158 ರನ್ ಹಿನ್ನಡೆಯೊಂದಿಗೆ ದ್ವಿತೀಯ ಸರಣಿ ಬ್ಯಾಟಿಂಗ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 187 ರನ್ ಪೇರಿಸಿದ್ದು, 29 ರನ್ ಮುನ್ನಡೆ ಸಾಧಿಸಿದೆ. ದಕ್ಷಿಣ ಆಫ್ರಿಕಾ ತಂಡ ಮೊದಲ ಇನಿಂಗ್ಸ್ 220 ರನ್‌ಗಳಿಸಿತ್ತು. ಕೇಶವ್ ಮಹರಾಜ್ (2) ಹಾಗೂ ನಾಯಕ ಕ್ವಿಂಟನ್ (0) ಕ್ರೀಸ್‌ನಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ: 220 ಮತ್ತು 4 ವಿಕೆಟ್‌ಗೆ 187 (ಅಡಿನ್ ಮಾರ್ಕ್ರಮ್ 74, ಡೀನ್ ಎಲ್ಗರ್ 29, ವ್ಯಾನ್ ಡರ್ ಡುಸೆನ್ 64, ಪ್ಲೆಸಿಸ್ 10, ಯಾಸಿರ್ ಷಾ 53ಕ್ಕೆ 3). ಪಾಕಿಸ್ತಾನ: 378 (ನುಮಾನ್ ಅಲಿ 24, ಯಾಸಿರ್ ಷಾ 38*, ಕಗಿಸೊ ರಬಾಡ 70ಕ್ಕೆ 3, ಕೇಶವ್ ಮಹರಾಜ್ 90ಕ್ಕೆ 3, ಲುಂಗಿ ಎನ್‌ಗಿಡಿ 57ಕ್ಕೆ 2, ಅನ್ರಿಚ್ ನೋರ್ಜೆ 105ಕ್ಕೆ 2)
🛑 DAY 3 | CLOSE OF PLAY
Application and determination from Aiden Markram (74) and Rassie van der Dussen (64) sees us end the day with a 29-run lead
🇿🇦 South Africa 187/4
📺 Watch the match on SuperSport 212
📝 Ball by Ball https://t.co/ziwmIMr0yg#PAKvSA #SeeUsOnThePitch pic.twitter.com/T9NeHdOzUG— Proteas Men (@ProteasMenCSA) January 28, 2021