ಕಾಯಿಲೆಗಳ ಮೂಲ ಅಶುದ್ಧ ನೀರು: ಬಿಎಂಕೆ

students

ಶಿವಮೊಗ್ಗ: ನಮಗೆ ಬರುವ ಕಾಯಿಲೆಗಳ ಪೈಕಿ ಶೇ.60ರಷ್ಟು ಅಶುದ್ಧ ನೀರಿನಿಂದಲೇ ಬರುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಶಿವಮೊಗ್ಗದಲ್ಲಿ ಎಷ್ಟೊಂದು ಆಸ್ಪತ್ರೆ, ನರ್ಸಿಂಗ್ ಹೋಂಗಳಿವೆ. ಎಲ್ಲವೂ ರೋಗಿಗಳಿಂದ ಭರ್ತಿಯಾಗಿರುತ್ತವೆ. ಇದು ಪರಿಸ್ಥಿತಿಯ ಸೂಕ್ಷ್ಮವನ್ನು ವಿವರಿಸುತ್ತದೆ ಎಂದು ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿದರು.
ತುಂಗಾ, ಭದ್ರಾ ಮಾತ್ರವಲ್ಲ ಇಂದು ದೇಶದ ಬಹುತೇಕ ನದಿಗಳು ಕಲುಷಿತಗೊಂಡಿವೆ. ನದಿ ಶುದ್ಧೀಕರಣಕ್ಕೆ ಮುಂದಾಗಲು ಇದು ಸಕಾಲವಾಗಿದೆ. ತುಂಗಾ ನದಿ 147 ಕಿಮೀ ಹರಿದು ಕೂಡಲಿಗೆ ಬರುತ್ತದೆ. ಭದ್ರಾ ನದಿ 171 ಕಿಮೀ ಹರಿದು ಕೂಡಲಿಯಲ್ಲಿ ಸಂಗಮವಾಗುತ್ತದೆ. ಮುಂದೆ ತುಂಗಭದ್ರಾ 600 ಕಿಮೀ ಹರಿದು ಕೃಷ್ಣಾ ನದಿಯನ್ನು ಸೇರುತ್ತದೆ. ಕೃಷ್ಣಾ ನದಿಯನ್ನು ಸೇರುವ 13 ಉಪ ನದಿಗಳ ಪೈಕಿ ತುಂಗಭದ್ರಾ ನದಿಯೇ ಅತ್ಯಂತ ದೊಡ್ಡದು ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಮನುಕುಲಕ್ಕೆ ಅಗತ್ಯವಿರುವ ಹಾಗೂ ಅಭಿವೃದ್ಧಿಪರ ಸಂಗತಿಗಳಲ್ಲಿ ಎಂದಿಗೂ ರಾಜಕೀಯ ಸಲ್ಲದು. ಈಗ ತುಂಗಭದ್ರಾ ಅಭಿಯಾನದ ವಿಚಾರದಲ್ಲೂ ಪಕ್ಷಾತೀತವಾಗಿ ಬೆಂಬಲ ಸಿಗುತ್ತಿದೆ. ಶೃಂಗೇರಿಯಿಂದ ಆರಂಭವಾದ ಪಾದಯಾತ್ರೆಗೆ ಎಲ್ಲ ಕಡೆಯೂ ಸಾರ್ವಜನಿಕರಿಂದ ವ್ಯಾಪಕ ಪ್ರತಿಕ್ರಿಯೆ ಸಿಕ್ಕಿದೆ. ಅನೇಕರು ಸಭೆಗಳಿಗೆ ಬಂದು ಶಕ್ತಿ ತುಂಬಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಈ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದರು.

Share This Article

ವಿಟಮಿನ್​ ಡಿ ಕೊರತೆ: ನೀವು ಈ ಆಹಾರಗಳನ್ನು ಸೇವಿಸಿದ್ರೆ ಸಾಕು ಬೇಕಾದಷ್ಟು ಡಿ ವಿಟಮಿನ್ ಪಡೆಯಬಹುದು! Vitamin D

Vitamin D : ಚಳಿಗಾಲದಲ್ಲಿ ದೀರ್ಘಕಾಲದ ನೋವು ಮತ್ತು ಮೂಳೆ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಈ…

ಕೂದಲು ಬಿಳಿಯಾಗುವುದನ್ನು ತಡೆಯುವುದೇಗೆ ಎಂಬ ಚಿಂತೆಯೇ?; ಇಲ್ಲಿದೆ ಸಿಂಪಲ್​ ವಿಧಾನ | Health Tips

10 ವರ್ಷದಿಂದ 25 ರಿಂದ 30 ರವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಕಾಲಿಕ ಬಿಳಿ ಕೂದಲಿನಿಂದ…

ನೀವು ಈ ನಕ್ಷತ್ರದಲ್ಲಿ ಹುಟ್ಟಿದ್ದೀರಾ? ಹಾಗಾದ್ರೆ ಈ ಡಿಸೆಂಬರ್​ ತಿಂಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ! Birth of Stars

Birth of Stars : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ…