ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಗಂಗೂಲಿ ಹೇಳಿದ ಕಿವಿಮಾತೇನು?

ನವದೆಹಲಿ: ಆಟಗಾರರ ನಾಯಕ ಎಂದೇ ಗುರುತಿಸಿಕೊಂಡಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಗೆ ಬಲಿಷ್ಠ ತಂಡ ಕಟ್ಟುವ ಸಂಬಂಧ ಸಲಹೆಯೊಂದನ್ನು ನೀಡಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾರತ ತಂಡ 4-1 ಅಂತರದಿಂದ ಸೋಲನುಭವಿಸಿದೆ. ಈ ಹಿನ್ನೆಲೆಯಲ್ಲಿ ಸೌರವ್​ ಗಂಗೂಲಿ ಟೀಂ ಇಂಡಿಯಾದ ಪ್ರದರ್ಶನ ಕುರಿತು ಮಾತನಾಡಿದ್ದು, ತಂಡದ ನಾಯಕ ವಿರಾಟ್​ ಕೊಹ್ಲಿ ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಅವರಿಗೆ ಸೂಕ್ತ ಬೆಂಬಲ ನೀಡಬೇಕು ಎಂದು ತಿಳಿಸಿದ್ದಾರೆ. ಈ ಸರಣಿಯಲ್ಲಿ ತಂಡದ ಪ್ರಮುಖ ಪ್ರತಿಭಾವಂತ ಆಟಗಾರರಾದ ಚೇತೇಶ್ವರ್​ ಪೂಜಾರಾ, ಅಜಿಂಕ್ಯ ರಹಾನೆ, ಕೆ.ಎಲ್​. ರಾಹುಲ್​ ಪ್ರದರ್ಶನವನ್ನು ಗಮನಿಸಿದ್ದೇನೆ. ಕೊಹ್ಲಿ ಆಟಗಾರರ ಸಾಮರ್ಥ್ಯವನ್ನು ಹೊರತೆಗೆಯಲು ಪ್ರಯತ್ನಿಸಬೇಕು ಎಂದು ತಿಳಿಸಿದ್ದಾರೆ.

ತಂಡದ ನಾಯಕ ಆಟಗಾರರ ಹೆಗಲ ಮೇಲೆ ಕೈಹಾಕಿ ಪಂದ್ಯ ಗೆಲ್ಲಿಸುವಂತೆ ಆಡುವಂತೆ ವಿಶ್ವಾಸ ತುಂಬಬೇಕು. ಇಷ್ಟು ಮಾಡಿದರೆ ಆ ಆಟಗಾರರ ಪ್ರದರ್ಶನ ಮಟ್ಟ ಗಮನಾರ್ಹವಾಗಿ ಉತ್ತಮವಾಗುತ್ತದೆ. ತಂಡದೊಳಗೆ ಪ್ರತಿಭೆ ಮತ್ತು ಪ್ರತಿಭಾವಂತರನ್ನು ಗುರುತಿಸುವ ವಾತಾವರಣ ಇರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಅಂತ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಅದ್ಭುತ ಶತಕ ಗಳಿಸಿದ ಕೆ.ಎಲ್​. ರಾಹುಲ್​ನನ್ನು ಗಂಗೂಲಿ ಪ್ರಶಂಸಿಸಿದ್ದು, ಸರಣಿಯಲ್ಲಿ ಅವರು ಮೇಲೆ ಸಾಕಷ್ಟು ಒತ್ತಡವಿತ್ತು, ಇಂಗ್ಲೆಂಡ್​ ಬೌಲರ್​ಗಳೂ ಅವರನ್ನು ಸಾಕಷ್ಟು ಕಾಡಿದರು. ಆದರೆ, ಅವರು ಅಂತಿಮ ಪಂದ್ಯದಲ್ಲಿ ಒತ್ತಡದಿಂದ ಹೊರಬಂದು ಗಮನಾರ್ಹ ಪ್ರದರ್ಶನ ನೀಡಿದರು ಎಂದು ತಿಳಿಸಿದರು.