ಸಂಡೂರು: ಕನ್ನಡ ನವ್ಯ ಸಾಹಿತ್ಯದ ಅಪ್ರತಿಮ ಕತೆಗಾರ ಡಾ.ರಾಜಶೇಖರ ನೀರಮಾನ್ವಿ ಅವರ ಅಗಲಿಕೆಯಿಂದ ನಾಡಿನ ಸಾಹಿತ್ಯ ಲೋಕ ಬಡವಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ ಹೇಳಿದರು.
ಪಟ್ಟಣದ ಬಿಕೆಜಿ ಹೌಸ್‌ನಲ್ಲಿ ಕಸಾಪ ತಾಲೂಕು ಘಟಕ ಏರ್ಪಡಿಸಿದ್ದ ಸಾಹಿತಿ ರಾಜಶೇಖರ ನೀರಮಾನ್ವಿ ಅವರ ನುಡಿನಮನ ಕಾರ್ಯಕ್ರಮ ಗುರುವಾರ ಮಾತನಾಡಿದರು.
ಹಂಗಿನರಮನೆಯ ಹೊರಗೆ ಮತ್ತು ಕರ್ಪೂರದ ಕಾಯದಲ್ಲಿ ಎಂಬ ಎರಡು ಪ್ರಸಿದ್ಧ ಕಥಾ ಸಂಕಲನಗಳನ್ನು ರಚಿಸಿದ್ದಾರೆ. ಅನೇಕ ಕವನ ಸಂಕಲನಗಳನ್ನು ಬರೆದಿರುವ ಅವರು ರಾಯಚೂರು ಜಿಲ್ಲೆಯ ತವಕ ತಲ್ಲಣಗಳಿಗೆ ಕತೆಗಳ ಮೂಲಕ ಕನ್ನಡಿ ಹಿಡಿದಿದ್ದಾರೆ ಎಂದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ಬಸವರಾಜ ಮಸೂತಿ, ಸಿ.ಎಂ.ಶಿಗ್ಗಾಂವಿ ಮಾತನಾಡಿದರು. ಪ್ರಮುಖರಾದ ವೀರೇಶ್ ಗಾಣಿಗ, ನೀಲಾಂಬಿಕೆ, ಎಚ್.ಎನ್.ಬೋಸ್ಲೆ, ಎಂ.ಟಿ.ರಾಥೋಡ್, ಚಂದ್ರಶೇಖರಪ್ಪ, ಕರಡಿ ಯರ‌್ರಿಸ್ವಾಮಿ, ಶಿವಮೂರ್ತಿಸ್ವಾಮಿ ಸೋವೇನಹಳ್ಳಿ ಇದ್ದರು.