ಯುವಿ ವಿದಾಯಕ್ಕೆ ಧವನ್​ ಟ್ವೀಟನ್ನೇ ಯಥಾವತ್​ ಕಾಪಿ ಮಾಡಿ ನೆಟ್ಟಿಗರ ಟೀಕೆಗೆ ಗುರಿಯಾದ ಸೌಮ್ಯ ಸರ್ಕಾರ್​!

ನವದೆಹಲಿ: ಪರೀಕ್ಷೆಯಲ್ಲಿ ಒಬ್ಬರು ಬರೆದಿದ್ದನ್ನು ಇನ್ನೊಬ್ಬರು ಕಾಪಿ ಮಾಡಿ ಡಿಬಾರ್​ ಆಗುವುದು ಸಾಮಾನ್ಯ. ಆದರೆ, ಒಬ್ಬರು ಕಳುಹಿಸಿದ ಶುಭ ಸಂದೇಶವನ್ನು ಇನ್ನೊಬ್ಬರು ನಕಲು ಮಾಡಿ ಸುದ್ದಿಯಾಗುವುದನ್ನು ಎಲ್ಲಾದರೂ ಕಂಡಿದ್ದೀರಾ? ಇಲ್ಲ ಎಂದಾದರೆ ನಾವು ತೋರಿಸುತ್ತೇವೆ ಮುಂದೆ ಓದಿ…

ಕಳೆದ ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಟೀಂ ಇಂಡಿಯಾದ ಹಿರಿಯ ಆಟಗಾರ ಹಾಗೂ ಎಡಗೈ ದಾಂಡಿಗ ಯುವರಾಜ್​ ಸಿಂಗ್​ಗೆ ವಿಶ್ವದ ಅಗ್ರಗಣ್ಯ ಆಟಗಾರರು ಸೇರಿ ಕ್ರೀಡಾಭಿಮಾನಿಗಳೆಲ್ಲ ಶುಭ ಕೋರಿದರು. ಆದರೆ, ಬಾಂಗ್ಲಾದೇಶದ ಆಟಗಾರ ಸೌಮ್ಯ ಸರ್ಕಾರ್​ ಕೋರಿರುವ ಶುಭಾಶಯ ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದೆ. ಅಷ್ಟಕ್ಕೂ ಅದರಲ್ಲಿ ಏನಿದೆ ಎಂಬ ಕುತೂಹಲ ನಿಮ್ಮಲ್ಲಿ ಮೂಡಿದ್ದರೆ, ಮುಂದೆ ಕಣ್ಣಾಡಿಸಿ.

ನಮ್ಮ ಟೀಂ ಇಂಡಿಯಾ ಗಬ್ಬರ್​ ಸಿಂಗ್​ ಶಿಖರ್​ ಧವನ್​ ಯುವರಾಜ್​ ಸಿಂಗ್​ಗೆ ಶುಭಕೋರಿ, ನಿಮ್ಮ ಮಾರ್ಗದರ್ಶನ, ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು ಯುವಿ ಪಾಜಿ. ನಾನು ಇದುವರೆಗೂ ನೋಡಿದ ಎಡಗೈ ಬ್ಯಾಟ್ಸ್​​ಮನ್​ಗಳಲ್ಲಿ ಅತ್ಯುತ್ತಮ ಬ್ಯಾಟ್ಸ್​ಮನ್​ ಅಂದರೆ ಅದು ನೀವೆ. ನಾನು ಯಾವಾಗಲೂ ನಿಮ್ಮ ಬ್ಯಾಟಿಂಗ್​ ಕೌಶಲ್ಯ ಹಾಗೂ ಶೈಲಿಯನ್ನು ನೋಡುತ್ತಿರುತ್ತೇನೆ. ಅದರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನಿಮ್ಮ ಮುಂದಿನ ಪ್ರಯಾಣದಲ್ಲಿ ಯಶಸ್ಸು ಹಾಗೂ ಏಳಿಗೆ ನಿಮ್ಮದಾಗಲಿ ಎಂದು ಹಾರೈಸುತ್ತೇನೆ ಎಂದು ಧವನ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಶುಭ ಕೋರಿ ಬರೆದುಕೊಂಡಿದ್ದರು.

ಧವನ್​ ಟ್ವೀಟನ್ನೇ ಯಥಾವತ್ತಾಗಿ ಕಾಪಿ ಮಾಡಿ ಸೌಮ್ಯ ಸರ್ಕಾರ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಹಲವರು ಸೌಮ್ಯ ಸರ್ಕಾರ್​ ಅವರನ್ನು ಟೀಕಿಸುತ್ತಿದ್ದಾರೆ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಸೌಮ್ಯ ಸರ್ಕಾರ್​ ವಿಶ್ವಕಪ್​ ಟೂರ್ನಿಯಲ್ಲಿ ಮಗ್ನರಾಗಿದ್ದಾರೆ. (ಏಜೆನ್ಸೀಸ್​)

Thank you, Yuvi paaji You are one of the best left-handed batsmen I have ever seen.I always looked up to your style &…

Soumya Sarkar ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಜೂನ್ 10, 2019