ಹುಬ್ಬಳ್ಳಿ: ಈಶ್ವರ ಡಿಜಿಟ್ರಾನಿಕ್ಸ್ ಸಂಸ್ಥೆಯು ದಾವಣಗೆರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋನಿ ಇಂಡಿಯಾ ಹೊರ ತಂದಿರುವ 75 ಇಂಚಿನ “ಬ್ರಾವಿಯಾ 7′ ಸರಣಿಯ ಮಿನಿ ಎಲ್ಇಡಿ ಟಿ.ವಿ. ಮಾರುಕಟ್ಟೆಗೆ ಬಿಡುಗಡೆಗೊಳಿಸಿತು.
ಸೋನಿ ಇಂಡಿಯಾದ ಬ್ರ್ಯಾಂಚ್ ಮ್ಯಾನೇಜರ್ ನವೀನ ಕೆ.ಎಸ್. ಮಾತನಾಡಿ, ಮನೆಯಲ್ಲೇ ಕುಳಿತು ಚಿತ್ರ ಮಂದಿರದ ಅನುಭವ ಪಡೆಯುವಂತಹ ಟಿ.ವಿ.ಯನ್ನು ಸೋನಿ ಕಂಪನಿ ಹೊರ ತಂದಿದೆ. ಗುಣಮಟ್ಟದ ದೃಶ್ಯ ಹಾಗೂ ಧ್ವನಿ ಸಾಮರ್ಥ್ಯ ಹೊಂದಿದೆ. ಕಾಗ್ನಿಟಿವ್ ಪ್ರೊಸೆಸರ್ ಎಕ್ಸ್ಆರ್ ಟೆಲುಮಿನೋಸ್ ಪ್ರೋ ತಂತ್ರಾನವುಳ್ಳ ಟಿ.ವಿ., ಅದ್ಭುತ ವೀಣೆ ಅನುಭವ ನೀಡುತ್ತದೆ ಎಂದರು.
ಬ್ರಾವಿಯಾ 7′ ಟಿ.ವಿ. ಅನಾವರಣ ವೇಳೆ ಸೋನಿ ಇಂಡಿಯಾದ ಬ್ರ್ಯಾಂಚ್ ಮ್ಯಾನೇಜರ್ ನವೀನ ಕೆ.ಎಸ್. ಮತ್ತು ಈಶ್ವರ ಡಿಜಿಟ್ರಾನಿಕ್ಸ್ ಮ್ಯಾನೆಜಿಂಗ್ ಡೈರೆಕ್ಟರ್ ಬಸವರಾಜ ಎ.ಎಸ್. ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.