Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸಸ್ಪೆನ್ಸ್ ಕಥೆ ಹೇಳ್ತಾರೆ ಸೋನಿಕಾ

Friday, 08.06.2018, 3:05 AM       No Comments

| ರಾಜೇಶ್​ ದುಗ್ಗುಮನೆ, ಬೆಂಗಳೂರು

ಮಾಡೆಲಿಂಗ್ ಹಿನ್ನೆಲೆಯಿಂದ ಬಂದ ನಟಿ ಸೋನಿಕಾ ಗೌಡ ನಟನೆಯ ಚೊಚ್ಚಲ ಚಿತ್ರ ‘ಶತಾಯ ಗತಾಯ’ ಈ ವಾರ (ಜೂ.8) ತೆರೆಕಾಣುತ್ತಿದೆ. ನೈಜ ಕಥೆ ಇಟ್ಟುಕೊಂಡು ಸಂದೀಪ್ ಗೌಡ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಘು ರಾಮಪ್ಪ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನೊಳಗೊಂಡಿರುವ ಈ ಚಿತ್ರದ ಮೇಲೆ ಸೋನಿಕಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

#ನಿಮಗೆ ಚಿತ್ರರಂಗಕ್ಕೆ ಬರುವ ಉದ್ದೇಶವಿತ್ತೇ?

ಕೆಲವರಿಗೆ ಸಿನಿಮಾ ರಂಗಕ್ಕೆ ಬರಬೇಕು ಎಂಬ ಮಹದಾಸೆ ಇರುತ್ತದೆ. ಆದರೆ ಚಿತ್ರರಂಗಕ್ಕೆ ಬರಲು ಸಾಧ್ಯವಾಗಿರುವುದಿಲ್ಲ. ಇನ್ನೂ ಕೆಲವರಿಗೆ ಸಿನಿಮಾ ಕ್ಷೇತ್ರಕ್ಕೆ ಬರುವ ಉದ್ದೇಶವೇ ಇರುವುದಿಲ್ಲ. ಆದರೂ ಅವಕಾಶ ಸಿಕ್ಕಿಬಿಡುತ್ತದೆ. ಇದರಲ್ಲಿ ಎರಡನೇ ಕೆಟಗರಿ ನನ್ನದು. ನಾನು ಈ ಮೊದಲು ಮಲಯಾಳಂ ಆಲ್ಬಂ ಸಾಂಗ್ ಒಂದರಲ್ಲಿ ನಟಿಸಿದ್ದೆ. ಮಾಡೆಲಿಂಗ್​ನಲ್ಲೂ ತೊಡಗಿಕೊಂಡಿದ್ದೆ. ನನಗೆ ಚಿತ್ರರಂಗಕ್ಕೆ ಬರುವ ಯಾವುದೇ ಉದ್ದೇಶ ಇರಲಿಲ್ಲ. ಇದೊಂಥರ ಬಯಸದೆ ಬಂದ ಭಾಗ್ಯ. ನಾನು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಬೆಂಗಳೂರಿಗೆ ಬಂದು 10 ವರ್ಷಗಳಾಗಿವೆ. ಇಲ್ಲಿಗೆ ಬಂದ ನಂತರ ಕನ್ನಡ ಕಲಿತೆ. ಈಗ ನಿರರ್ಗಳವಾಗಿ ಕನ್ನಡ ಮಾತನಾಡುತ್ತೇನೆ.

#’ಶತಾಯ ಗತಾಯ’ ಶೀರ್ಷಿಕೆ ತುಂಬ ಭಿನ್ನವಾಗಿದೆಯಲ್ಲ?

ಈ ಸಿನಿಮಾದ ಶೀರ್ಷಿಕೆಯ ಅರ್ಥ ತಿಳಿದುಕೊಳ್ಳಬೇಕೆಂದರೆ ಚಿತ್ರಮಂದಿರಕ್ಕೆ ಬರಲೇಬೇಕು. ಕಾರಣ ಶೀರ್ಷಿಕೆ ಮೇಲೆ ಕಥೆ ನಿಂತಿದೆ. ಬಹುತೇಕ ಸಿನಿಮಾಗಳಲ್ಲಿ ಪ್ರೀತಿ-ಪ್ರೇಮ ಹೈಲೈಟ್ ಆಗುತ್ತದೆ. ಆದರೆ ನಮ್ಮ ಚಿತ್ರದಲ್ಲಿ ಅದು ಕಥೆಯ ಒಂದು ಭಾಗ ಅಷ್ಟೇ. ‘ಶತಾಯ ಗತಾಯ’ ಮಿಸ್ಟರಿ ರಿವೇಂಜ್. ಜತೆಗೆ ಸಸ್ಪೆನ್ಸ್ ಅಂಶಗಳಿವೆ. ಮಾಸ್ ಜತೆಗೆ ಚಿತ್ರದಲ್ಲಿ ಹಾಸ್ಯದ ಮಿಶ್ರಣವಿದೆ. ಸಸ್ಪೆನ್ಸ್ ಥ್ರಿಲ್ಲರ್ ಅಂಶ ಇರುವುದರಿಂದ ಪ್ರೇಕ್ಷಕನನ್ನು ಕೊನೆಯವರೆಗೆ ಸೀಟಿನ ತುದಿಗೆ ಕೂರುವಂತೆ ಮಾಡುತ್ತದೆ. ಇದು ನೈಜ ಘಟನೆ ಆಧರಿಸಿ ಸಿದ್ಧಗೊಂಡ ಚಿತ್ರ. ವಿಶೇಷ ಎಂದರೆ ಯಾವ ಊರಿನಲ್ಲಿ ಘಟನೆ ನಡೆದಿದೆಯೋ ಅದೇ ಊರಿನಲ್ಲಿ ಈ ಚಿತ್ರದ ಶೂಟಿಂಗ್ ಮಾಡಿದ್ದೇವೆ. ಜತೆಗೆ ಅದಕ್ಕೆ ಸ್ವಲ್ಪ ಕಾಲ್ಪನಿಕವಾದ ಮಸಾಲೆ ಅಂಶವನ್ನೂ ಸೇರಿಸಿದ್ದೇವೆ.

#ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರಲಿದೆ?

ನಗರದಲ್ಲಿ ವಾಸಿಸುತ್ತಿರುವ ನಾನು ಅಪಹರಣಕ್ಕೊಳಗಾಗಿ ಹಳ್ಳಿ ಸೇರಿಕೊಳ್ಳುತ್ತೇನೆ. ಏಕೆ ಕಿಡ್ನ್ಯಾಪ್ ಆಗುತ್ತೇನೆ ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು. ಹಳ್ಳಿಗೆ ಹೋದ ನಂತರ ನಾಯಕನ ಭೇಟಿಯಾಗುತ್ತದೆ. ಅಷ್ಟೇ ಅಲ್ಲ, ಹಳ್ಳಿ ಹುಡುಗಿಯಾಗಿ ಬದಲಾಗುತ್ತೇನೆ. ನಾನು ಊರಿಗೆ ಬಂದ ನಂತರದಲ್ಲಿ ಹಳ್ಳಿಯಲ್ಲಿ ಕೊಲೆಗಳು ನಡೆಯುತ್ತವೆ. ಅದು ಏಕೆ, ಏನು ಎಂಬುದೇ ಚಿತ್ರದ ಹೈಲೈಟ್. ಚಿತ್ರಕ್ಕಾಗಿ ನಟನಾ ತರಬೇತಿ ಪಡೆದವಳಲ್ಲ. ಆದರೂ ಈ ಪಾತ್ರ ಮಾಡುವುದು ನನಗೆ ಕಷ್ಟ ಎನಿಸಲೇ ಇಲ್ಲ.

#ಹಾಡೊಂದರಲ್ಲಿ ವಿಷ್ಣುವರ್ಧನ್ ಅವರ ಕಟೌಟ್ ಹಾಕಲಾಗಿದೆ. ಏನಿದರ ವಿಶೇಷ?

ಚಿತ್ರಕ್ಕೂ ವಿಷ್ಣುವರ್ಧನ್ ಅವರಿಗೂ ಯಾವುದೇ ನೇರ ಸಂಬಂಧವಿಲ್ಲ. ನಿರ್ದೇಶ ಕರು ಮತ್ತು ನಮ್ಮ ಚಿತ್ರತಂಡದ ಎಲ್ಲರಿಗೂ ವಿಷ್ಣುವರ್ಧನ್ ಎಂದರೆ ಇಷ್ಟ. ಹಾಗಾಗಿ ಆ ಹಾಡನ್ನು ಸಿದ್ಧಪಡಿಸಲಾಗಿದೆ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಈ ಹಾಡನ್ನು ಡೆಡಿಕೇಟ್ ಮಾಡುತ್ತಿದ್ದೇವೆ. ಈ ಸಿನಿಮಾದಲ್ಲಿ ಹೀರೋ ಕೂಡ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿರುತ್ತಾನೆ. ಅದೇ ರೀತಿ ಕಥೆ ಹೆಣೆಯಲಾಗಿದೆ.

#ಒಟ್ಟಾರೆ ಚಿತ್ರದಲ್ಲಿ ಯಾವ ಅಂಶ ಇಷ್ಟ ಆಯ್ತು?

ಸಾಮಾನ್ಯವಾಗಿ ಎಲ್ಲರಿಗೂ ಗ್ರಾ್ಯಂಡ್ ಆಗಿ ಎಂಟ್ರಿ ನೀಡಬೇಕು ಎಂಬ ಆಸೆ ಇರುತ್ತದೆ. ಆದರೆ ನಾನು ಈ ಆಶಯಕ್ಕೆ ವಿರುದ್ಧ. ನಾನು ಸಿಂಪಲ್ ಪಾತ್ರದ ಮೂಲಕ ಬಣ್ಣದ ಬದುಕು ಆರಂಭಿಸಬೇಕು ಎಂದುಕೊಂಡಿದ್ದೆ. ಅದೇ ರೀತಿಯ ಪಾತ್ರ ಚಿತ್ರದಲ್ಲಿದೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಪ್ರತಿ ದೃಶ್ಯಕ್ಕೂ ನಾಯಕಿಯ ಉಡುಗೆ ಬದಲಾಗುತ್ತದೆ. ಆದರೆ ಈ ಚಿತ್ರದಲ್ಲಿ ನಾವು ಹಾಗೆ ಮಾಡಿಲ್ಲ. ನನ್ನ ಪಾತ್ರ ಎಷ್ಟು ಸಿಂಪಲ್ ಎಂಬುದಕ್ಕೆ ಇದೊಂದು ಉದಾಹರಣೆ. ಮುಂದಿನ ದಿನಗಳಲ್ಲಿ ನಾನು ಗ್ಲಾಮರ್ ಪಾತ್ರಗಳನ್ನು ಮಾಡಬಹುದು. ಆದರೆ ಮೊದಲ ಚಿತ್ರ ಇದೇ ರೀತಿ ಇರಬೇಕು ಎಂದುಕೊಂಡಿದ್ದೆ. ಚಿತ್ರದಲ್ಲಿ ನನ್ನ ಪಾತ್ರ ತುಂಬ ನೈಜವಾಗಿ ಮೂಡಿ ಬಂದಿದೆ.

#ಸಿನಿಮಾ ಮೇಲೆ ಎಷ್ಟು ನಿರೀಕ್ಷೆ ಇದೆ?

ಮೊದಲ ಚಿತ್ರ ಎಂದರೆ ಸಾಮಾನ್ಯವಾಗಿ ಹೆಚ್ಚಿನ ನಿರೀಕ್ಷೆ ಇರುತ್ತದೆ. ನಾನು ಆ ವಿಚಾರಕ್ಕೆ ಹೊರತಾಗಿಲ್ಲ. ಚಿತ್ರದ ಮೇಲೆ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ನಾವು ಎಷ್ಟೇ ಶ್ರಮವಹಿಸಿದರೂ ಜನರಿಗೆ ಅದು ಇಷ್ಟವಾಗಬೇಕು. ಕಳೆದ ಒಂದು ವರ್ಷದಿಂದ ಸಾಕಷ್ಟು ಆಫರ್​ಗಳು ಬರುತ್ತಿದ್ದವು. ಆದರೆ ಈ ಚಿತ್ರ ತೆರೆಕಂಡ ನಂತರದಲ್ಲೇ ಬೇರೆ ಸಿನಿಮಾ ಮಾಡುವುದು ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದೆ. ಆದರೆ ಈ ರೀತಿ ಮಾಡಿ ನಾನು ತಪು್ಪ ಮಾಡಿದೆನೇನೋ. ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳಬೇಕಿತ್ತು ಎಂದು ಆಗಾಗ ಅನಿಸುತ್ತದೆ. ಆದರೆ ಆಗುವುದೆಲ್ಲವೂ ಒಳ್ಳೆಯದಕ್ಕೆ. ಉತ್ತಮ ಪಾತ್ರ ಸಿಕ್ಕರೆ ಹೊಸ ಚಿತ್ರ ಒಪ್ಪಿಕೊಳ್ಳುತ್ತೇನೆ.

ಶೂಟಿಂಗ್ ಅನುಭವ ಹೇಗಿತ್ತು?

ಆರಂಭದಲ್ಲಿ ನಾನು ಚಿತ್ರರಂಗಕ್ಕೆ ಸೇರಿಕೊಳ್ಳುತ್ತೇನೆ ಎಂದಾಗ ಮನೆಯವರಿಗೆ ಅಷ್ಟಾಗಿ ಇಷ್ಟವಿರಲಿಲ್ಲ. ಆದರೆ ಸಿನಿಮಾ ಮಾಡಿ ಮುಗಿಸಿದ ನಂತರ ಮನೆಯವರೂ ಖುಷಿಪಟ್ಟರು. ಯಾವುದೇ ಅಡಚಣೆ ಇಲ್ಲದೆ ಚಿತ್ರ ತೆರೆಕಾಣುತ್ತಿದೆ. ನಾನು ಒಂದು ಹೊಸಬರ ತಂಡದ ಜತೆ ಕೆಲಸ ಮಾಡಿದೆ ಎಂದು ಅನಿಸಲೇ ಇಲ್ಲ. ಮೊದಲ ಚಿತ್ರವನ್ನು ಒಳ್ಳೆಯ ತಂಡದ ಜತೆಗೆ ಕಳೆದ ಖುಷಿ ಇದೆ. ಕಥೆ ಹಳ್ಳಿಯಲ್ಲೇ ಸಾಗುತ್ತದೆ. ನಾನು ಚಿಕ್ಕಂದಿನಿಂದ ನಗರದಲ್ಲೇ ಹುಟ್ಟಿ ಬೆಳೆದವಳು. ಹಾಗಾಗಿ ನನಗೆ ಹಳ್ಳಿ ವಾತಾವರಣ ಹೊಸತು. ತುಂಬ ಇಷ್ಟಪಟ್ಟೇ ನಟಿಸಿದೆ ಕೂಡ.

Leave a Reply

Your email address will not be published. Required fields are marked *

Back To Top