ಮಸೂದ್​ ಅಜರ್​ ಬಿಡುಗಡೆಗೆ ಸೋನಿಯಾ, ಮನಮೋಹನ್​ ಸಮ್ಮತಿಸಿದ್ದರು: ಅಮಿತ್​ ಷಾ ಹೇಳಿಕೆ

ನವದೆಹಲಿ: ಕಂದಹಾರ್​ ವಿಮಾನ ಅಪಹರಣ ಪ್ರಕರಣವನ್ನು ರಾಜಕೀಕರಣಗೊಳಿಸುತ್ತಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಕ್ರಮಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್​ ಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ, ಉಗ್ರ ಮಸೂದ್​ ಅಜರ್​ ಬಿಡುಗಡೆ ವಿಷಯವಾಗಿ ಅಂದಿನ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮನಮೋಹನ್​ ಸಿಂಗ್​ ಅವರ ಸಮ್ಮತಿ ಇತ್ತು ಎಂದು ಹೇಳಿದ್ದಾರೆ.

ಕಂದಹಾರ್​ ವಿಮಾನ ಅಪಹರಣವಾದ ಸಂದರ್ಭದಲ್ಲಿ ಉಗ್ರರು ಮಸೂದ್​ ಅಜರ್​ ಮತ್ತಿತರ ಉಗ್ರರ ಬಿಡುಗಡೆಗೆ ಆಗ್ರಹಿಸಿದ್ದರು. ಈ ಸಂಬಂಧ ನಿರ್ಧಾರ ಕೈಗೊಳ್ಳಲು ಅಂದಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಸರ್ವಪಕ್ಷಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ಮನಮೋಹನ್​ ಸಿಂಗ್​ ಅವರು ಪಾಲ್ಗೊಂಡಿದ್ದರು. ಅಮಾಯಕ ಪ್ರಯಾಣಿಕ ಜೀವವುಳಿಸುವುದು ಮುಖ್ಯ ಎಂದು ಹೇಳಿ, ಮಸೂದ್​ ಅಜರ್​ನನ್ನು ಬಿಡುಗಡೆ ಮಾಡಲು ಸೋನಿಯಾ ಗಾಂಧಿ ಮತ್ತು ಮನಮೋಹನ್​ ಸಿಂಗ್​ ಸೇರಿ ಆ ಸಭೆಯಲ್ಲಿದ್ದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಸಮ್ಮತಿಸಿದ್ದರು ಎಂದು ಅಮಿತ್​ ಷಾ ವಿವರಿಸಿದ್ದಾರೆ.

ಆದರೆ ಈಗ ಈ ವಿಷಯವನ್ನು ರಾಜಕೀಕರಣಗೊಳಿಸುತ್ತಿರುವ ರಾಹುಲ್​ ಗಾಂಧಿ, ಅಂದಿನ ಸರ್ಕಾರದ ಕ್ರಮವನ್ನು ಈಗ ಪ್ರಶ್ನಿಸುತ್ತಿದ್ದಾರೆ. ಜತೆಗೆ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)