ನಟಿ ಶ್ರೀದೇವಿ ಪುತ್ರಿಯ ಹುಟ್ಟುಹಬ್ಬಕ್ಕೆ ಸೋನಂ ಕಪೂರ್‌ ಹೇಳಿದ ಆ ಮಾತುಗಳು…

ನವದೆಹಲಿ: ಧಡಕ್‌ ಚಿತ್ರದಿಂದ ಬಾಲಿವುಡ್‌ಗೆ ಎಂಟ್ರಿಕೊಟ್ಟ, ದಿವಂಗತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಜನ್ಮದಿನಕ್ಕೂ ಒಂದು ದಿನ ಮುಂಚಿತವಾಗಿ ವಾರಾಣಸಿಯ ಶ್ರೀ ಕಾಶಿ ವಿಶ್ವನಾಥ ದೇಗುಲದಲ್ಲಿ ಕಾಣಿಸಿಕೊಂಡಿದ್ದರು.

ಸೂಪರ್‌ಸ್ಟಾರ್‌ ಸೋದರ ಸಂಬಂಧಿಯಾಗಿರುವ ಸೋನಂ ಕಪೂರ್‌ ಅವರು ಶುಭಾಶಯ ಕೋರಿದ್ದು, “ನನ್ನ ಜನ್ನುವಿಗೆ ಸಿಹಿಯಾದ ಶುಭಾಶಯಗಳು, ಹ್ಯಾಪಿ ಹ್ಯಾಪಿ ಬರ್ತಡೇ ಬೇಬಿ ಜನ್ನು… ನನ್ನ ಪ್ರೀತಿಯ ಹೆಣ್ಣು ಮಗುವಿಗೆ… ನಿನ್ನ ಸುಂದರವಾದ ನಗುವಿನೊಂದಿಗೆ ಯಾವಾಗಲೂ ನಗುತ್ತಲಿರು…” ಎಂದು ಶುಭ ಕೋರಿದ್ದಾರೆ.

ನಟಿ ದಿ.ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್‌ ಅವರ ಪುತ್ರಿಯಾಗಿರುವ ಜಾಹ್ನವಿ ಕಪೂರ್‌ ಅವರಿಗೆ ಖುಷಿ ಕಪೂರ್‌ ಎಂಬ ಸೋದರಿಯಿದ್ದಾಳೆ. ಅಲ್ಲದೆ, ಅರ್ಜುನ್‌ ಕಪೂರ್‌ ಮತ್ತು ಅನ್ಶುಲಾ ಕಪೂರ್‌ ಎಂಬ ಮಲತಾಯಿಯ ಸೋದರ, ಸೋದರಿಯನ್ನು ಹೊಂದಿದ್ದಾರೆ.

ರಣ್‌ವೀರ್‌ ಸಿಂಗ್‌, ಕರೀನಾ ಕಪೂರ್‌ ಖಾನ್‌, ವಿಕ್ಕಿ ಕೌಶಲ್‌, ಅಲಿಯಾ ಭಟ್‌, ಅನಿಕ್‌ ಕಪೂರ್‌ ಮತ್ತು ಭೂಮಿ ಪೆಡ್ನೇಕರ್‌ ನಟನೆಯ ಬಹು ತಾರಾಂಗಣದ ಐತಿಹಾಸಿಕ ಚಿತ್ರದಲ್ಲಿ ಜಾಹ್ನವಿ ಕಪೂರ್‌ ನಟಿಸುತ್ತಿದ್ದು, 2020ರಲ್ಲಿ ಬಿಡುಗಡೆಯಾಗುವ ದೊಡ್ಡ ಚಿತ್ರಗಳಲ್ಲಿ ಒಂದಾಗಿದೆ. (ಏಜೆನ್ಸೀಸ್)